Header Ads Widget

Responsive Advertisement

Essay on Water Pollution 2022 | What is Water Pollution ?

 Essay on Water Pollution - 2022

ಜಲ ಮಾಲಿನ್ಯ - ಪ್ರಬಂಧ
Essay on water pollution, causes of water pollution pollution, what is pollution?
ನೀರು ಮಾನವನ ಜೀವನ ಚಟುವಟಿಕೆಯಲ್ಲಿ ಬಹುಮುಖ್ಯ ಪಾತ್ರವಹಿಸುತ್ತದೆ. ನೀರು ಮಾನವನ ದಿನನಿತ್ಯ ಅತ್ಯಾವಶ್ಯಕತೆಗಳಲ್ಲೊಂದು, ನೀರಿಗೆ ಪರ್ಯಾಯ ವಸ್ತುವಿಲ್ಲ, ನೀರು ಪ್ರತಿ ಜೀವರಾಶಿಗೆ ಪ್ರಾಮುಖ್ಯವಾದದ್ದು, ನೀರು ಇಲ್ಲದೆ ಬದುಕುವುದು ಅಸಾಧ್ಯ.
ಕುಡಿಯಲಿಕ್ಕೆ ನೀರು ಬೇಕು,  ಸ್ನಾನ ಮಾಡಲು, ಬಟ್ಟೆಹೊಗೆಯಲು, ಮನೆಯ ಕಸಮುಸರೆ, ಪಾತ್ರೆಪಗಡೆ ಸ್ವಚ್ಛಗೊಳಿಸಲು, ಬೆಳೆಗಳನ್ನು ಬೆಳೆಯಲು ನೀರು ಬೇಕು. ಪ್ರಾಣಿ ಪಕ್ಷಿಗಳಿಗೆ ನೀರು ಬೇಕು ಭೂಮಿಯ ಮೇಲಿರುವ ಎಲ್ಲಾ ಜೀವರಾಶಿಗಳಿಗೆ ನೀರು ಅತ್ಯವಶ್ಯಕ.


ಜಲ ಮಾಲಿನ್ಯ ಎಂದರೇನು ?
What is Water Pollution?


ಮಾನವನು ತನ್ನ ದಿನನಿತ್ಯ ಚಟುವಟಿಕೆಗಳಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಕೆಲವು ಬೇಡವಾದ ಹಾನಿಕಾರಕ ವಸ್ತುಗಳನ್ನು, ರಾಸಾಯನಿಕ  ಪದಾರ್ಥಗಳನ್ನು ನೀರಿಗೆ ಸೇರಿಸುವುದನ್ನು ಜಲ ಮಾಲಿನ್ಯ ಎಂದು ಕರೆಯುತ್ತಾರೆ

ನೀರು ಒಂದು ನೈಸರ್ಗಿಕ ಸಂಪನ್ಮೂಲ. ಭೂಮಿ ಮೇಲೆ 3/2 ಭಾಗ ನೀರು ಇದೆ. ಮಾನವನು ಆಧುನೀಕರಣ, ನಗರೀಕರಣ ಅನ್ನೋ ನೆಪದಲ್ಲಿ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ನೀರನ್ನು ಮಲಿನ ಮಾಡುತ್ತಿದ್ದಾನೆ.

ಮನುಷ್ಯನಿಗೆ ಉಸಿರಾಡಲು ಗಾಳಿ ಎಷ್ಟು ಮುಖ್ಯವೋ ನೀರು ಕೂಡ ಅಷ್ಟೇ ಮುಖ್ಯ. ಆರೋಗ್ಯವಾದಂತಹ ಜೀವನ ಸಾಗಿಸಬೇಕಾದರೆ ದಿನಕ್ಕೆ 2 ಲೀಟರ್ ಶುದ್ಧ ನೀರು ಕುಡಿಯಬೇಕು.ಹಳ್ಳಿಗಳಲ್ಲಿ ಪಟ್ಟಣಗಳಲ್ಲಿ ಕುಡಿಯಲು ಶುದ್ಧವಾದ ನೀರು ಸಿಗದೆ ಪರದಾಡುವಂತ ಸ್ಥಿತಿ ಎದುರಾಗಿದೆ. ಪ್ರಸ್ತುತ ಈಗಾಗಲೇ ನೀರನ್ನು ಹಣಕೊಟ್ಟು ಕುಡಿಯುವಂತ ಸ್ಥಿತಿ ಬಂದಾಗಿದೆ. 10 ಹನಿಗಳನ್ನು ಕೃತಕವಾಗಿ ಸೃಷ್ಟಿಸಬೇಕಾದರೆ ಕೆಲವು ಕೋಟಿ ರೂಪಾಯಿಗಳು ಖರ್ಚು ಮಾಡಬೇಕಾಗುತ್ತದೆ. ಇದು ಹೀಗೆ ಮುಂದುವರೆದರೆ ಎಲ್ಲರೂ ಅನಾರೋಗ್ಯದಿಂದ ಸಾಯುವಂತಹ ಪರಿಸ್ಥಿತಿ ಶೀಘ್ರದಲ್ಲೇ ಎದುರಾಗುತ್ತದೆ. ಏಕೆಂದರೆ ಕೈಗಾರಿಕರಣದಿಂದ ನಗರೀಕರಣದಿಂದ ಹೊರಬರುವ ಚರಂಡಿ ನೀರು ಘನತಾಜ್ಯ ಪ್ಲಾಸ್ಟಿಕ್ಗಳು ಕೆರೆ ಬಾವಿ ನದಿ ಸಮುದ್ರ ಸೇರುವುದರಿಂದ ಜಲ ಮಾಲಿನ್ಯವಾಗುತ್ತಿದೆ.

ಅತಿಯಾದ ಪ್ಲಾಸ್ಟಿಕ್ ಬಳಕೆಯಿಂದ ನೀರು ಕಲುಷಿತಗೊಳ್ಳುತ್ತಿದೆ. ಪ್ಲಾಸ್ಟಿಕ್ ಬಾಟಲ್ ಗಳು, ಪ್ಲಾಸ್ಟಿಕ್ ಚೀಲಗಳು ಕೆರೆ, ಬಾವಿ, ನದಿ ಸೇರಿ ಕೊಳೆತು ನೀರು ವಿಷಕಾರಿಯಾಗಿ ತಯಾರಾಗುತ್ತಿದೆ.
ಕಾರ್ಖಾನೆಗಳಿಂದ ಹೊರಬರುವ ಚರಂಡಿ ನೀರು ನೇರವಾಗಿ ನದಿಗೆ ಹರಿದು ಬಿಡುವುದರಿಂದ ನದಿನೀರು ಕುಡಿಯಲಿಕ್ಕೆ ಬಾರದಂತಾಗಿದೆ, ನದಿಯಲ್ಲಿನ ಜಲಚರ ಜೀವಿಗಳು ಸಾಯುತ್ತಿವೆ. ಹೊಲಗಳಿಗೆ ಬಳಸುವ ಕ್ರಿಮಿನಾಶಕ ಕೀಟನಾಶಕ ರಸಗೊಬ್ಬರಗಳನ್ನು ಅತಿಯಾಗಿ ಬಳಸುವುದರಿಂದ ನೀರು ಮಲಿನವಾಗಿದೆ ಕುಡಿಯಲಿಕ್ಕೆ ಅಶುದ್ಧವಾಗಿವೆ.


ಜಲಮಾಲಿನ್ಯಕ್ಕೆ ಕಾರಣಗಳು (Causes of Water Pollution)

1. ಕೈಗಾರಿಕೆಗಳ ಅಸಮರ್ಪಕ ತ್ಯಾಜ್ಯ ನಿರ್ವಹಣೆ:

ಮಾನವನು ತನ್ನ ಕ್ಷಣಿಕ ಸುಖಕ್ಕಾಗಿ, ಸ್ವಾರ್ಥದ ಲಾಭಕ್ಕಾಗಿ ಪ್ರಕೃತಿಯನ್ನು ಸಂಪೂರ್ಣವಾಗಿ ಹಾಳು ಮಾಡುತ್ತಿದ್ದಾನೆ. ಕೈಗಾರಿಕೆಗಳಿಂದ ಹೊರಬರುವ ವಿಷಕಾರಿ ಮತ್ತು ಮಾಲಿನ್ಯಕಾರಕ ತ್ಯಾಜ್ಯವನ್ನು ನೇರವಾಗಿ ಕೆರೆ, ಕಾಲುವೆ, ನದಿ, ಸಮುದ್ರಕ್ಕೆ ಹರಿದು ಬಿಡುವುದರಿಂದ ಜಲಮಾಲಿನ್ಯ ಉಂಟಾಗುವುದರ ಜೊತೆಜೊತೆಗೆ ಜಲಚರ ಜೀವಿಗಳು ಸಾವನ್ನಪ್ಪುತ್ತಿವೆ.

2. ಚರಂಡಿ ನೀರಿನ ಅಸಮರ್ಪಕ ವಿಲೇವಾರಿ:

ಪ್ರತಿ ಮನೆ-ಮನೆಯಿಂದ ಹರಿದು ಬರುವ ಕೊಳಚೆ ನೀರು ಕಾಲುವೆಯಾಗಿ ಕೆರೆ, ಕಾಲುವೆ, ನದಿ ಸೇರುತ್ತವೆ. ಚರಂಡಿ ನೀರು ಅನೇಕ ವಿಧವಾದ ರೋಗಕಾರಕಗಳು, ಬ್ಯಾಕ್ಟೀರಿಯಾಗಳನ್ನು ಕೊಂಡೊಯ್ಯುವುದರಿಂದ  ಗಂಭೀರವಾದ ಮಲೇರಿಯಾ, ಕಾಲರಾ, ಬೇಧಿ ಮತ್ತು ವಾಂತಿ ಮುಂತಾದ ಅನಾರೋಗ್ಯ  ಸಮಸ್ಯೆಗಳು ಉದ್ಭವಿಸುತ್ತವೆ.

3. ಸಾಮಾಜಿಕ ಮತ್ತು ಧಾರ್ಮಿಕ ಆಚರಣೆಗಳು:

ಪ್ರಮುಖವಾಗಿ ಭಾರತ ಧಾರ್ಮಿಕ ಆಚರಣೆಗಳಿಂದ ಕೂಡಿದ ದೇಶ, ಈ ಹಬ್ಬ ಆಚರಣೆಗಳನ್ನು ಮಾಡುವುದಕ್ಕೋಸ್ಕರ ಜನರು ಮಾರುಕಟ್ಟೆಯಿಂದ ಎಲ್ಲಾ ತರಹದ ಸಾಮಗ್ರಿಗಳನ್ನು ತರುವುದಕ್ಕಾಗಿ ಪ್ಲಾಸ್ಟಿಕ್ ಚೀಲಗಳನ್ನು, ನೀರಿನ ಬಾಟಲಿಗಳನ್ನು ಉಪಯೋಗಿಸುತ್ತಾರೆ, ಹೀಗೆ ಉಪಯೋಗಿಸಿದ ಪ್ಲಾಸ್ಟಿಕ್ ಚೀಲಗಳು ನೀರಿನ ಬಾಟಲಿಗಳು ಗಾಜಿನ ತುಂಡುಗಳು ಅಲ್ಯುಮಿನಿಯಂ, ಸೀಸ ಇತ್ಯಾದಿಗಳನ್ನು ಎಲ್ಲೆಂದರಲ್ಲಿ ಬಿಸಾಡುವುದರಿಂದ ಅವು ಕೊನೆಗೆ ಕೆರೆ, ಕಾಲುವೆ, ನದಿ ಸೇರುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ.

4. ನಗರೀಕರಣ:

ಜಲಮಾಲಿನ್ಯಕ್ಕೆ ಮತ್ತೊಂದು ಪ್ರಮುಖ ಕಾರಣವೇನೆಂದರೆ ಅದು ನಗರೀಕರಣ. ಬೆಳೆಯುತ್ತಿರುವ ಜನಸಂಖ್ಯೆಗೆ ತಕ್ಕಂತೆ ಆಹಾರ, ಬಟ್ಟೆ, ವಸತಿ ನಿರ್ಮಾಣ ಹಂತದಲ್ಲಿ ಅತಿಯಾದ ಪ್ಲಾಸ್ಟಿಕ್ ಬಳಕೆ ಮಾಡುವುದು. ಆಹಾರ ತಯಾರಿಸಲು ತ್ವರಿತವಾಗಿ ಬೆಳೆಯಲು ಅತಿಯಾದ ಕ್ರಿಮಿ-ಕೀಟನಾಶಕ, ರಸಗೊಬ್ಬರಗಳನ್ನು ಬಳಸುವುದು. ಅಸಮರ್ಪಕ ಚರಂಡಿ ವ್ಯವಸ್ಥೆ ಇನ್ನಿತರ ಕಾರಣಗಳ ಮೂಲಕ ಜಲ ಮಾಲಿನ್ಯ ಉಂಟಾಗುತ್ತಿದೆ.

5. ಗಣಿಗಾರಿಕೆಗಳು:

ಮನುಷ್ಯ ದಿಡೀರನೆ ಶ್ರೀಮಂತನಾಗಬೇಕೆಂಬ ಬಯಕೆಯಿಂದ ತನ್ನ ಸುತ್ತಮುತ್ತಲಿನ ಪರಿಸರವನ್ನು ತಾನೇ ಸ್ವತಃ ಹಾಳು ಮಾಡಿಕೊಳ್ಳುತ್ತಿದ್ದಾನೆ. ಗಣಿಗಾರಿಕೆಯಿಂದ ಭೂಗರ್ಭದಲ್ಲಿರುವ ಕಚ್ಚಾ ಪದಾರ್ಥಗಳನ್ನು ಹೊರತೆಗೆದು ಸಂಸ್ಕರಿಸುವ ಪ್ರಕ್ರಿಯೆಯಲ್ಲಿ ಕೆಲವು ಹಾನಿಕಾರಕ ರಾಸಾಯನಿಕಗಳನ್ನು ನೀರಿಗೆ ಹರಿದುಬಿಟ್ಟಾಗ ನೀರು ಮಾಲಿನ್ಯವಾಗುತ್ತದೆ.

6. ಸಾಗರ ಡಂಪಿಂಗ್:

ಮನೆಯಲ್ಲಿ ಬಳಸಿದ ಇನ್ನು ಮುಂದೆ ಉಪಯೋಗಕ್ಕೆ ಬಾರದ ಕಚ್ಚಾ ಅಥವಾ ವೇಸ್ಟ್ ಪದಾರ್ಥಗಳಾದ ಪ್ಲಾಸ್ಟಿಕ್ ಚೀಲಗಳು, ಪ್ಲಾಸ್ಟಿಕ್ ಬಾಟಲಿಗಳು, ಗಾಜಿನ ಚೂರುಗಳು, ಅಲ್ಯುಮಿನಿಯಂ, ಕಸ, ರಬ್ಬರ್ ಮತ್ತು ಇನ್ನಿತರ ವೆಸ್ಟ್ ಪದಾರ್ಥಗಳನ್ನು ತಗೊಂಡು ಸಮುದ್ರಕ್ಕೆ ಎಸೆಯುತ್ತಾರೆ.
ಪ್ರತಿವರ್ಷ 200 - 250 ಮಿಲಿಯನ್ ಟನ್ನುಗಳಷ್ಟು ಕಸ ಸಮುದ್ರ ಸೇರುತ್ತದೆ. ಇದರಿಂದಾಗಿ ನೀರಿನಲ್ಲಿ ಆಮ್ಲಜನಕ ಕಡಿಮೆಯಾಗಿ ಜಲಚರ ಜೀವಿಗಳಾ ಡಾಲ್ಫಿನ್, ತಿಮಿಂಗಲ, ಪೆಂಗ್ವಿನ್, ಸೀಲ್ ಮತ್ತು ಮೀನು ಇನ್ನಿತರ ಜಲಚರ ಜೀವಿಗಳು  ಸಾಯುತ್ತಿವೆ.

7. ರಸಗೊಬ್ಬರಗಳ ಅತಿಯಾದ ಬಳಕೆ:

ತ್ವರಿತಗತಿಯಲ್ಲಿ ಬೆಳೆಯಲು ಹೊಲಗಳಿಗೆ ಅತಿಯಾದ ರಸಗೊಬ್ಬರ ಮತ್ತು  ಕೀಟನಾಶಕಗಳ ಬಳಕೆಯಿಂದ ಮಣ್ಣು ಫಲವತ್ತತೆ ಕಳಕೊಳ್ಳುವುದರ  ಜೊತೆಗೆ ಕ್ರಿಮಿನಾಶಕ, ಕೀಟನಾಶಕ ಮತ್ತು ರಸಗೊಬ್ಬರಯುಕ್ತ ನೀರನ್ನು ಕೆರೆ, ನದಿ, ಕಾಲುವೆಗಳಿಗೆ ಬಿಡುವುದರಿಂದ ಜಲಮಾಲಿನ್ಯ ಉಂಟಾಗುತ್ತದೆ.

8. ತೈಲ ಸೋರಿಕೆ:

ಸಾಗರಗಳ ಮೂಲಕ ತೈಲವನ್ನು ಆಮದು - ರಫ್ತು ಮಾಡಿಕೊಳ್ಳುವ ಪ್ರಕ್ರಿಯೆಯಲ್ಲಿ ತೈಲ ಸೋರಿ ಸಮುದ್ರ ಸೇರುತ್ತದೆ. ಇದರಿಂದ ನೀರು ಮಾಲಿನ್ಯ ಉಂಟಾಗುವುದರ ಜೊತೆಗೆ ಅನೇಕ ವಿಧವಾದ ಜಲಚರ ಜೀವಿಗಳು ಅವನತಿ ಹೊಂದುತ್ತವೆ ಮತ್ತು ತೈಲ ಸಾಗರದ ನೀರಿನಲ್ಲಿ ಬೆರೆಯುವುದಿಲ್ಲ. ಪ್ರತಿವರ್ಷ ತೈಲ ಸೋರಿಕೆಯಿಂದಾಗಿ 3 ಮಿಲಿಯನ್ ಬ್ಯಾರೆಲ್ ಗಳಷ್ಟು ತೈಲ ಸಾಗರ ಸೇರುತ್ತದೆ.


ಜಲ ಮಾಲಿನ್ಯದಿಂದುಟಾಗುವ ಪರಿಣಾಮಗಳು

(Effects of Water Pollution)

 1. ವಿಶ್ವ ಆರೋಗ್ಯ ಸಂಸ್ಥೆ ಅಂದಾಜಿನ ಪ್ರಕಾರ ಪ್ರತಿವರ್ಷ 38 - 40 ಲಕ್ಷ ಜನ ಕಲುಷಿತವಾದ ನೀರನ್ನು ಕುಡಿಯುವುದರಿಂದ ಅನಾರೋಗ್ಯದಿಂದ ಸಾಯುತ್ತಿದ್ದಾರೆ.
 2. ಭೂಮಿಯ ಮೇಲಿನ ಎಲ್ಲ ಜೀವರಾಶಿಗಳಿಗೆ ಬದುಕುಳಿಯಲು ಕುಡಿಯುವ ನೀರಿನ ಕೊರತೆ ಉಂಟಾಗುತ್ತದೆ.
 3. ಕಲುಷಿತವಾದ ನೀರನ್ನು ಕುಡಿಯುವುದರಿಂದ ಕಾಲರಾ, ಜಾಂಡಿಸ್, ಟೈಫಾಯ್ಡ್, ಬೇಧಿ ಮತ್ತು ಅತಿಸಾರ ಮುಂತಾದ ಮಾರಣಾಂತಿಕ ರೋಗಗಳು ಸಂಭವಿಸುತ್ತವೆ.
 4. ಕಲುಷಿತವಾದ ನೀರನ್ನು ಹೊಲಗಳಿಗೆ ಬಿಟ್ಟಾಗ ಮಣ್ಣು ಅಥವಾ ಭೂಮಿ ಫಲವತ್ತತೆಯನ್ನು ಕಳೆದುಕೊಳ್ಳುತ್ತದೆ.
 5. ಕಲುಷಿತವಾದ ನೀರನ್ನು ಪ್ರಾಣಿ-ಪಕ್ಷಿಗಳು ಕುಡಿಯುವುದರಿಂದ ಅವುಗಳ ಸಂತಾನೋತ್ಪತ್ತಿಯ ಮೇಲೆ ಪರಿಣಾಮ ಬೀರುತ್ತದೆ.


ಜಲ ಮಾಲಿನ್ಯಕ್ಕೆ ಪರಿಹಾರೋಪಾಯಗಳು (Solution for Water Pollution)

 1. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವುದು ಜೊತೆಗೆ ಮರು ಉಪಯೋಗ ಮಾಡುವುದು
 2. ರಾಸಾಯನಿಕ ಗೊಬ್ಬರಗಳಿಗೆ ಬದಲಾಗಿ ಪರಿಸರಸ್ನೇಹಿ ಅಥವಾ ಸಾವಯವ ಗೊಬ್ಬರವನ್ನು ಉಪಯೋಗಿಸುವುದು.
 3. ಕೊಳಚೆ ನೀರು ಅಥವಾ ಚರಂಡಿ ನೀರು ನೇರವಾಗಿ ಕೆರೆ ನದಿಗಳಿಗೆ ಬಿಡದೆ ಗುಂಡಿ ತೋಡಿ ಗುಂಡಿಯಲ್ಲಿ ಚರಂಡಿ ನೀರನ್ನು ವಿಲೇವಾರಿ ಮಾಡುವುದು. ಇದರಿಂದ ಅಂತರ್ಜಲ ಮಟ್ಟ ಕೂಡಾ ಹೆಚ್ಚಾಗುತ್ತದೆ.
 4. ಕೈಗಾರಿಕೆಗಳ ಘನತ್ಯಾಜ್ಯ ವಸ್ತುಗಳನ್ನು ಮರುಬಳಕೆ ಮಾಡುವುದು
 5. ಅರಣ್ಯನಾಶವನ್ನು ತಡೆಗಟ್ಟುವುದು
 6. ಸುಟ್ಟ ಶವಗಳ ಬೂದಿಯನ್ನು ನದಿಯಲ್ಲಿ ಚಿತಾಭಸ್ಮ ಮಾಡುವುದನ್ನು ನಿಲ್ಲಿಸಬೇಕು.
 7. ನೇರವಾಗಿ ನದಿಯಲ್ಲಿ ದನಕರುಗಳಿಗೆ ಸ್ಥಾನ ಮಾಡುವುದನ್ನು ನಿಲ್ಲಿಸಬೇಕು.

ಜಲ ಮಾಲಿನ್ಯವು ಒಂದು ಜಾಗತಿಕ ಸಮಸ್ಯೆಯಾಗಿದೆ, ಎಲ್ಲಾ ದೇಶಗಳ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪ್ರತಿಯೊಬ್ಬರಿಂದಲೂ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಯಾವುದೋ ಒಂದು ರೀತಿಯಿಂದ ಜಲಮಾಲಿನ್ಯ ಉಂಟುಮಾಡುತ್ತಿದ್ದೇವೆ. ಜಲಮಾಲಿನ್ಯ ಅನೇಕ ಕಾರಣಗಳಿಂದ ಉಂಟಾಗುತ್ತಿದೆ.
ಸರ್ಕಾರ ಮತ್ತು ಜನರು ಈಗಲಾದರೂ ಎಚ್ಚೆತ್ತುಕೊಂಡು ಜಲ ಮಾಲಿನ್ಯವನ್ನು ನಿಯಂತ್ರಿಸುವಲ್ಲಿ ಸಹಕರಿಸಬೇಕು


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು