Header Ads Widget

Responsive Advertisement

Former suicide in India Essay 2022

 

Former suicide in India Essay

ಭಾರತದಲ್ಲಿ ರೈತರ ಆತ್ಮಹತ್ಯೆ - ಪ್ರಬಂಧEssay on Former suicide in India 2022 | Causes of former suicide


ಭಾರತ ಒಂದು ಕೃಷಿ-ಆಧಾರಿತ ದೇಶ, ಕೃಷಿಯನ್ನು ಪ್ರಧಾನವಾಗಿ ಅಳವಡಿಸಿಕೊಂಡಿರುವ ಕೃಷಿ ಅವಲಂಬಿತ ದೇಶ ಭಾರತ. ಭಾರತ ಹಳ್ಳಿಗಳ ದೇಶ ಭಾರತದ ಆರ್ಥಿಕತೆಯ ಬೆಳವಣಿಗೆಯ ದೃಷ್ಟಿಯಿಂದ ಕೃಷಿಗೆ ಪ್ರಾಧಾನ್ಯ ನೀಡಬೇಕು ಮತ್ತು ಗ್ರಾಮಗಳ ಅಭಿವೃದ್ಧಿಗೆ ಗಮನಹರಿಸಬೇಕು. ರಾಷ್ಟ್ರದ ಖಜಾನೆಗೆ 60 - 70 ರಷ್ಟು ಆದಾಯ ಕೃಷಿ ಕ್ಷೇತ್ರದಿಂದಲೇ ಬರುತ್ತದೆ.

ಭಾರತವು ಕೃಷಿಯನ್ನು ಆಶ್ರಯಿಸಿಕೊಂಡಿರುವ ಜಗತ್ತಿನ ಎರಡನೇ ದೊಡ್ಡ ರಾಷ್ಟ್ರ, ಭಾರತದಲ್ಲಿ ಬೆಳೆದಂತ ಬೆಳೆಗಳಿಗೆ, ತರಕಾರಿ, ಹಣ್ಣು, ಹೂ ಮತ್ತು ಸಾಂಬಾರ್ ಪದಾರ್ಥಗಳಾದ ಏಲಕ್ಕಿ, ದಾಲ್ಚಿನ್ನಿ ಮತ್ತು ಲವಂಗ ಹೊರದೇಶಗಳಿಂದ  ಅತಿ ಹೆಚ್ಚು ಬೇಡಿಕೆ ಇತ್ತು.
ಭಾರತ ದೇಶದಲ್ಲಿ 70ಕ್ಕಿಂತಲೂ ಹೆಚ್ಚು ಜನರು ಕೃಷಿಯನ್ನು ಅವಲಂಬಿಸಿದ್ದಾರೆ. ಇಂತಹ ಕೃಷಿ ಪ್ರಧಾನವಾದ ಭಾರತ ದೇಶದಲ್ಲಿ ಉಳುಮೆ ಮಾಡುವ ರೈತರಿಗೆ ಬೆಲೆಯಿಲ್ಲದಂತಾಗಿದೆ, ಕೃಷಿ ಮಾಡುವ ಕೃಷಿಕರಿಗೆ ಜೀವಿಸಲು ಬಹು ಕಷ್ಟಕರವಾಗಿದೆ, ದೇಶಕ್ಕೆ ಅನ್ನ ಕೊಡುವ ರೈತರಿಗೆ ಸರಿಯಾದ ಬೆಲೆ ಸರ್ಕಾರಗಳು ಕೊಡುತ್ತಿಲ್ಲ. ಅಳಿವಿನಂಚಿನಲ್ಲಿರುವ ರೈತ ಬದುಕುಳಿಯುವುದು ಘೋರತರವಾಗಿದೆ. ಸಾಲದಲ್ಲಿ ಹುಟ್ಟಿ ಸಾಲದಲ್ಲಿ ಬದುಕಿ ಸಾಲದಲ್ಲೇ ಸಾಯಬೇಕಾಗಿದೆ. ರೈತರ ನೋವಿನ ನರಳಾಟದಲ್ಲಿ ಸರಕಾರಗಳು ಕಣ್ಣು ಕಿವಿ ಮೂಗು ಬಾಯಿ ಎಲ್ಲವನ್ನೂ ಮುಚ್ಚಿಕೊಂಡು ಕುಳಿತಿದೆ.

ರೈತರು ದುಬಾರಿಯಾದ (ತುಟ್ಟಿಯಾದ) ಬಿತ್ತನೆ ಬೀಜವನ್ನು , ಕ್ರಿಮಿನಾಶಕ, ಕಳೆನಾಶಕ ಮತ್ತು ಗೊಬ್ಬರವನ್ನು ತಂದು ಹೇಗಾದರೂ ಮಾಡಿ ಕಷ್ಟಪಟ್ಟು ಬೆಳೆದರೆ, ಬೆಳೆದಂತಹ ಬೆಳೆಗೆ ಸರಿಯಾದ ಬೆಲೆ ಸಿಗದೇ ರೈತರು ಕಂಗಾಲಾಗಿದ್ದಾರೆ, ಸಾಲಕ್ಕೆ ಬಡ್ಡಿಯನ್ನು ತೀರಿಸಲಾಗದೆ, ಸಾಲ ಕೊಟ್ಟವರ ಬಾಧೆ ತಾಳಲಾರದೆ  ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ, ಆತ್ಮಹತ್ಯೆ ಮಾಡಿಕೊಂಡ ರೈತರ ಕುಟುಂಬಕ್ಕೆ ನಷ್ಟ ಪರಿಹಾರ ನೀಡಲು ಸಹ ಯಾವ ನಾಯಕರುಗಳು ಸರ್ಕಾರವು ಮುಂದೆ ಬರುತ್ತಿಲ್ಲ, ಅವರ ಪರವಾಗಿ ಧ್ವನಿ ಎತ್ತುತ್ತಿಲ್ಲ ಅನಾಥರಾಗಿ ಸಾಯುತ್ತಿದ್ದಾರೆ.
ರೈತರ ಬೆಳೆಗಳಿಗೆ ರಕ್ಷಣೆ ಇಲ್ಲದಿರುವುದು, ಗಾಳಿ ಮಳೆ ಬಿಸಿಲಿಗೆ ಬೆಳೆದ ಬೆಳೆ ತರಕಾರಿ, ಹಣ್ಣುಗಳು ಧಾನ್ಯಗಳು ಸಂಗ್ರಹಿಸಲು ಸ್ಥಳವಿಲ್ಲದೆ ನಾಶವಾಗುತ್ತಿದೆ. ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ.

ಪ್ರತಿವರ್ಷ ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ,
ನ್ಯಾಷನಲ್ ಕ್ರೈಂ ರೆಕಾರ್ಡ್ಸ್ ಬ್ಯೂರೋ ವರದಿಯ ಪ್ರಕಾರ ಪ್ರತಿವರ್ಷ 2145 - 2450 ರೈತರು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ.

ಕೆಲವೊಂದು ಸಲ ಪ್ರಕೃತಿ ವಿಕೋಪಗಳಿಂದ ಬೆಳೆ ಹಾನಿ, ಪ್ರಾಣ ಹಾನಿ ಉಂಟಾಗುತ್ತದೆ, ಹೊಟ್ಟೆ ತುಂಬ ಕೂಳು ತಿನ್ನದೆ‌ ಕಣ್ತುಂಬ ನಿದ್ದೆ ಮಾಡದೆ ಹಗಲಿರುಳು ಗಾಳಿ-ಮಳೆ, ಚಳಿ-ಬಿಸಿಲು, ಕಲ್ಲು-ಮುಳ್ಳು ಎನ್ನದೆ  ತನ್ನ ಬದುಕಿನ ಗೂಡನ್ನು ಕಟ್ಟಿಕೊಳ್ಳಲಾಗದ ಈ ಕರ್ಮಯೋಗಿಗೆ ಕರ್ಮಫಲ ಪ್ರಾಪ್ತವಾಗುತ್ತಿಲ್ಲ. ಅಕಾಲಿಕ ಮಳೆ, ಬರಗಾಲ, ಸರ್ಕಾರದ ನಿರ್ಲಕ್ಷತನ, ವ್ಯಾಪಾರಿಗಳ ಕುಟಿಲತನ ರೈತನನ್ನು ಕಡೆಗಾಣಿಸಿವೆ. ರೈತರು ಸುರಿಸುವ ಬೆವರಿಗೆ ಬೆಲೆ ಇಲ್ಲದಂತಾಗಿ ಮಾಡಿವೆ.
ಯಾವ ಸರ್ಕಾರವೂ ಕೂಡ ರೈತರ ಪರವಾಗಿ ಧ್ವನಿ ಎತ್ತುತ್ತಿಲ್ಲ, ಮುಂದೆ ಬಂದರೂ ರೈತರ ಹೆಸರಿನಲ್ಲಿ ತಮ್ಮ ಬೇಳೆ ಬೇಯಿಸಿಕೊಳ್ಳುತ್ತಿದ್ದಾರೆ.
ಯಾವ ನಾಯಕನಿಗೂ ರಾಜಕಾರಣಿಗೂ ಅಧಿಕಾರಿಗಳಿಗೂ ರೈತರ ಬಗ್ಗೆ ಕಾಳಜಿ ಇಲ್ಲ, ಅವನ ಬೆವರಿಗೆ ಸರಿಯಾದ ಪ್ರತಿಫಲ ದೊರಕುತ್ತಿಲ್ಲ. ತನ್ನ ಬದುಕನ್ನು ಹಸನು ಮಾಡುವ ಯಾವ ದಾರಿಯೂ ಕಾಣುತ್ತಿಲ್ಲ. ಎಲ್ಲವನ್ನು ಹೋರಾಟದಿಂದಲೇ ಪಡೆಯುವಂತಹ ಸನ್ನಿವೇಶಗಳು ನಿರ್ಮಾಣಗೊಂಡಿವೆ. ರೈತರ ಗೋಳು ಕಂಡು ಕಾಣದ  ಕೇಳಿ ಕೇಳದ ಈಗೀನ ಸರ್ಕಾರಗಳು ಮಂಕಾಗಿವೆ.

ಆತ್ಮಹತ್ಯೆಗೆ ಪ್ರಮುಖ ಕಾರಣಗಳು
 • ಅಕಾಲಿಕ ಮಳೆ
 • ಅನಾವೃಷ್ಟಿ - ಅತಿವೃಷ್ಟಿ
 • ವೈಜ್ಞಾನಿಕ ಬೇಸಾಯ ಪದ್ಧತಿ
 • ಸಾಲಬಾದೆ - ಅಧಿಕ ಬಡ್ಡಿದರ
 • ಸರಕಾರದ ಯೋಜನೆಗಳಿಂದ ವಂಚನೆ
 • ಸರ್ಕಾರದ ನೀತಿ ದೋರಣೆ & ನಿರ್ಲಕ್ಷತನ
 • ಬಡತನ ವಿಷವೃತ್ತ
 • ಪ್ರಕೃತಿ ವಿಕೋಪಗಳು
 • ಕಡಿಮೆ ಬೆಳೆ ಇಳುವರಿ
 • ಬೆಳೆಗಳಿಗೆ ನೀರಿನ ಕೊರತೆ (ಕೊಳವೆ ಬಾವಿ ವೈಫಲ್ಯ)
 • ಸಾರಿಗೆ ಸಮಸ್ಯೆಗಳು
 • ಅಸ್ಥಿರ ಮಾರುಕಟ್ಟೆ
 • ಬೆಲೆ ಕುಸಿತ
 • ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ
   ಇದರ ಜೊತೆಗೆ ರೈತರ ಆತ್ಮಹತ್ಯೆಗೆ ಮಧ್ಯಪಾನ ವ್ಯಸನವೂ ಒಂದು, ಅತಿಯಾದ ಕುಡಿಕತನದಿಂದ ಸಾಲ ತೀರಿಸಲಾಗದೆ, ಕುಟುಂಬದ ಜವಾಬ್ದಾರಿಗಳನ್ನು ಹೊರಲಾರದೆ ಒತ್ತಡಕ್ಕೆ ಮಣಿದು ನೇಣಿಗೆ ಶರಣಾಗುತ್ತಿದ್ದಾರೆ.
        ಸರ್ಕಾರ ಇದರ ಕುರಿತು ಗ್ರಾಮೀಣ ಭಾಗದಲ್ಲಿ ದುಷ್ಚಟಗಳ ನಿರ್ಮೂಲನೆಗಾಗಿ ಸಾಮಾಜಿಕ ಜಾಗೃತಿ ಮೂಡಿಸಬೇಕು.

ಈಗಲಾದರೂ ಸರ್ಕಾರ ಎಚ್ಚೆತ್ತುಕೊಂಡು ರೈತರ ಕಡೆ ಗಮನಹರಿಸಿ ರೈತರ ಏಳಿಗೆಗಾಗಿ, ರೈತರ ಬೆಳವಣಿಗೆಗಾಗಿ, ದೇಶದ ಅಭಿವೃದ್ಧಿಗಾಗಿ ರೈತರು ಬೆಳೆದ ಬೆಳೆಗೆ ಸರಿಯಾದ ಬೆಲೆಯನ್ನು ನಿಗಧಿಪಡಿಸಿ ಮತ್ತು ಗ್ರಾಮೀಣ ಭಾಗದಲ್ಲಿ ರೈತರನ್ನು ಉತ್ತೇಜಿಸುವ ಕಾರ್ಯಕ್ರಮಗಳನ್ನು ಜಾರಿಗೊಳಿಸುವ ಮೂಲಕ ದೇಶದ ಬೆನ್ನೆಲುಬಾದ ರೈತರಿಗೆ  ಕೃಷಿ ವ್ಯವಸ್ಥೆಯನ್ನು ಸುಧಾರಿಸಲು ಸರ್ಕಾರವು ಕ್ರಮ ಕೈಗೊಳ್ಳಬೇಕು.


ರೈತರ ಆತ್ಮಹತ್ಯೆ ತಡೆಗೆ ಪರಿಹಾರಗಳು
 • ಸಾಂಪ್ರದಾಯಿಕ ಪದ್ಧತಿಯ ಬದಲಿಗೆ ವೈಜ್ಞಾನಿಕ ಪದ್ಧತಿಯನ್ನು ಅಳವಡಿಸಲು ಸೂಚಿಸುವುದು
 • ಬಿತ್ತನೆ ಬೀಜಗಳು, ರಸಗೊಬ್ಬರಗಳು ಮತ್ತು ಕೀಟನಾಶಕಗಳು ಸಬ್ಸಿಡಿ ದರದಲ್ಲಿ ಒದಗಿಸುವುದು
 • ಅಕಾಲಿಕ ಮಳೆಯ ಕೊರತೆಯನ್ನು ನೀಗಿಸಲು ನೀರಾವರಿ ಸೌಲಭ್ಯವನ್ನು ಒದಗಿಸಬೇಕು
 • ಆಧುನಿಕ ತಂತ್ರಜ್ಞಾನಗಳನ್ನು ಅಳವಡಿಸಲು ಪ್ರೋತ್ಸಾಹಿಸುವುದು ಮತ್ತು ಅವುಗಳ ಬಗ್ಗೆ ತರಬೇತಿ ನೀಡುವುದು
 • ಕನಿಷ್ಠ ಬೆಂಬಲ ಬೆಲೆ ದೊರಕಿಸುವುದು
 • ಸಾರಿಗೆ ವ್ಯವಸ್ಥೆಯನ್ನು ಸುಗಮಗೊಳಿಸುವುದು
 • ಬೆಳೆ ನಷ್ಟವನ್ನು ತುಂಬಲು ವಿಮಾ ಪಾಲಿಸಿಯನ್ನು ಮಾಡಿಸುವುದು
 • ಕೃಷಿ ಚಟುವಟಿಕೆಗಳ ಬಗ್ಗೆ ಮತ್ತು ಕಾನೂನಿನ ಬಗ್ಗೆ ಗ್ರಾಮೀಣ ಭಾಗದಲ್ಲಿ ಅರಿವು ಮೂಡಿಸುವುದು
 • ಬಡ್ಡಿರಹಿತ ಸಾಲವನ್ನು ನೀಡುವುದು ಅಥವಾ ಸಬ್ಸಿಡಿ ದರದಲ್ಲಿ ಸಾಲವನ್ನು ಒದಗಿಸುವುದು
 • ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿಯನ್ನು ತಪ್ಪಿಸಿ ಬೆಳೆದ ಬೆಳೆಗೆ ಸೂಕ್ತವಾದ ಬೆಲೆಯನ್ನು ನಿಗದಿ ಪಡಿಸುವುದು
 • ಬೆಳೆದ ಬೆಳೆಗಳಿಗೆ ರಕ್ಷಣೆ ಒದಗಿಸಲು ಗೋದಾಮು ಶೈತ್ಯಾಗಾರಗಳನ್ನು ನಿರ್ಮಿಸಬೇಕು
 • ಗ್ರಾಮೀಣ ಮಟ್ಟದಲ್ಲಿ ರೈತ ಸಂಪರ್ಕ ಕೇಂದ್ರಗಳನ್ನು ಸ್ಥಾಪಿಸಬೇಕು
 • ಸಕಾಲದಲ್ಲಿ ವಿದ್ಯುತ್ ಸೌಲಭ್ಯವನ್ನು ನೀಡುವುದು
 • ನಿರುದ್ಯೋಗವನ್ನು ಹೋಗಲಾಡಿಸಿ ಆದಾಯ ಮೂಲಗಳನ್ನು ಹೆಚ್ಚಿಸಲು ರೈತರಿಗೆ ಅರಿವು ಮೂಡಿಸಬೇಕು

ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು