Header Ads Widget

Responsive Advertisement

Current Affairs in Kannada

 Current Affairs in Kannada

Current Affairs in Kannada, Gk Today Current Affairs in Kannada, Daily Current Affairs in Kannada


Hi Everyone,

Welcome to SAM INFO WORLD


ನವೆಂಬರ್ ತಿಂಗಳಿನ ಪ್ರಚಲಿತ ವಿದ್ಯಮಾನಗಳು ಭಾಗ - 3

ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಪ್ರಚಲಿತ ವಿದ್ಯಮಾನಗಳ ಸಂಗ್ರಹ


1. ಪುನೀತ್ ಗೆ ಮರಣೋತ್ತರವಾಗಿ ‘ಕರ್ನಾಟಕ ರತ್ನ' - ಸಿಎಂ ಘೋಷಣೆ

 • ಇತ್ತೀಚಿಗೆ ನಿಧನರಾದ ಕನ್ನಡದ ಖ್ಯಾತ ನಟ ಪುನೀತ್ ರಾಜಕುಮಾರ್ ಗೆ ಮರಣೋತ್ತರವಾಗಿ ಕರ್ನಾಟಕ ರತ್ನ ಪ್ರಶಸ್ತಿಯನ್ನು ನೀಡಲಾಗುವುದೆಂದು ಮಾನ್ಯ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಘೋಷಿಸಿದ್ದಾರೆ
 • ಪ್ರಶಸ್ತಿ ನೀಡಿಕೆ - ಕರ್ನಾಟಕ ಸರ್ಕಾರ
 • ಕರ್ನಾಟಕ ರತ್ನ ಪ್ರಶಸ್ತಿಯನ್ನು ಪ್ರಪ್ರಥಮ ಬಾರಿಗೆ 1992 ರಲ್ಲಿ ನೀಡಲಾಯಿತು
 • ಕರ್ನಾಟಕ ರಾಜ್ಯದ ಅತ್ಯುನ್ನತ ನಾಗರಿಕ ಪ್ರಶಸ್ತಿ ಯಾಗಿದೆ
 • ಡಾ. ರಾಜಕುಮಾರ್ ಕರ್ನಾಟಕ ರತ್ನ ಪ್ರಶಸ್ತಿ ಪಡೆದ ಮೊದಲ ನಟ - 1992 (ಸಿನಿಮಾ ಕ್ಷೇತ್ರಕ್ಕೆ)
 • ರಾಷ್ಟ್ರಕವಿ ಕುವೆಂಪು (ಸಾಹಿತ್ಯ) - 1992

2. ದೇಶದ ಅತಿ ಉದ್ದದ ‘ಪೂರ್ವಂಚಲ್ ಎಕ್ಸ್ಪ್ರೆಸ್ ವೇ' ಗೆ - ಮೋದಿ ಚಾಲನೆ

 • ಇತ್ತೀಚಿಗೆ ಉತ್ತರಪ್ರದೇಶ ರಾಜ್ಯದಲ್ಲಿ 341 ಕಿಮೀ ಉದ್ದದ ‘ಪೂರ್ವಂಚಲ್ ಎಕ್ಸ್ಪ್ರೆಸ್ ವೇ' ಅನ್ನು ಪ್ರಧಾನಿ ನರೇಂದ್ರ ಮೋದಿ ಉದ್ಘಾಟಿಸಿದರು
 • ಆರು ಪಥದ ಹೆದ್ದಾರಿ ಇದಾಗಿದ್ದು, 8 ಪಥಕ್ಕೆ ವಿಸ್ತರಿಸುವ ಸಾಧ್ಯತೆ ಇದೆ
 • 14 ಮಾರ್ಚ್ 2018 ರಂದು ಶಂಕು ಸ್ಥಾಪನೆ, ಕಾರ್ಯಾರಂಭ ಅಕ್ಟೋಬರ್ 10, 2018
 • 22,500 ಕೋಟಿ ರೂಪಾಯಿಗಳ ಅಂದಾಜು ವೆಚ್ಚ
 • ಮುಖ್ಯಮಂತ್ರಿ - ಯೋಗಿ ಆದಿತ್ಯನಾಥ್
 • ರಾಜಧಾನಿ - ಲಕ್ನೋ

       *ನೆನಪಿರಲಿ

 • ವಿಶ್ವದಲ್ಲಿಯೇ ಅತ್ಯಂತ ಉದ್ದದ ಎಕ್ಸ್ಪ್ರೆಸ್ ವೇ‌- “ದೆಹಲಿ - ಮುಂಬೈ ಎಕ್ಸ್ಪ್ರೆಸ್ ವೇ" ನಿರ್ಮಾಣ ಹಂತದಲ್ಲಿದೆ - 2023 ಕ್ಕೆ ಪೂರ್ಣಗೊಳ್ಳುವ ಸಾಧ್ಯತೆ

3. ಸಿಬಿಐ ಮತ್ತು ಇಡಿ ನಿರ್ದೇಶಕರ ಅವಧಿ ವಿಸ್ತರಣೆ ಸುಗ್ರೀವಾಜ್ಞೆ ಜಾರಿ

 • ಸಿಬಿಐ, ಇ.ಡಿ ನಿರ್ದೇಶಕರ ಅವಧಿಯನ್ನು 2 ವರ್ಷದಿಂದ - 5 ವರ್ಷಕ್ಕೆ ವಿಸ್ತರಿಸಿದೆ
 • ಪ್ರಸ್ತುತ ಸಿಬಿಐ ನಿರ್ದೇಶಕರು - ಸುಬೋಧ್ ಕುಮಾರ್ ಜೈಸ್ವಾಲ್
 • ಪ್ರಸ್ತುತ ಈ.ಡಿ ನಿರ್ದೇಶಕರು - ಸಂಜಯ್ ಕುಮಾರ್ ಮಿಶ್ರಾ

4. ಅಮೆರಿಕವನ್ನು ಹಿಂದಿಕ್ಕಿದ - ಚೀನಾ

 • ಮೆಕೆನ್ಸ್ ಗ್ಲೋಬಲ್ ವರದಿಯ ಪ್ರಕಾರ ಚೀನಾ ಜಗತ್ತಿನ ಶ್ರೀಮಂತ ರಾಷ್ಟ್ರವಾಗಿ ಹೊರಹೊಮ್ಮಿದೆ
 • ಅಮೆರಿಕ ಎರಡನೇ ಸ್ಥಾನದಲ್ಲಿದೆ
 • ಭಾರತ ಏಳನೇ ಸ್ಥಾನದಲ್ಲಿದೆ

5. ‘ಕೈಸರ್-ಐ-ಹಿಂದ್' ರಾಜ್ಯ ಚಿಟ್ಟೆಯಾಗಿ ಅನುಮೋದನೆ

 • ಅರುಣಾಚಲ ಪ್ರದೇಶ ರಾಜ್ಯ ಸರ್ಕಾರ ದೊಡ್ಡದಾದ ಗಾಢಬಣ್ಣದ ‘ಕೈಸರ್-ಐ-ಹಿಂದ್' ಚಿಟ್ಟೆಯನ್ನು ರಾಜ್ಯ ಚಿಟ್ಟೆಯಾಗಿ ಘೋಷಿಸಿದೆ
 • ಚಿಟ್ಟೆಯ ವೈಜ್ಞಾನಿಕ ಹೆಸರು - ಟೀನೋಪಾಲ್ಪಸ್ ಇಂಪೀರಿಯಲಿಸ್
 • ಮುಖ್ಯಮಂತ್ರಿ - ಪೆಮಾ ಖಂಡು
 • ರಾಜಧಾನಿ - ಇಟಾನಗರ
 • ರಾಜ್ಯಪಾಲರು - ಬಿ.ಡಿ. ಮಿಶ್ರಾ

6. ಇತ್ತೀಚಿಗೆ ಭಾರತದ ಯಾವ ಜಿಲ್ಲೆಯನ್ನು ಸಂಪೂರ್ಣ ಸಾವಯವ ಕೃಷಿ ಜಿಲ್ಲೆ ಎಂದು ಘೋಷಿಸಲಾಯಿತು?
ಉ- ಗುಜರಾತ್ ನ ಡಾಂಗ್ ಜಿಲ್ಲೆ

 • ಇಡೀ ಪಶ್ಚಿಮ ಭಾರತದಲ್ಲಿಯೇ ಸಂಪೂರ್ಣ ಸಾವಯವ ಕೃಷಿ ಜಿಲ್ಲೆ ಎಂದು 19 ನವೆಂಬರ್ ರಂದು ಗುಜರಾತ್ ನ ರಾಜ್ಯಪಾಲರು ಘೋಷಿಸಿದರು
 • ಬುಡಕಟ್ಟು ಸಮುದಾಯ ಹೆಚ್ಚಾಗಿರುವ ಜಿಲ್ಲೆಯಾಗಿದೆ
 • ಕೃಷಿ ಸಚಿವ - ರಾಘವಜಿ ಪಟೇಲ್
 • ಮುಖ್ಯಮಂತ್ರಿ - ಭೂಪೇಂದ್ರಭಾಯ್ ಪಟೇಲ್
 • ರಾಜ್ಯಪಾಲರು - ಆಚಾರ್ಯ ದೇವವ್ರತ
 • ರಾಜಧಾನಿ - ಗಾಂಧಿನಗರ

ALSO Read |Gk Today Current Affairs in Kannada 2021

7. ಇತಿಹಾಸಕಾರ ಬಾಬಾ ಪುರಂದರೆ ನಿಧನ

 • ಇತ್ತೀಚಿಗೆ ಬಾಬಾಸಾಹೇಬ ಪುರಂದರೆ ಎಂದೇ ಖ್ಯಾತರಾಗಿದ್ದ ಬಲವಂತ್ ಮೋರೇಶ್ವರ ಪುರಂದರೆ ನಿಧನರಾದರು
 • ಭಾರತದ ಎರಡನೇ ಅತ್ಯುನ್ನತ ನಾಗರಿಕ ಪ್ರಶಸ್ತಿಯಾದ ಪದ್ಮವಿಭೂಷಣ ಪ್ರಶಸ್ತಿಯನ್ನು ನೀಡಿ ಗೌರವಿಸಲಾಯಿತು - 25 ಜನವರಿ 2019

8. ಆಸ್ಟ್ರೇಲಿಯಾಗೆ ಚೊಚ್ಚಲ ಟಿ-20 ವಿಶ್ವಕಪ್

 • 2021ರ ಟಿ-20 ವಿಶ್ವಕಪ್ ಟೂರ್ನಮೆಂಟ್ ನಲ್ಲಿ 7ನೇ ಆವೃತ್ತಿಯಲ್ಲಿ ನ್ಯೂಜಿಲೆಂಡ್ ವಿರುದ್ಧ ಜಯಗಳಿಸಿತು
 • ಆಸ್ಟ್ರೇಲಿಯಾ ಗೆದ್ದ ಮೊದಲ  ಟಿ-20 ವಿಶ್ವಕಪ್
 • ವಿಜೇತ ತಂಡ - ಆಸ್ಟ್ರೇಲಿಯಾ (12 ಕೋಟಿ ರೂ)
 • ಸೋತ ತಂಡ (ರನ್ನರ್ ಆಫ್) - ನ್ಯೂಜಿಲೆಂಡ್ (6 ಕೋಟಿ)
 • 2016ರ ಟಿ-20 ವಿಶ್ವಕಪ್ ಗೆದ್ದ ತಂಡ - ವೆಸ್ಟ್ ಇಂಡೀಸ್
 • ಪ್ರಸ್ತುತ ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ - ರಾಹುಲ್ ದ್ರಾವಿಡ್
 • ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿಯ ಮುಖ್ಯಸ್ಥರಾಗಿ - ವಿ.ವಿ.ಎಸ್. ಲಕ್ಷ್ಮಣ್ ನೇಮಕವಾಗಲಿದ್ದಾರೆ
    * ನೆನಪಿರಲಿ
 • ಭಾರತಕ್ಕೆ ಒಟ್ಟು 3 ವಿವಿಧ ಐಸಿಸಿ ಟೂರ್ನಿಗಳ ಆತಿಥ್ಯವಹಿಸುವ ಅವಕಾಶ
 • 2026 - ಟಿ-20 ವಿಶ್ವಕಪ್ - ಭಾರತ & ಶ್ರೀಲಂಕಾ
 • 2029ರ ಚಾಂಪಿಯನ್ ಟ್ರೋಫಿ - ಭಾರತ
 • 2031ರ ಏಕದಿನ ವಿಶ್ವಕಪ್ - ಭಾರತ ಮತ್ತು ಬಾಂಗ್ಲಾದೇಶ ಜಂಟಿಯಾಗಿ
  * Very Important 

 • 2024ರ ಟಿ-20 ವಿಶ್ವಕಪ್ - ಅಮೆರಿಕಾ & ವೆಸ್ಟ್ ಇಂಡೀಸ್
 • 2025ರ ಚಾಂಪಿಯನ್ ಟ್ರೋಫಿ - ಪಾಕಿಸ್ತಾನ
 • 2026ರ ಟಿ-20 ವಿಶ್ವಕಪ್ - ಭಾರತ & ಶ್ರೀಲಂಕಾ
 • 2027ರ ಏಕದಿನ ವಿಶ್ವಕಪ್ - ನಮೀಬಿಯಾ, ಜಿಂಬಾಬ್ವೆ, ದಕ್ಷಿಣ ಆಫ್ರಿಕಾ
 • 2028ರ ಟಿ-20 ವಿಶ್ವಕಪ್ - ಆಸ್ಟ್ರೇಲಿಯಾ & ನ್ಯೂಜಿಲೆಂಡ್
 • 2029ರ ಚಾಂಪಿಯನ್ ಟ್ರೋಫಿ - ಭಾರತ
 • 2030ರ ಟಿ-20 ವಿಶ್ವಕಪ್ - ಇಂಗ್ಲೆಂಡ್, ಐರ್ಲೆಂಡ್ & ಸ್ಕಾಟ್ಲೆಂಡ್
 • 2031ರ ಏಕದಿನ ವಿಶ್ವಕಪ್ - ಭಾರತ & ಬಾಂಗ್ಲಾದೇಶ

9. ಸಿಐಎಸ್ಎಫ್ (CISF) ನ ನಿರ್ದೇಶಕರಾಗಿ - ಶೀಲ್ ವರ್ಧನ್ ಸಿಂಗ್

 • ಇತ್ತೀಚೆಗೆ ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸೆಂಟ್ರಲ್ ಇಂಡಸ್ಟ್ರಿಯಲ್ ಸೆಕ್ಯೂರಿಟಿ ಫೋರ್ಸ್) ನಿರ್ದೇಶಕರಾಗಿ ‘ಶೀಲ್ ವರ್ಧನ್ ಸಿಂಗ್'  ನೇಮಕಗೊಂಡಿದ್ದಾರೆ

10. ರಾಷ್ಟ್ರೀಯ ಪತ್ರಿಕಾ ದಿನ - ನವೆಂಬರ್ - 17

 • ಧ್ಯೇಯ ವಾಕ್ಯ - ‘ವ್ಹೂ ಇಸ್ ನಾಟ್ ಅಫ್ರೇಡ್ ಆಫ್ ಮೀಡಿಯಾ' (Who is not Afraid of Media)

11. ರಷ್ಯಾದಿಂದ ಭಾರತಕ್ಕೆ ಎಸ್-400 ಕ್ಷಿಪಣಿ‌ ಪೂರೈಕೆ

 • 2018 ರಲ್ಲಿ ಮಾಡಿಕೊಂಡ ಉಭಯ ರಾಷ್ಟ್ರಗಳ ಒಪ್ಪಂದದಂತೆ 5 ‘S-400' ದಾಳಿ ನಿರೋಧಕ ಕ್ಷಿಪಣಿಗಳನ್ನು ಭಾರತ 40ಸಾವಿರ ಕೋಟಿ ರೂ. ವೆಚ್ಚದಲ್ಲಿ  ರಷ್ಯಾದಿಂದ ಖರೀದಿಸಿದೆ
  * ಎಂ-777 ಗನ್
 • ಬ್ರಿಟನ್ನಿನಿಂದ 145 ‘ಎಂ-777 ಗನ್' 750 ದಶಲಕ್ಷ ಡಾಲರ್ ವೆಚ್ಚದಲ್ಲಿ ಭಾರತಕ್ಕೆ ಪೂರೈಕೆ
 • ಇಲ್ಲಿಯವರೆಗೆ 89 ಗನ್ ಗಳು ಪೂರೈಕೆ ಮಾಡಲಾಗಿದ್ದು, ಇನ್ನುಳಿದ 56 ಗನ್ಗಳನ್ನು 2022 ಜೂನ್ ತಿಂಗಳ ಅಂತ್ಯದೊಳಗೆ ಹಸ್ತಾಂತರಿಸಲಾಗುವುದು

12. ವಿಶ್ವ ಅವಧಿಪೂರ್ವ ಜನನದಿನ - ನವೆಂಬರ್ - 17

13. ಭಾರತ ಮತ್ತು ಫ್ರಾನ್ಸ್ ಜಂಟಿ ಮಿಲಿಟರಿ ವ್ಯಾಯಾಮ - ಎಕ್ಸ್ ಶಕ್ತಿ -2021

 • ಎಕ್ಸ್ ಶಕ್ತಿ - 2021 ಭಾರತ ಮತ್ತು ಫ್ರಾನ್ಸ್  ಆರನೇ ಆವೃತ್ತಿ ದ್ವೈವಾರ್ಷಿಕ ಮಿಲಿಟರಿ ವ್ಯಾಯಾಮ ಆರಂಭವಾಗಿದೆ
 • ನವಂಬರ್ 15 ರಿಂದದು 26 ರವರೆಗೆ ನಡೆಯಲಿದೆ
 • ಸ್ಥಳ - ಫ್ರಾನ್ಸ್ ದೇಶದ ‌ಫ್ರೆಜಸ್

14. ಅಂತರಾಷ್ಟ್ರೀಯ ವಿದ್ಯಾರ್ಥಿಗಳ ದಿನವನ್ನು ನವೆಂಬರ್ - 17 ರಂದು ಆಚರಿಸಲಾಗುತ್ತದೆ

15. ದಕ್ಷಿಣ ಆಫ್ರಿಕಾದ ಫ್ರೆಡರಿಕ್ ವಿಲ್ಲೆಮ್ ಡಿ. ಕ್ಲರ್ಕ್ - ನಿಧನ

 • ದಕ್ಷಿಣ ಆಫ್ರಿಕಾದ ಮಾಜಿ ಅಧ್ಯಕ್ಷ ಫ್ರೆಡರಿಕ್ ವಿಲ್ಲೆಮ್ ಡಿ. ಕ್ಲರ್ಕ್ ಇತ್ತೀಚಿಗೆ ಕ್ಯಾನ್ಸರ್ ಖಾಯಿಲೆಯಿಂದ ಸಾವನ್ನಪ್ಪಿದರು
 • ದಕ್ಷಿಣ ಆಫ್ರಿಕಾದ ರಾಜಕಾರಣಿ ಮತ್ತು ನೋಬೆಲ್ ಪ್ರಶಸ್ತಿ ವಿಜೇತರು (1993)- ಶಾಂತಿ ವಿಭಾಗದಲ್ಲಿ
 • ದಕ್ಷಿಣ ಆಫ್ರಿಕದ ರಾಜ್ಯಾಧ್ಯಕ್ಷರಾಗಿದ್ದರು -ಸೆಪ್ಟೆಂಬರ್ 1989 - ಮೇ 1994
 • ದ. ಆಫ್ರಿಕಾದ ಉಪಾಧ್ಯಕ್ಷರಾಗಿದ್ದರು - 1994 ರಿಂದ 1996ರ ವರೆಗೆ

16. ವಾಯು ಗುಣಮಟ್ಟ ಪಟ್ಟಿ ಬಿಡುಗಡೆ - ಮಡಿಕೇರಿಗೆ ಭಾರತದಲ್ಲಿಯೇ ಪ್ರಥಮ ಸ್ಥಾನ

 • ಇತ್ತೀಚೆಗೆ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಬಿಡುಗಡೆಗೊಳಿಸಿದ ‘ಉತ್ತಮ ವಾಯು ಗುಣಮಟ್ಟ ಪಟ್ಟಿ'ಯಲ್ಲಿ ಕರ್ನಾಟಕದ 12 ನಗರಗಳು ಸ್ಥಾನ ಪಡೆದುಕೊಂಡಿವೆ
 • ಮಡಿಕೇರಿಯು ಭಾರತದಲ್ಲಿಯೇ ಅತ್ಯುತ್ತಮ ವಾಯುಗುಣ ಹೊಂದಿದ ನಗರವಾಗಿ ಹೊರಹೊಮ್ಮಿದೆ
 • ದೆಹಲಿ ಅತ್ಯಂತ ಹೆಚ್ಚು ಮಾಲಿನ್ಯ ನಗರವಾಗಿದೆ

17. ಎಲ್ಲಾ ಮಾದರಿಯ ಕ್ರಿಕೆಟ್ಗೆ ವಿದಾಯ ಹೇಳಿದ - ಎಬಿಡಿ

 • ಕ್ರಿಕೆಟ್ ಪ್ರಪಂಚದಲ್ಲಿ Mr.360, ಸೂಪರ್ ಮ್ಯಾನ್ & ಏಲಿಯನ್, ಎಬಿಡಿ ಎಂದೆಲ್ಲ ಕರೆಯಲಾಗುತ್ತಿದ್ದ ಅಬ್ರಹಾಂ ಬೆಂಜಮಿನ್ ಡಿ ವಿಲಿಯರ್ಸ್ ಎಲ್ಲಾ ರೀತಿಯ ಕ್ರಿಕೆಟ್ ಗೆ ನಿವೃತ್ತಿ ಘೋಷಿಸಿದ್ದಾರೆ
 • ದಕ್ಷಿಣ ಆಫ್ರಿಕಾದ ಕ್ರಿಕೆಟ್ ಆಟಗಾರ
 • ಇವರು ಐಪಿಎಲ್ ನಲ್ಲಿ ಆರ್ಸಿಬಿ (RCB) ತಂಡದ ಪರವಾಗಿ ಆಡುತ್ತಿದ್ದರು
 • (IPL - RCB) -2011 ರಿಂದ 2021 ವರೆಗೆ

18. ಕೇಂದ್ರ ಗೃಹ ಸಚಿವಾಲಯವು ದೇಶದ ಅತ್ಯುತ್ತಮ 10 ಪೊಲೀಸ್ ಠಾಣೆಗಳ  ಪಟ್ಟಿಯನ್ನು ಬಿಡುಗಡೆಗೊಳಿಸಿದೆ

 • ದೇಶದ 10 ಅತ್ಯುತ್ತಮ ಪೊಲೀಸ್ ಠಾಣೆಗಳ ಪಟ್ಟಿ  -2021
 1. ಸದರ್ ಬಜಾರ್ ಪೋ.ಠಾ., ಉತ್ತರ ಜಿಲ್ಲೆ, ದೆಹಲಿ
 2. ಗಂಗಾಪುರ್ ಪೋ.ಠಾ., ಗಂಜಮ್, ಒಡಿಶಾ
 3. ಭಟ್ಟು ಕಾಳನ್ ಪೋ.ಠಾ., ಫತೇಹಾಬಾದ್, ಹರಿಯಾಣ
 4. ವಾಲ್ಪೋಯಿ ಪೋ.ಠಾ., ಉತ್ತರ ಗೋವಾ, ಗೋವಾ
 5. ಮಾನ್ವಿ ಪೋ.ಠಾ., ರಾಯಚೂರು, ಕರ್ನಾಟಕ
 6. ಕದ್ಮತ್ ಐಸ್ಲ್ಯಾಂಡ್ ಪೋ.ಠಾ., ಲಕ್ಷದ್ವೀಪ್
 7. ಶಿರಾಳ ಪೋ.ಠಾ., ಸಾಂಗ್ಲಿ, ಮಹಾರಾಷ್ಟ್ರ
 8. ತೊಟ್ಟಿಯಂ ಪೋ.ಠಾ., ತಿರುಚಿರಾಪಳ್ಳಿ, ತಮಿಳುನಾಡು
 9. ಬಸಂತಗಢ್ ಪೋ.ಠಾ., ಉಧಂಪುರ, ಜಮ್ಮು ಮತ್ತು ಕಾಶ್ಮೀರ
 10. ರಾಂಪುರ ಚೌರಂ ಪೋ.ಠಾ., ಅರ್ವಾಲ್, ಬಿಹಾರ್

19. ವಿಶ್ವ ಪುರುಷರ ದಿನ - ನವೆಂಬರ್ - 19

20. ಗುರು ನಾನಕ್ ಜಯಂತಿ - ನವೆಂಬರ್ -19

 • ಸಿಖ್ ಧರ್ಮದ ಸ್ಥಾಪಕ - ಗುರುನಾನಕ್


Also Read |Current Affairs November 2021: Gk


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು