Gk Today Current Affairs in
Hi Everyone,
Welcome to SAM INFO WORLD
ನವೆಂಬರ್ ತಿಂಗಳಿನ ಪ್ರಚಲಿತ ವಿದ್ಯಮಾನಗಳ ಸಂಗ್ರಹ ಭಾಗ - 4
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಪ್ರಚಲಿತ ವಿದ್ಯಮಾನಗಳು ಸಂಗ್ರಹ
1. ಭಾರತದ 72ನೇ ಗ್ರ್ಯಾಂಡ್ ಮಾಸ್ಟರಾಗಿ - ಮಿತ್ರಭಾ ಗುಹಾ
- ಪಶ್ಚಿಮ ಬಂಗಾಳದ ಮಿತ್ರಾಭಾ ಗುಹಾ ಅಂತರಾಷ್ಟ್ರೀಯ 72ನೇ ಗ್ರ್ಯಾಂಡ್ ಮಾಸ್ಟರಾಗಿ ಹೊರಹೊಮ್ಮಿದ್ದಾರೆ
- 71 ನೇ - ಸಂಕಲ್ಪ ಗುಪ್ತಾ (ಮಹಾರಾಷ್ಟ್ರ)
- 70 ನೇ ಗ್ರ್ಯಾಂಡ್ ಮಾಸ್ಟರ್ - ರಾಜಾ ರಿಥ್ವಿಕ್ (ತೆಲಂಗಾಣ)
2. ಪ್ರಪಂಚದ ಮೊದಲ ಎಸಿ ಹೆಲ್ಮೆಟ್
- ದುಬೈನ ಎಕ್ಸ್ಪೋ ಕಂಪನಿ ಜಗತ್ತಿನ ಮೊದಲ ಎಸಿ ಹೆಲ್ಮೆಟ್ ಬಿಡುಗಡೆಗೊಳಿಸಿದೆ
3. ಭಾರತದ ಮೊದಲ ಆಹಾರ ಭದ್ರತಾ ವಸ್ತುಸಂಗ್ರಹಾಲಯ
- ತಮಿಳುನಾಡು
4. ಸನ್ರೈಸ್ ಓವರ್ ಆಯೋಧ್ಯ - ಸಲ್ಮಾನ್ ಖುರ್ಷಿದ್
- ಇತ್ತೀಚೆಗೆ ಬಿಡುಗಡೆಯಾದ ಪುಸ್ತಕ ಸನ್ರೈಸ್ ಓವರ್ ಅಯೋಧ್ಯ-ನೇಷನ್ಹುಡ್ ಇನ್ ಅವರ್ ಟೈಮ್ಸ್ [Sunrise over Ayodhya - nationalhood in our Times]
- ಮಾಜಿ ಕೇಂದ್ರ ಸಚಿವ, ಕಾಂಗ್ರೆಸ್ ನಾಯಕ, ಕಾನೂನು ಶಿಕ್ಷಕ ಮತ್ತು ಪ್ರಖ್ಯಾತ ಲೇಖಕ
5. ‘ನಾನ್ ಬೇಲೇಬಲ್ ಕೇಸ್' - ಬಿಹಾರ ರಾಜ್ಯ ಸರ್ಕಾರ
- ವಯಸ್ಸಾದ ತಂದೆ ತಾಯಿಯನ್ನು ಸಾಗದೆ ಅವರನ್ನು ಬೀದಿಗೆ ಹಾಕುವ ಮಕ್ಕಳನ್ನು ಜೈಲಿಗೆ ಹಾಕುವ ಹೊಸ ಕಾನೂನನ್ನು ಬಿಹಾರ ಸರ್ಕಾರ ಜಾರಿಗೆ ತಂದಿದೆ
- ಅಕಸ್ಮಾತ್ ತಂದೆತಾಯಿಯನ್ನು ವಯಸ್ಸಾದ ಮೇಲೆ ನೋಡಿಕೊಳ್ಳದೆ ಇದ್ದರೆ ಅವರ ಮೇಲೆ ‘ನಾನ್ ಬೇಲೇಬಲ್ ಕೇಸ್' (Non bailable Case) ಹಾಕುವ ಮೂಲಕ ಶಿಕ್ಷೆ ವಿಧಿಸಲಾಗುವುದು
6. ಕೃಷಿ ಕಾಯ್ದೆಗಳನ್ನು ಹಿಂತೆಗೆದುಕೊಂಡ - ನಮೋ
- ಮೂರು ವಿವಾದಾತ್ಮಕ ಕೃಷಿ ಕಾಯ್ದೆಗಳನ್ನು ಹಿಂಪಡೆಯುವ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸಚಿವ ಸಂಪುಟ ಅಂಗೀಕರಿಸಿದೆ
- ಕಳೆದವಾರ ಪ್ರಧಾನಿ ನರೇಂದ್ರ ಮೋದಿ ದೇಶವನ್ನು ಉದ್ದೇಶಿಸಿ ಮಾತನಾಡಿದ ವೇಳೆ ಮೂರು ಕೃಷಿ ಕಾನೂನುಗಳನ್ನು ಹಿಂಪಡೆಯುವುದಾಗಿ ಘೋಷಿಸಿದ್ದರು
- ಕೃಷಿ ಉತ್ಪನ್ನ ಮಾರುಕಟ್ಟೆ ಸಂಸ್ಥೆ ಹೊರಗೂ ರೈತರ ಉತ್ಪನ್ನ ಮಾರಾಟ ಅವಕಾಶ ನೀಡುವ ರೈತರ ಉತ್ಪನ್ನ ವಾಣಿಜ್ಯ ವ್ಯವಹಾರ ಮಸೂದೆ, 2020
- ಗುತ್ತಿಗೆ ಕೃಷಿಗೆ ಒಪ್ಪಿಗೆ ನೀಡುವ ಬೆಲೆ ಖಾತ್ರಿ & ಕೃಷಿ ಸೇವೆಗಳ ಒಪ್ಪಂದ ಕಾಯ್ದೆ, 2020
- ಅಗತ್ಯ ಸರಕುಗಳ ಮಸೂದೆ, 2020
7. ಪ್ರಥಮ ಮಹಿಳಾ ಪ್ರಧಾನಿಯಾಗಿ - ಮ್ಯಾಗ್ದಲೇನಾ ಆಂಡರ್ಸನ್
- ಮ್ಯಾಗ್ದಲೇನಾ ಆಂಡರ್ಸನ್ ಸ್ವೀಡನ್ ದೇಶದ ಪ್ರಪ್ರಥಮ ಮಹಿಳಾ ಪ್ರಧಾನಿಯಾಗಿ ಆಯ್ಕೆಯಾಗಿದ್ದಾರೆ
- ಸೋಶಿಯಲ್ ಡೆಮಾಕ್ರಟಿಕ್ ಪಕ್ಷ (ಎಸ್ಡಿಪಿ) ಮತ್ತು ಹಣಕಾಸು ಸಚಿವೆರಾಗಿದ್ದರು
8. ನಾಸಾದಿಂದ ಪ್ರಪ್ರಥಮ ಬಾರಿಗೆ ಗ್ರಹ ರಕ್ಷಣಾ ಗಗನನೌಕೆ - ಡಾರ್ಟ್
- ಪ್ರಪಂಚದ ಮೊದಲ ಗ್ರಹ ರಕ್ಷಣಾ ವ್ಯವಸ್ಥೆ ಡಾರ್ಟ್ ಗಗನನೌಕೆಯನ್ನು ಅಮೇರಿಕಾದ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ‘ನವೆಂಬರ್ 23' ಮಂಗಳವಾರ ರಾತ್ರಿ 10:21 ಕ್ಕೆ ಯಶಸ್ವಿಯಾಗಿ ಉಡಾವಣೆ ಮಾಡಲಾಯಿತು
- ಬರ್ಗ್ ವಾಯುನೆಲೆಯಿಂದ ಸ್ಪೇಸ್ ಎಕ್ಸ್ ನ ಫಾಲ್ಕೋನ್ - 9 ರಾಕೆಟ್ ಮೂಲಕ ಉಡಾವಣೆ ಕಾರ್ಯ ನಡೆಯಿತು
- ನೂರು ವರ್ಷ ಭೂಮಿಗೆ ಅಪಾಯವಿಲ್ಲವೆಂದು ನಾಸಾ ತಿಳಿಸಿದೆ
- ಕ್ಷುದ್ರ ಗ್ರಹದಿಂದ ಭೂಮಿಯನ್ನು ರಕ್ಷಿಸುವ ‘ಡಾರ್ಟ್'
- DART -[double Asteroid Redirection Test]
- ನಿರ್ಮಾಣ - ಮೇರಿಲ್ಯಾಂಡ್ ನಲ್ಲಿರುವ ಜಾನ್ಸ್ ಹಾಪ್ಕಿನ್ಸ್ ಅಪ್ಲೈಡ್ ಫಿಸಿಕ್ಸ್ ಲ್ಯಾಬ್ ಡಾರ್ಟ್ ಅನ್ನು ನಿರ್ಮಿಸಿದೆ
9. ವಿಶ್ವದ ಎತ್ತರದ ರೈಲ್ವೆ ಬ್ರಿಜ್ - ಮಣಿಪುರ
- ವಿಶ್ವದ ಅತ್ಯಂತ ಎತ್ತರದ ರೈಲ್ವೆ ಬ್ರಿಜ್ ಮಣಿಪುರದಲ್ಲಿ ನಿರ್ಮಾಣವಾಗುತ್ತಿದೆ
- 141 ಮೀಟರ್ ಎತ್ತರದ್ದಾಗಿದೆ
- ಯುರೋಪಿನ ಮೊಟೆನೆಗ್ರೊದಲ್ಲಿರುವ ಬ್ರಿಜ್ 193 ಮೀಟರ್ ಎತ್ತರದಲ್ಲಿದೆ
- ಮಣಿಪುರದ ರಾಜಧಾನಿ - ಇಂಫಾಲ್
- ಅಧಿಕೃತ ಭಾಷೆ - ಮಣಿಪುರಿ
- ಮುಖ್ಯಮಂತ್ರಿ - ಎನ್. ಬಿರೇನ್ ಸಿಂಗ್
- ರಾಜ್ಯಪಾಲರು - ಲ. ಗಣೇಸನ್
10. ಒಮಿಕ್ರಾನ್ - ಕೊರೊನ ವೈರಸ್ ನ ರೂಪಾಂತರ ತಳಿ
- ದಕ್ಷಿಣ ಆಫ್ರಿಕಾದಲ್ಲಿ ಪತ್ತೆಯಾಗಿರುವ ಕೊರೊನ ವೈರಸ್ ನ ರೂಪಾಂತರ ತಳಿ - ಒಮಿಕ್ರಾನ್
- ವಿಶ್ವ ಆರೋಗ್ಯ ಸಂಸ್ಥೆ ಒಮಿಕ್ರಾನ್ ಎಂದು (ಬಿ1.1.529) ಹೆಸರಿಟ್ಟಿದೆ
11. ಕರ್ನಾಟಕದ ಜಾನಪದ ವಿಶ್ವವಿದ್ಯಾಲಯ - ಹಾವೇರಿ
- ಸ್ಥಾಪನೆ - 2011
- ಘೋಷವಾಕ್ಯ - ಹೊನ್ನ ಬಿತ್ತೇವು ಹೊಲಕ್ಕೆಲ್ಲ
12. ಬಡತನ ಸೂಚ್ಯಂಕ - 2021
*ಅತ್ಯಂತ ಹೆಚ್ಚು ಬಡತನ ಹೊಂದಿದ ರಾಜ್ಯಗಳು
- ಬಿಹಾರ - 51.91%
- ಜಾರ್ಖಂಡ್ - 42.16%
- ಉತ್ತರ ಪ್ರದೇಶ - 37.67%
- ಮಧ್ಯಪ್ರದೇಶ - 36.65%
- ಮೇಘಾಲಯ - 32.67%
*ಅತ್ಯಂತ ಕಡಿಮೆ ಬಡತನ ಹೊಂದಿದ ರಾಜ್ಯಗಳು
- ಕೇರಳ - 0.71%
- ಗೋವಾ - 3.82%
- ಸಿಕ್ಕಿಂ - 4.89%
- ತಮಿಳುನಾಡು - 4.89%
- ಪಂಜಾಬ್ - 5.59%
*ಬಿಡುಗಡೆ - ನೀತಿ ಆಯೋಗ ಆಯೋಗ
*ರಾಷ್ಟ್ರೀಯ ಯೋಜನಾ ಆಯೋಗ
- ಸ್ಥಾಪನೆ - 1950 ಮಾರ್ಚ್ 15
- ಮೊದಲ ಅಧ್ಯಕ್ಷರು - ಜವಾಹರಲಾಲ್ ನೆಹರು
- ಮೊದಲು ಉಪಾಧ್ಯಕ್ಷರು - ಗುಲ್ಜಾರಿಲಾಲ್ ನಂದ
- ಕೊನೆಯ ಉಪಾಧ್ಯಕ್ಷರು - ಮಾಂಟೆಕ್ ಸಿಂಗ್ ಅಹ್ಲುವಾಲಿಯಾ
- ಯೋಜನಾ ಆಯೋಗದ ಅಧ್ಯಕ್ಷರಾದ ಮೊದಲ ಕನ್ನಡಿಗ - ಎಚ್ ಡಿ ದೇವೇಗೌಡ
- ಯೋಜನಾ ಆಯೋಗದ ಉಪಾಧ್ಯಕ್ಷರಾದ ಮೊದಲ ಕನ್ನಡಿಗ - ರಾಮಕೃಷ್ಣ ಹೆಗ್ಗಡೆ
‘ನೀತಿ ಆಯೋಗ'ವೆಂದು 2015 ಜನವರಿ 1ರಿಂದ ಮರುನಾಮಕರಣ ಮಾಡಲಾಯಿತು
- ಕೇಂದ್ರ ಕಚೇರಿ - ನವದೆಹಲಿ
- ನೀತಿ ಆಯೋಗದ ಮೊದಲ ಅಧ್ಯಕ್ಷರು - ನರೇಂದ್ರ ಮೋದಿ
- ನೀತಿ ಆಯೋಗದ ಮೊದಲ ಉಪಾಧ್ಯಕ್ಷರು - ಅರವಿಂದ ಪನಗರಿಯಾ
- ಪ್ರಸ್ತುತ ಉಪಾಧ್ಯಕ್ಷರು - ರಾಜೀವ್ ಕುಮಾರ್
13. ನೋಯ್ಡಾ - ಏಷ್ಯಾದ ಅತಿ ದೊಡ್ಡ ವಿಮಾನ ನಿಲ್ದಾಣ
- ಏಷ್ಯಾ ಖಂಡದಲ್ಲಿಯೇ ಅತಿ ದೊಡ್ಡ “ನೊಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ" ಉತ್ತರ ಪ್ರದೇಶದ ‘ಗೌತಮ ಬುದ್ಧ ನಗರ' ಜಿಲ್ಲೆಯ ಜೇವರ್ ಎಂಬಲ್ಲಿ ಶಂಕುಸ್ಥಾಪನೆ ಮಾಡಲಾಯಿತು
- ನೋಯ್ಡಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣ
- ರಾಜ್ಯ - ಉತ್ತರ ಪ್ರದೇಶ
- ರಾಜಧಾನಿ - ಲಕ್ನೋ
- ಮುಖ್ಯಮಂತ್ರಿ - ಯೋಗಿ ಆದಿತ್ಯನಾಥ್
14. ಅಭಿನಂದನ್ ವರ್ಧಮಾನ್ ಗೆ - ವೀರ ಚಕ್ರ
- ಭಾರತೀಯ ಸೇನೆಯ ಅತ್ಯುನ್ನತ ಪುರಸ್ಕಾರ ವೀರ ಚಕ್ರ ಪ್ರಶಸ್ತಿಯನ್ನು ಭಾರತೀಯ ಫೈಟರ್ ಪೈಲಟ್ ‘ಅಭಿನಂದನ್ ವರ್ಧಮಾನ್' ನೀಡಲಾಗಿದೆ
- ಇತ್ತೀಚಿಗೆ ಮರಣೋತ್ತರವಾಗಿ ಮಹಾವೀರ ಚಕ್ರ ಪ್ರಶಸ್ತಿಯನ್ನು ‘ಕರ್ನಲ್ ಸಂತೋಷ್ ಬಾಬು' ಗೆ ನೀಡಲಾಯಿತು
15. ಇಂಟರ್ಪೋಲ್ ಉನ್ನತ ಸಮಿತಿಗೆ
- ಸಿಬಿಐ ಪ್ರವೀಣ್ ಸಿನ್ಹಾ
- ಇಂಟರ್ಪೋಲ್ ನ ಕಾರ್ಯಕಾರಿ ಸಮಿತಿಯ ಏಷ್ಯಾ ಪ್ರತಿನಿಧಿಯಾಗಿ ಸಿಬಿಐ ವಿಶೇಷ ನಿರ್ದೇಶಕ ಪ್ರವೀಣ್ ಸಿನ್ಹಾ ರವರನ್ನು ಆಯ್ಕೆ ಮಾಡಲಾಗಿದೆ
- ಇಂಟರ್ಪೋಲ್ ನ 89ನೇ ಪ್ರಧಾನಸಭೆ ಟರ್ಕಿ ದೇಶದ ಇಸ್ತಾಂಬುಲ್
- ಪ್ರಧಾನ ಕಛೇರಿ - ಫ್ರಾನ್ಸ್
16. ಸ್ಮೃತಿ ಇರಾನಿ ಚೊಚ್ಚಲ ಕಾದಂಬರಿ - ಲಾಲ್ ಸಲಾಮ್
- ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಸ್ಮೃತಿ ಇರಾನಿ ರವರ ಮೊದಲ ಕಾದಂಬರಿ “ಲಾಲ್ ಸಲಾಮ್: ಎ ನಾವೆಲ್" ಬಿಡುಗಡೆ ಮಾಡಲಾಗಿದೆ.
- ಪ್ರಕಟಣೆ - ವೆಸ್ಟ್ ಲ್ಯಾಂಡ್ ಪ್ರಕಾಶನ
17. ವಿಶ್ವ ದೂರದರ್ಶನ ದಿನ - ನವೆಂಬರ್ - 21
18. ಭಾರತದ ಸಂವಿಧಾನ ದಿನ/ಕಾನೂನು ದಿನ - ನವಂಬರ್ - 26
- ಸಂವಿಧಾನ ಅಂಗೀಕರಿಸಿದ ವರ್ಷ - 26 ನವೆಂಬರ್ 1949
- ಸಂವಿಧಾನ ಜಾರಿಗೆ ಬಂದ ವರ್ಷ - 26 ಜನವರಿ 1950
19. ರಾಷ್ಟ್ರೀಯ ಅಂಗದಾನ ದಿನ - ನವೆಂಬರ್ - 28
20 ಕನ್ನಡ ಸಾಹಿತ್ಯ ಪರಿಷತ್ ನೂತನ ಅಧ್ಯಕ್ಷ - ಡಾ. ಮಹೇಶ್ ಜೋಶಿ
- ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿ ಡಾ. ಮಹೇಶ್ ಜೋಶಿ ನೇಮಕಗೊಂಡಿದ್ದಾರೆ
- ಹಿಂದಿನ ಅಧ್ಯಕ್ಷರು - ಮನು ಬಳಿಗಾರ್
- ಸ್ಥಾಪನೆ - 3 ಮೇ 1915
- ಕೇಂದ್ರ ಕಚೇರಿ - ಬೆಂಗಳೂರು
- 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ - ಹಾವೇರಿ
- 86ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರು - ಪೊ. ದೊಡ್ಡ ರಂಗೇಗೌಡರು
Also Read
Current Affairs in Kannada - November Part 2# |
Gk Today Current Affairs in Kannada - November Part 3# |
50+ Current Affairs in Kannada - November Part 1#
0 ಕಾಮೆಂಟ್ಗಳು