GK Questions with Answers | General Knowledge Questions in Kannada 2021
ಎಲ್ಲಾ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ - 2021
Hi Everyone,
Welcome to SAM INFO WORLD
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಓದಲೇಬೇಕಾದ ಉಪಯುಕ್ತ ಮಾಹಿತಿ-ಸಾಮಾನ್ಯ ಜ್ಞಾನ
1. ‘ವೋಲ್ಗಾ' ನದಿ ಯಾವ ದೇಶದಲ್ಲಿ ಕಂಡು ಬರುತ್ತದೆ ?
ಉ- ರಷ್ಯಾ
2. ಕೇರಳದ ರಾಜಧಾನಿ ಯಾವುದು?
ಉ- ತಿರುವನಂತಪುರಂ
3. ಸಿಡುಬು ರೋಗಕ್ಕೆ ಲಸಿಕೆ ಕಂಡುಹಿಡಿದ ವಿಜ್ಞಾನಿ ಯಾರು?
ಉ- ಎಡ್ವರ್ಡ್ ಜೆನ್ನರ್ (1796)
4. ಬಿಯಾಸ್ ನದಿ ಯಾವ ನದಿಯ ಉಪನದಿಯಾಗಿದೆ?
ಉ- ಸಿಂಧೂ ನದಿ
5. ಭಾರತಕ್ಕೆ ವ್ಯಾಪಾರಕ್ಕೆಂದು ಬಂದ ಮೊದಲ ಯುರೋಪಿಯನರು ಯಾರು?
ಉ- ಪೋರ್ಚುಗೀಸರು
6. ಮನುಷ್ಯನ ದೇಹದಲ್ಲಿರುವ ಅತ್ಯಂತ ಉದ್ದದ ಮೂಳೆ ಯಾವುದು?
ಉ- ಎಲುಬು (Femur)
7. ಭಾರತದ ಅಟಾರ್ನಿ ಜನರಲ್ ರವರನ್ನು ಯಾರು ನೇಮಿಸುತ್ತಾರೆ?
ಉ- ರಾಷ್ಟ್ರಪತಿಗಳು
8. ಭಾರತದ ಮೊದಲ ಕ್ಷಿಪಣಿಯ ಹೆಸರೇನು?
ಉ- ಅಗ್ನಿ
* ಆಕಾಶದಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿ - ಅಸ್ತ್ರ
* ನೆಲದಿಂದ ನೆಲಕ್ಕೆ ಜಿಗಿಯುವ ಕ್ಷಿಪಣಿ - ಪೃಥ್ವಿ, ಅಗ್ನಿ
* ನೆಲದಿಂದ ಆಕಾಶಕ್ಕೆ ಜಿಗಿಯುವ ಕ್ಷಿಪಣಿ - ತ್ರಿಶೂಲ್, ಆಕಾಶ್
9. ಜಪಾನ್ ಶಾಸಕಾಂಗವನ್ನು ಏನೆಂದು ಕರೆಯುತ್ತಾರೆ?
ಉ- ಡಯಟ್
10. ‘ಬೈಬಲ್' ಗೆ ಕನ್ನಡದಲ್ಲಿ ಏನೆಂದು ಕರೆಯುತ್ತಾರೆ?
ಉ- ಸತ್ಯವೇದ
11. ಮಂಡ್ಯ ಜಿಲ್ಲೆಯಲ್ಲಿ ಕಂಡುಬರುವ ಪ್ರಸಿದ್ಧ ಪಕ್ಷಿಧಾಮ ಯಾವುದು?
ಉ- ರಂಗನತಿಟ್ಟು ಪಕ್ಷಿಧಾಮ
12. ‘ವಿವೇಕಚೂಡಾಮಣಿ' ಇದು ಯಾರ ಕೃತಿಯಾಗಿದೆ?
ಉ- ಶಂಕರಾಚಾರ್ಯರು
13. ವಿಶ್ವ ವ್ಯಾಪಾರ ಸಂಸ್ಥೆಯ ಪ್ರಧಾನ ಕಛೇರಿ ಎಲ್ಲಿದೆ?
ಉ- ಜಿನಿವಾ (1995)
14. ಜಿಂಬಾಬ್ವೆ ದೇಶದ ರಾಜಧಾನಿ ಯಾವುದು?
ಉ- ಹರಾರೆ
* ಕರೆನ್ಸಿ - ಯುನೈಟೆಡ್ ಸ್ಟೇಟ್ಸ್ ಡಾಲರ್
15. ಸರ್ ಸಿ ವಿ ರಾಮನ್ ರವರು ಯಾವ ವಿಭಾಗದಲ್ಲಿ ನೊಬೆಲ್ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ?
ಉ- ಭೌತಶಾಸ್ತ್ರ ವಿಭಾಗದಲ್ಲಿ
* (1930)
16. ಹಾಲಿನ ಸಾಂದ್ರತೆಯನ್ನು ಯಾವ ಸಾಧನದ ಸಹಾಯದಿಂದ ಅಳೆಯಲಾಗುತ್ತದೆ?
ಉ- ಲ್ಯಾಕ್ಟೊಮೀಟರ್
17. ಶ್ಯಾಮ್ ಜಿ ಕೃಷ್ಣವರ್ಮ ರವರು ‘ಇಂಡಿಯಾ ಹೌಸ್' ಅನ್ನು ಲಂಡನ್ ನಲ್ಲಿ ಎಷ್ಟರಲ್ಲಿ ಸ್ಥಾಪಿಸಿದರು
ಉ- 1905
18. ರಾಜ್ಯದಲ್ಲಿ ಅಡ್ವೊಕೇಟ್ ಜನರಲ್ ಇದ್ದಂತೆ ಕೇಂದ್ರದಲ್ಲಿ ಯಾರು ಇರುತ್ತಾರೆ?
ಉ- ಅಟಾರ್ನಿ ಜನರಲ್
19. ಪ್ರಸ್ತುತ ಚಾಲ್ತಿಯಲ್ಲಿರುವ ಕರ್ನಾಟಕ ಪಂಚಾಯತ್ ರಾಜ್ ಕಾಯ್ದೆಯನ್ನು ಯಾವಾಗ ಜಾರಿ ಮಾಡಲಾಯಿತು?
ಉ- 1993
20. ಏಕದಳ ಧಾನ್ಯಕ್ಕೆ ಉದಾಹರಣೆ?
ಉ- ಭತ್ತ
* ದ್ವಿದಳ ಧಾನ್ಯಕ್ಕೆ ಉದಾರಣೆ - ಹುರುಳಿಕಾಯಿ
* ನಾರು ಬೆಳೆಗೆ ಉದಾರಣೆ - ಹತ್ತಿ
21. ಮಳೆಗಾಲದಲ್ಲಿ ಬೆಳೆದು ಮಳೆಗಾಲದ ಕೊನೆಯಲ್ಲಿ ಕೊಯ್ಲು ಮಾಡುವ ಋತುಮಾನಿಕ ಬೆಳೆಗಳಿಗೆ ಏನೆಂದು ಕರೆಯುತ್ತಾರೆ?
ಉ- ಖಾರಿಫ್ ಬೆಳೆ/ಮುಂಗಾರು ಬೆಳೆ
22. ಚಳಿಗಾಲದಲ್ಲಿ ಬಿತ್ತನೆ ಮಾಡಿ ಬೇಸಿಗೆಯಲ್ಲಿ ಕೊಯ್ಲು ಅಥವಾ ಕಟಾವು ಮಾಡಲಾಗುವ ಬೆಳೆಗಳಿಗೆ ಏನೆಂದು ಕರೆಯುತ್ತಾರೆ?
ಉ- ರಬಿ ಬೆಳೆಗಳು/ಹಿಂಗಾರು ಬೆಳೆಗಳು
23. ಮಣ್ಣಿನ ಸಹಾಯವಿಲ್ಲದೆ ಕೇವಲ ಪೋಷಕ ಲವಣಗಳ ದ್ರವಗಳಲ್ಲಿ ಸಸ್ಯಗಳನ್ನು ಬೆಳೆಯುವ ವಿಧಾನಕ್ಕೆ ಏನೆಂದು ಕರೆಯುತ್ತಾರೆ?
ಉ- ಜಲಕೃಷಿ (Hydroponics)
24. ‘ಆನಂದಕಂದ' ಇದು ಯಾರ ಕಾವ್ಯನಾಮವಾಗಿದೆ?
ಉ- ಬೆಟಗೇರಿ ಕೃಷ್ಣವರ್ಮ
25. ‘ಅಹಂ ಬ್ರಹ್ಮಾಸ್ಮಿ' ನಾನೇ ಬ್ರಹ್ಮ ಎಂದು ಹೇಳಿಕೆ ನೀಡಿದವರು ಯಾರು?
ಉ- ಶಂಕರಾಚಾರ್ಯರು
26. ಮೌರ್ಯರ ಆಸ್ಥಾನದಲ್ಲಿ ಕೌಟಿಲ್ಯನು ರಚಿಸಿದ ಗ್ರಂಥ ಯಾವುದು?
ಉ- ಅರ್ಥಶಾಸ್ತ್ರ
27. ಸ್ವಾತಂತ್ರ್ಯಪೂರ್ವದಲ್ಲಿ ಬಡವರನ್ನು ಗುರುತಿಸಲು ಮೊಟ್ಟಮೊದಲ ಬಾರಿಗೆ ಬಡತನ ರೇಖೆಯನ್ನು ಬಳಕೆಗೆ ತಂದವರು ಯಾರು?
ಉ- ದಾದಾಬಾಯಿ ನವರೋಜಿ
* ಭಾರತದಲ್ಲಿ ಮೊದಲ ಬಾರಿಗೆ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಿದರು
* ‘Poverty and Un-British Rule in India' ಎಂಬ ಗ್ರಂಥವನ್ನು ಬರೆದರು
28. ಆರ್ಯಭಟನು ತಿಳಿಸಿದ ಪ್ರಕಾರ ‘ಪೈ' (π)ನ ಬೆಲೆ ಎಷ್ಟು?
ಉ- 3.14159
29. ‘ಪಜಾಕ ಕದನ' ಯಾರ ಯಾರ ನಡುವೆ ನಡೆಯಿತು?
ಉ- ಸಬಕ್ತಗೀನ್ ಮತ್ತು ಜಯಪಾಲ (993)
30. ಶಂಕರಾಚಾರ್ಯರ ಗುರುವಿನ ಹೆಸರೇನು?
ಉ- ಗೋವಿಂದ ಭಗವತ್ಪಾದರು
31. ಭಾರತೀಯ ಸಂವಿಧಾನದ ಪ್ರಕಾರ ಚುನಾವಣೆಯಲ್ಲಿ ಮತ ಚಲಾಯಿಸಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು?
ಉ- 18 ವರ್ಷ
* ಭಾರತದಲ್ಲಿ 1989ಕ್ಕಿಂತ ಹಿಂದೆ ಮತದಾನದ ಕನಿಷ್ಠ ವಯಸ್ಸು 21 ವರ್ಷಗಳಿಗೆ ನಿಗದಿಪಡಿಸಲಾಗಿತ್ತು, 61ನೇ ಸಂವಿಧಾನದ ತಿದ್ದುಪಡಿಯ ಮೂಲಕ 1989ರ ನಂತರ ಕನಿಷ್ಠ ವಯಸ್ಸು 21 ವರ್ಷಗಳಿಂದ 18 ವರ್ಷಕ್ಕೆ ಇಳಿಸಲಾಗಿದೆ
32. ಚಂಡಮಾರುತಗಳು ಸಾಮಾನ್ಯವಾಗಿ ಯಾವ ತಿಂಗಳಲ್ಲಿ ಉಂಟಾಗುತ್ತವೆ?
ಉ- ಅಕ್ಟೋಬರ್ ಮತ್ತು ನವಂಬರ್
33. ಕರ್ನಾಟಕದಲ್ಲಿ ಭೌಗೋಳಿಕ ಸೂಚ್ಯಂಕ ಟ್ಯಾಗ್ (GI tag) ಅನ್ನು ಪಡೆದ ಮೊದಲ ಉತ್ಪನ್ನ ಯಾವುದು?
ಉ- ಮೈಸೂರು ರೇಷ್ಮೆ
34. ಜಿಐ ಟ್ಯಾಗ್ (GI tag) ಅನ್ನು ಪಡೆದ ಭಾರತದ ಮೊದಲ ಉತ್ಪನ್ನ ಯಾವುದಾಗಿದೆ?
ಉ- ಡಾರ್ಜಿಲಿಂಗ್ ಚಹ - ಪಶ್ಚಿಮ ಬಂಗಾಳ
35. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಯಾವಾಗ ನಡೆಯಿತು?
ಉ- 13 ಏಪ್ರಿಲ್ 1919
36. ‘ಕರ್ನಾಟಕದ ಸಿಂಹ' ಎಂದು ಯಾರನ್ನು ಕರೆಯಲಾಗುತ್ತದೆ?
ಉ- ಗಂಗಾಧರ್ ದೇಶಪಾಂಡೆ
37. ಸುವರ್ಣಾವತಿ ನದಿ ಯಾವ ನದಿಯ ಉಪನದಿಯಾಗಿದೆ?
ಉ- ಕಾವೇರಿ
38. ಮಣಿಪುರದ ಅಧಿಕೃತ ಭಾಷೆ ಯಾವುದು?
ಉ- ಮಣಿಪುರಿ ಮೇಟಿಲಾನ್
* ರಾಜಧಾನಿ - ಇಂಫಾಲ್
39. ನಾಗಾಲ್ಯಾಂಡ್ ನ ರಾಜಧಾನಿ ಯಾವುದು?
ಉ- ಕೊಹಿಮಾ
40. ವಿಶ್ವ ಜಲ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ ?
ಉ- ಮಾರ್ಚ್ - 22
41. ವಿಶ್ವ ಮಾಪಕ ದಿನವನ್ನು ಯಾವ ದಿನದಂದು ಆಚರಿಸುತ್ತಾರೆ?
ಉ- ಅಕ್ಟೋಬರ್ - 14
42. ಶ್ರೀಲಂಕಾದ ಅಧಿಕೃತ ರಾಜಧಾನಿ ಯಾವುದು?
ಉ- ಶ್ರೀ ಜಯವರ್ಧನಪುರ ಕೊಟ್ಟೆ
* ಕರೆನ್ಸಿ - ಶ್ರೀಲಂಕನ್ ರೂಪಿ
43. ‘ದಾಸ್ ಕ್ಯಾಪಿಟಲ್' ಕೃತಿಯನ್ನು ಬರೆದವರು ಯಾರು?
ಉ- ಕಾರ್ಲ್ ಮಾರ್ಕ್ಸ್
44. ಆಕಾಶ ನೀಲಿಯಾಗಿ ಕಾಣಲು ಕಾರಣವೇನು?
ಉ- ಬೆಳಕಿನ ಚದುರುವಿಕೆ
* ಅತ್ಯಂತ ಹೆಚ್ಚು ಚದುರುವ ಬಣ್ಣ ನೀಲಿ
45. ಹಾರಬಲ್ಲ ಏಕೈಕ ಸಸ್ತನಿ ಯಾವುದು?
ಉ- ಬಾವಲಿ
46. ಲೋಕಸಭೆಯಲ್ಲಿ ಮೊಟ್ಟಮೊದಲ ಬಾರಿಗೆ ಕನ್ನಡದಲ್ಲಿ ಭಾಷಣ ಮಾಡಿದ ವ್ಯಕ್ತಿ ಯಾರು?
ಉ- ಜೆ.ಎಚ್. ಪಟೇಲ್ (1967)
* ಶಿವಮೊಗ್ಗ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು.
47. ದತ್ತು ಪುತ್ರರಿಗೆ ಹಕ್ಕಿಲ್ಲ ಎಂಬ ನೀತಿಯನ್ನು ಜಾರಿಗೆ ತಂದ ಬ್ರಿಟಿಷ್ ಅಧಿಕಾರಿ ಯಾರು?
ಉ- ಲಾರ್ಡ್ ಡಾಲ್ ಹೌಸಿ
48. ಜಮೀನ್ದಾರಿ ಪದ್ಧತಿಯನ್ನು ಜಾರಿಗೆ ತಂದವರು ಯಾರು?
ಉ- ಲಾರ್ಡ್ ಕಾರ್ನವಾಲಿಸ್
* ಬಂಗಾಳದಲ್ಲಿ ಜಾರಿಗೆ ತಂದನು
49. ಕರ್ನಾಟಕದ ಮೊಟ್ಟ ಮೊದಲ ವಿಶ್ವವಿದ್ಯಾಲಯ ಯಾವುದು?
ಉ- ಮೈಸೂರು ವಿಶ್ವವಿದ್ಯಾಲಯ
50. ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಬಜೆಟ್ ಮಂಡನೆ ಮಾಡಿದವರು ಯಾರು?
ಉ- ಜೇಮ್ಸ್ ವಿಲ್ಸನ್
* 18 ಫೆಬ್ರವರಿ 1860
51. ಹೆಚ್ಚಿನ ತಾಪಮಾನವನ್ನು ಅಳೆಯುವ ಸಾಧನ ಯಾವುದು?
ಉ- ಪೈರೋಮೀಟರ್
52. ಶುದ್ಧ ಚಳುವಳಿಯನ್ನು ಪ್ರಾರಂಭಿಸಿದವರು ಯಾರು?
ಉ- ದಯಾನಂದ ಸರಸ್ವತಿ
53. ಕಂಪ್ಯೂಟರ್ ನ ಮೆದುಳು ಎಂದು ಯಾವುದನ್ನು ಕರೆಯುತ್ತಾರೆ ?
ಉ- ಸಿ.ಪಿ.ಯು (Central Processing Unit)
54. ಜರ್ಮನಿಯಲ್ಲಿ ನಾಜಿ ಪಕ್ಷವನ್ನು ಸ್ಥಾಪಿಸಿದವರು ಯಾರು?
ಉ- ಹಿಟ್ಲರ್
* ಬಿರುದು - ಡೆರ್ ಫ್ಯೂರರ್
55. ರಾಷ್ಟ್ರೀಯ ಸಾಕ್ಷರತಾ ಮಿಷನ್ ಅನ್ನು ಯಾವಾಗ ಸ್ಥಾಪಿಸಲಾಯಿತು?
ಉ- 1988
56. ಪಂಚಶೀಲ ಒಪ್ಪಂದಕ್ಕೆ ಸಹಿ ಹಾಕಿದ ರಾಷ್ಟ್ರಗಳು ಯಾವುವು?
ಉ- ಭಾರತ ಮತ್ತು ಚೀನಾ (1954)
* ಭಾರತದ ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಚೌ ಎನ್ ಲಾಯ್
57. ಅಮೆರಿಕ ಸ್ವಾತಂತ್ರ್ಯ ಸಂಗ್ರಾಮ ನಡೆದಿದ್ದು ಯಾವಾಗ?
ಉ- ಕ್ರಿಸ್ತಶಕ 1776
58. ಫ್ರಾನ್ಸ್ ಕ್ರಾಂತಿ ನಡೆದಿದ್ದು ಯಾವಾಗ?
ಉ- ಕ್ರಿ.ಶ. 1789
59. ತಾರಾಪುರ ಅಣು ವಿದ್ಯುತ್ ಸ್ಥಾವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉ- ಮಹಾರಾಷ್ಟ್ರ
60. ಮಂಡಗದ್ದೆ ಪಕ್ಷಿಧಾಮ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಉ- ಶಿವಮೊಗ್ಗ
* ಗಾಜನೂರು ಆಣೆಕಟ್ಟು ಶಿವಮೊಗ್ಗ ಜಿಲ್ಲೆಯಲ್ಲಿ ಕಂಡು ಬರುತ್ತದೆ
61. ರಾಜಾಲಕ್ಕಮಗೌಡ ಜಲಾಶಯ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಉ- ಬೆಳಗಾವಿ ಜಿಲ್ಲೆ (ಹಿಡಕಲ್ ಜಲಾಶಯ ಎಂತಲೂ ಕರೆಯುತ್ತಾರೆ)
62. ಕನ್ನಡದ ಕುಲಪುರೋಹಿತ ಎಂದು ಯಾರನ್ನು ಕರೆಯಲಾಗುತ್ತದೆ?
ಉ- ಆಲೂರು ವೆಂಕಟರಾವ್
63.‘ಕೂಡಲಸಂಗಮದೇವ' ಇದು ಯಾರ ಅಂಕಿತನಾಮವಾಗಿದೆ?
ಉ- ಬಸವಣ್ಣನವರ ಅಂಕಿತನಾಮ
64. ಮೊದಲ ಪಾಣಿಪತ್ ಕದನ ಯಾವಾಗ ನಡೆಯಿತು?
ಉ- 21 ಏಪ್ರಿಲ್ 1526
* ಎರಡನೇ ಪಾಣಿಪತ್ ಕದನ - 5 ನವೆಂಬರ್ 1556
* ಮೂರನೇ ಪಾಣಿಪತ್ ಕದನ - 1761
65. ಯಾರನ್ನು ‘ಜೀವಶಾಸ್ತ್ರದ ಪಿತಾಮಹ' ಎಂದು ಕರೆಯಲಾಗುತ್ತದೆ?
ಉ- ಅರಿಸ್ಟಾಟಲ್
66. ರೇಡಿಯಮ್ ಅನ್ನು ಕಂಡುಹಿಡಿದವರು ಯಾರು?
ಉ- ಮೇರಿ ಮತ್ತು ಪಿಯರೆ ಕ್ಯೂರಿ
67. ಮೊಟ್ಟಮೊದಲ ಬಾರಿಗೆ ರಾಷ್ಟ್ರಗೀತೆಯನ್ನು ಯಾವ ಅಧಿವೇಶನದಲ್ಲಿ ಹಾಡಲಾಯಿತು?
ಉ- ಕಲ್ಕತ್ತಾ ಅಧಿವೇಶನ (1911)
68. ಶರೀರ ನಿರ್ಮಾಣದ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ ಏನೆಂದು ಕರೆಯುತ್ತಾರೆ?
ಉ- ಅನಾಟಮಿ
69. ಗರ್ಭದಲ್ಲಿರುವ ಲಿಂಗವನ್ನು ಪತ್ತೆ ಹಚ್ಚುವುದನ್ನು ನಿಯಂತ್ರಿಸಲು ಯಾವ ಕಾಯ್ದೆಯನ್ನು ಜಾರಿಗೆ ತರಲಾಯಿತು?
ಉ- ಪ್ರಸವ ಲಿಂಗ ಪರೀಕ್ಷೆ ಪ್ರತಿಬಂಧಕ ಕಾಯ್ದೆ
70. ಗೋಬಿ ಮರುಭೂಮಿ ಎಲ್ಲಿ ಕಂಡುಬರುತ್ತದೆ?
ಉ- ಚೀನಾ ಮತ್ತು ಮಂಗೋಲಿಯ
* ಪ್ರಪಂಚದ ಅತಿ ದೊಡ್ಡ ಮರುಭೂಮಿ - ಅಂಟಾರ್ಕ್ಟಿಕ್ ಮರುಭೂಮಿ (ಅಂಟಾರ್ಕ್ಟಿಕಾ ಖಂಡ)
Also Read: General Knowledge - 2021
50+ General Knowledge 2021: Easy Simple GK
0 ಕಾಮೆಂಟ್ಗಳು