Header Ads Widget

Responsive Advertisement

70+ General Knowledge Questions with Answers | GK Question and Answer- 2021

 70+ General Knowledge Questions with Answers -2021

ಎಲ್ಲಾ ಪರೀಕ್ಷೆಗಳಿಗೆ ಓದಲೇಬೇಕಾದ ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ


General Knowledge, GK Online Quiz, General Knowledge Questions with Answers, GK Question and Answer, GK in Kannada,GK online testHi Everyone,

Welcome to Sam Info World


Test your knowledge with these following Questions...1. ಕರ್ನಾಟಕದ ಯಾವ ಜಿಲ್ಲೆಯಲ್ಲಿ ‘ಅಂಶಿ ರಾಷ್ಟ್ರೀಯ ಉದ್ಯಾನವನ' ಕಂಡು ಬರುತ್ತದೆ ?

ಉ- ಉತ್ತರ ಕನ್ನಡ (ಕಾಳಿ ಹುಲಿ ಸಂರಕ್ಷಿತ ಪ್ರದೇಶ ಎಂತಲೂ ಕರೆಯುತ್ತಾರೆ)

2. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ ?
ಉ- ಚಿಕ್ಕಮಗಳೂರು

3. ವಿಶ್ವಸಂಸ್ಥೆಯ ಕೃಷಿ ಆಸ್ಕರ್ ಪ್ರಶಸ್ತಿಯನ್ನು ಪಡೆದ ಜಗತ್ತಿನ ಮೊದಲ ಸಾವಯವ ರಾಜ್ಯ ಯಾವುದು ?
ಉ- ಸಿಕ್ಕಿಂ ರಾಜ್ಯ

4. 1932 ರಲ್ಲಿ ‘ಅಖಿಲ ಭಾರತ ಹರಿಜನ ಸಮಾಜ'ವನ್ನು ಸ್ಥಾಪಿಸಿದವರು ಯಾರು ?
ಉ- ಮಹಾತ್ಮ ಗಾಂಧಿ

5.  ಭರತನಾಟ್ಯ ಯಾವ ರಾಜ್ಯದ ನೃತ್ಯ ಪ್ರಕಾರವಾಗಿದೆ ?
ಉ- ತಮಿಳುನಾಡು

6. ‘ಉದಯವಾಗಲಿ ನಮ್ಮ ಚೆಲುವ ಕನ್ನಡನಾಡು' ಎಂಬ ಸಾಹಿತ್ಯವನ್ನು ಬರೆದವರು ಯಾರು ?
ಉ- ಹುಯಿಲಗೋಳ ನಾರಾಯಣರಾವ್

7. ಭಾರತವು ಯಾವ ರೀತಿ ಅರ್ಥವ್ಯವಸ್ಥೆಯನ್ನು ಹೊಂದಿದೆ ?
ಉ-  ಮಿಶ್ರ ಅರ್ಥವ್ಯವಸ್ಥೆ

8. ದೇಶದಲ್ಲಿ ಅತಿ ಹೆಚ್ಚು ರಸ್ತೆ ಜಾಲವನ್ನು ಹೊಂದಿರುವ ಭಾರತದ ರಾಜ್ಯ ಯಾವುದು ?
ಉ-  ಮಹಾರಾಷ್ಟ್ರ

9. ಭಾರತದಲ್ಲಿ ಅತಿ ಹೆಚ್ಚು ರಾಜ್ಯಗಳ ಮೂಲಕ ಹಾದುಹೋಗುವ ರೈಲು ಯಾವುದು ?
ಉ- ಹಿಮಸಾಗರ್ ಎಕ್ಸ್ಪ್ರೆಸ್
  * ಭಾರತದ ದಕ್ಷಿಣದ ಕನ್ಯಾಕುಮಾರಿಯಿಂದ - ಜಮ್ಮು ಮತ್ತು ಕಾಶ್ಮೀರದ ಶ್ರೀ ಮಾತಾ ವೈಷ್ಣೋದೇವಿ ಕತ್ರಾ ಚಲಿಸುತ್ತದೆ
  * (3789 ಕಿ.ಮೀ.)
  * 11 ರಾಜ್ಯಗಳ ಮೂಲಕ ಹಾದುಹೋಗುತ್ತದೆ

10. ಭಾರತೀಯ ಉಪಖಂಡದಲ್ಲಿ ಅತಿ ಉದ್ದದ ರೈಲು ಜಾಲ(ಮಾರ್ಗ)ವನ್ನು ಹೊಂದಿರುವ ರೈಲು ಯಾವುದು ?
ಉ- ವಿವೇಕ್ ಎಕ್ಸ್ಪ್ರೆಸ್
  * ಡಿಬ್ರುಗಡ್ ನಿಂದ - ತಮಿಳುನಾಡಿನ ಕನ್ಯಾಕುಮಾರಿ ವರೆಗೆ
  * 4247 ಕಿ.ಮೀ. ಚಲಿಸುತ್ತದೆ
  * ಜಗತ್ತಿನ ಎಂಟನೇ ಸ್ಥಾನದಲ್ಲಿದೆ

11. ಸಿರಿಧಾನ್ಯಗಳ ರಾಜಧಾನಿಯೆಂದು ಭಾರತದ ಯಾವ ರಾಜಧಾನಿಯನ್ನು ಕರೆಯುತ್ತಾರೆ ?
ಉ- ಬೆಂಗಳೂರು

12. ರಷ್ಯಾದ ಸಂಸತ್ತನ್ನು ಏನೆಂದು ಕರೆಯುತ್ತಾರೆ ?
ಉ-  ಡ್ಯೂಮಾ ಮತ್ತು ಕೌನ್ಸಿಲ್ ಆಫ್ ಫೆಡರೇಶನ್

13. ಡೈನಮೋ ಕಂಡುಹಿಡಿದ ವಿಜ್ಞಾನಿ ಯಾರು ?
ಉ- ಮೈಕಲ್ ಫ್ಯಾರಡೆ

14. 1857 ರ ದಂಗೆಯು ಮೊದಲು ಭಾರತದಲ್ಲಿ ಎಲ್ಲಿ ಪ್ರಾರಂಭವಾಯಿತು ?
ಉ- ಬ್ಯಾರಕ್ ಪುರದಲ್ಲಿ

15. ಸೈಮನ್ ಕಮಿಷನ್ ವಿರೋಧಿಸಿ ನಡೆದ ಹೋರಾಟದಲ್ಲಿ ಮರಣಹೊಂದಿದ ಸ್ವಾತಂತ್ರ್ಯ ಹೋರಾಟಗಾರ ಯಾರು ?
ಉ- ಲಾಲಾ ಲಜಪತ್ ರಾಯ್

16. ಸಂಪೂರ್ಣವಾಗಿ ವಾಂಡಿವಾಷ್ ಸಮರದಲ್ಲಿ  ಫ್ರೆಂಚರನ್ನು ಸೋಲಿಸಿದ ಬ್ರಿಟಿಷ್ ಸೇನಾಧಿಕಾರಿ ಯಾರು ?

ಉ- ಸರ್ ಐರ್ ಕೂಟ

17. ಮೂರನೇ ಕರ್ನಾಟಿಕ್ ಯುದ್ಧವು ಯಾರ ಯಾರ ನಡುವೆ ನಡೆಯಿತು ?
ಉ- ಬ್ರಿಟಿಷರು ಮತ್ತು ಫ್ರೆಂಚರು
   * ನಡೆದ ವರ್ಷ - 1756 - 1763
   * ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ ಮತ್ತು ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿಯ ನಡುವೆ

18. ಯಾವ ಒಪ್ಪಂದದ ಮೇರೆಗೆ ‘ಮೊದಲನೇ ಆಂಗ್ಲೋ - ಮರಾಠ ಯುದ್ಧ'ವು ಮುಕ್ತಾಯಗೊಂಡಿತು ?

ಉ- ಸಾಲ್ಬಾಯಿ ಒಪ್ಪಂದ (The Treaty of Salbai)
  * ನಡೆದ ವರ್ಷ - 1775 - 1782
  * ಬ್ರಿಟಿಷ್ ಈಸ್ಟ್ ಇಂಡಿಯಾ ಕಂಪನಿ - ಮರಾಠ ಸಾಮ್ರಾಜ್ಯ

19. ಎರಡನೇ ಆಂಗ್ಲೋ - ಮರಾಠ ಯುದ್ಧವು ಯಾವ  ಒಪ್ಪಂದದೊಂದಿಗೆ ಮುಕ್ತಾಯವಾಯಿತು ?
ಉ- ರಾಜಪುರ್ ಘಾಟ್ ಒಪ್ಪಂದ (The Rajpurghat Treaty)
  * 1803 - 1805

20. ಮೂರನೇ ಆಂಗ್ಲೋ - ಮರಾಠ ಯುದ್ಧವು ಯಾವ ಒಪ್ಪಂದದೊಂದಿಗೆ ಅಂತ್ಯವಾಯಿತು ?
ಉ- ಮಂದಸೌರ್ ಒಪ್ಪಂದ (Treaty of Mandasaur)
  * 1817 - 1818

21.  ಬಕ್ಸರ್ ಕದನ ಯಾರ ಯಾರ ನಡುವೆ ನಡೆಯಿತು ?
ಉ- ಬ್ರಿಟಿಷರು  - ಬಂಗಾಳದ ನವಾಬ ಮೀರ್ ಖಾ‌ಸಿಂ (1764)

22. ಪುಷ್ಪ ರಹಿತ (ಹೂವಿಲ್ಲದ) ಗಿಡಗಳಿಗೆ ಏನೆಂದು ಕರೆಯುತ್ತಾರೆ ?
ಉ- ಕ್ರಿಪ್ಟೊಗಮ್ಸ್

23. ಕರ್ನಾಟಕದಲ್ಲಿ ರೈಲು ಸಂಪರ್ಕವಿಲ್ಲದ ಜಿಲ್ಲೆ ಯಾವುದು ?
ಉ- ಕೂಡಗು

24. ಭಾರತದ ಮೇಲೆ 17 ಬಾರಿ ದಂಡಯಾತ್ರೆ ಮಾಡಿದ  ಪರ್ಷಿಯನ್ ದೊರೆ ಯಾರು ?
ಉ- ಮಹಮದ್  ಘಜ್ನಿ (977 - 1030)
  * ಸ್ಥಾಪಕ - ಅಲಪ್ತಗೀನ್
  * ಭಾರತದ ಮೇಲೆ ದಾಳಿ ನಡೆಸಿದ ಟರ್ಕರ ಮೊದಲ ದೊರೆ - ಸಬಕ್ತಗೀನ್ (ಘಜ್ನಿಯ ತಂದೆ)
  * 993 ರಲ್ಲಿ ಜಯಪಾಲನ ದಾಳಿ (ಪಜಾಕ ಕದನ)

25. ಹೆಣ್ಣುಮಕ್ಕಳ ಶಿಕ್ಷಣಕ್ಕಾಗಿ ಮೊದಲ ಬಾರಿಗೆ ‘ಪ್ರೌಢಶಾಲೆ'ಯನ್ನು ಆರಂಭಿಸಿದ ಸಮಾಜ ಸುಧಾರಕ ಯಾರು ?
ಉ- ಮಹಾದೇವ ಗೋವಿಂದ ರಾನಡೆ
  * ಪಶ್ಚಿಮ ಭಾರತದ ಸಾಂಸ್ಕೃತಿಕ ಪುನರುಜ್ಜೀವನದ ಜನಕ ಎಂದು ಕರೆಯುತ್ತಾರೆ
  * ಮಹಾರಾಷ್ಟ್ರದ ಸಾಕ್ರೆಟಿಸ್ ಎಂತಲೂ ಕರೆಯುತ್ತಾರೆ

26. ರಷ್ಯಾದಲ್ಲಿ ಕಮ್ಯುನಿಸ್ಟ್ ಸರ್ಕಾರವನ್ನು ಸ್ಥಾಪಿಸಿದವರು ಯಾರು ?
ಉ- ವ್ಲಾಡಿಮಿರ್ ಲೆನಿನ್
  * ಪೂರ್ಣ ಹೆಸರು - ವ್ಲಾಡಿಮಿರ್ ಇಲಿಚ್ ಉಲಿಯಾನೊವ್

27. ಉತ್ತರ ಪಥೇಶ್ವರ ಎಂಬ ಬಿರುದನ್ನು ಹೊಂದಿದ ಭಾರತೀಯ ಅರಸ ಯಾರು ?
ಉ- ಹರ್ಷವರ್ಧನ

28. ಅಂತರಾಷ್ಟ್ರೀಯ ಹಣಕಾಸು ನಿಧಿಯ (IMF) ಪ್ರಧಾನ ಕಛೇರಿ ಎಲ್ಲಿದೆ ?
ಉ- ವಾಷಿಂಗ್ಟನ್ ಡಿ.ಸಿ., ಯುನೈಟೆಡ್ ಸ್ಟೇಟ್ಸ್

29. ಚೀನಾ ರಾಷ್ಟ್ರವನ್ನು ಕಮ್ಯುನಿಸ್ಟ್ ರಾಷ್ಟ್ರವೆಂದು ಯಾವಾಗ ಘೋಷಿಸಲಾಯಿತು ?
ಉ-  ಕ್ರಿ.ಶ. 1949
  * ಸ್ಥಾಪಕ - ಮಾವೊತ್ಸೆತುಂಗ್

30. ಅಮೆರಿಕದ ನೌಕಾನೆಲೆ ಪರ್ಲ್ ಹಾರ್ಬರ್ (Pearl Harbor)  ಮೇಲೆ ವೈಮಾನಿಕ ದಾಳಿ ಮಾಡಿದ ದೇಶ ಯಾವುದು ?
ಉ- ಜಪಾನ್
  * 7 ಡಿಸೆಂಬರ್ 1941

31. ಭಾರತದ ಪ್ರಪ್ರಥಮ ಕಾಗದದ ಕೈಗಾರಿಕೆಯನ್ನು ಪಶ್ಚಿಮಬಂಗಾಳದ ಯಾವ ನದಿಯ ತೀರದಲ್ಲಿ ಸ್ಥಾಪನೆ ಮಾಡಲಾಯಿತು?
ಉ- ಹೂಗ್ಲಿ ನದಿ ( ಸೆರಾಂಪುರ ಎಂಬಲ್ಲಿ)
  * ಸ್ಥಾಪನೆ - 1832

32. ವಾಟ್ಸಪ್ (WhatsApp) ಅನ್ನು ಆರಂಭಿಸಿದವರು ಯಾರು ?
ಉ- ಜಾನ್ ಕೌಮ್ & ಬ್ರಿಯಾನ್ ಆಕ್ಟನ್

33. ಹಾರ್ಡ್ ಡಿಸ್ಕ್ ಗಳ ಸಮೂಹ ಜೋಡಣೆಯನ್ನು ಏನೆಂದು ಕರೆಯುತ್ತಾರೆ ?
ಉ- ಡಿಸ್ಕ್ ಪ್ಯಾಕ್

34. ಡೆಸ್ಕ್ ಟಾಪ್ ನಲ್ಲಿರುವ ಸಣ್ಣಸಣ್ಣ ಚಿತ್ರಗಳನ್ನು ಏನೆಂದು ಕರೆಯುತ್ತಾರೆ ?
ಉ- ಐಕಾನ್ಸ್

35. RAM - ಅನ್ನು ವಿಸ್ತರಿಸಿ ಬರೆಯಿರಿ..
ಉ- Random Access Memory
  *ತಾತ್ಕಾಲಿಕ ಮೆಮೊರಿ

36. ROM - ಅನ್ನು ವಿಸ್ತರಿಸಿ ಬರೆಯಿರಿ..
ಉ- Read Only Memory
  * ಶಾಶ್ವತ ಅಥವಾ ಪರ್ಮನೆಂಟ್ ಮೆಮೊರಿ

37. URL - ಅನ್ನು ವಿಸ್ತರಿಸಿ ಬರೆಯಿರಿ..
ಉ- Uniform Resource Locator

38. ಕರ್ನಾಟಕದಲ್ಲಿ ದೊರೆತ ಮೊದಲ ಸಂಸ್ಕೃತ ಶಾಸನ ಯಾವುದು ?
ಉ- ತಾಳಗುಂದ ಶಾಸನ

39. ‘ಜೈಮಿನಿ ಭಾರತ' ಇದು ಯಾರ ಕಾವ್ಯವಾಗಿದೆ ?
ಉ- ಲಕ್ಷ್ಮೀಶ
  * ಬಿರುದು -  ಉಪಮಾಲೋಲ, ಕರ್ನಾಟಕ ಕವಿ ಚೂತವನ ಚೈತ್ರ

40. ನೆನಪಿನ ದೋಣಿಯಲ್ಲಿ ಇದು ಯಾರ ಆತ್ಮಕಥನವಾಗಿದೆ ?
ಉ- ಕುವೆಂಪು
  * ಪೂರ್ಣ ಹೆಸರು - ಕುಪ್ಪಳ್ಳಿ ವೆಂಕಟಪ್ಪ ಪುಟ್ಟಪ್ಪ
  * ಕಾದಂಬರಿಗಳು - ಮಲೆಗಳಲ್ಲಿ ಮದುಮಗಳು, ಕಾನೂರು ಹೆಗ್ಗಡತಿ
  * ಪ್ರಮುಖ ನಾಟಕಗಳು - ಶೂದ್ರ ತಪಸ್ವಿ, ಸ್ಮಶಾನ ಕುರುಕ್ಷೇತ್ರಂ, ಬೆರಳ್ ಗೆ ಕೊರಳ್

41. ಕನ್ನಡಕ್ಕೆ 8ನೇ ಜ್ಞಾನಪೀಠ ಪ್ರಶಸ್ತಿಯನ್ನು ಪಡೆದ ಸಾಹಿತಿ/ಲೇಖಕರು ಯಾರು ?
ಉ-  ಡಾ.ಚಂದ್ರಶೇಖರ್ ಕಂಬಾರ್
  * ಸ್ಥಳ - ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಘೋಡಗೇರಿ ( ತಂದೆ - ಬಸವಣ್ಣೆಪ್ಪ, ತಾಯಿ - ಚೆನ್ನಮ್ಮ)
  * ಬೋಳೇ ಶಂಕರ - ಪ್ರಮುಖ ನಾಟಕ

42. ವಸ್ತುಗಳನ್ನು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಸಾಗಿಸುವ  ಅಂಗವ್ಯೂಹಕ್ಕೆ ಏನೆಂದು ಕರೆಯುತ್ತಾರೆ ?
ಉ- ಸಾಗಾಣಿಕಾ ವ್ಯೂಹ

43. ನಿಕೋಟಿನ್ ಆಮ್ಲದ ಕೊರತೆಯಿಂದ ಬರುವ ಕಾಯಿಲೆ ಯಾವುದು ?
ಉ-  ಪೆಲಾಗ್ರ ಕಾಯಿಲೆ

44. ಒಂದು ಹಾರ್ಸ್ ಪವರ್ (HP) ಎಷ್ಟು ವ್ಯಾಟ್ ಗಳಿಗೆ ಸಮನಾಗಿರುತ್ತದೆ ?
ಉ- 746 ವ್ಯಾಟ್

45. ಮಧ್ಯಸಾರ ಮತ್ತು ನೀರಿನ ದ್ರಾವಣವನ್ನು ಯಾವ ವಿಧಾನದಿಂದ ಬೇರ್ಪಡಿಸುತ್ತಾರೆ ?
ಉ-  ಆಂಶಿಕ ಭಟ್ಟಿ ಇಳಿಸುವಿಕೆ

46. ಕೃತಕ ಹೃದಯವನ್ನು ಅಳವಡಿಸಿಕೊಂಡ ಜಗತ್ತಿನ ಮೊದಲ ವ್ಯಕ್ತಿ ಯಾರು ?
ಉ- ಬಾರ್ನಿ   ಕ್ಲಾರ್ಕ್ (Barney Clark) - 1982

47. ಭಾರತದಲ್ಲಿ 12 ನೇ ಹಣಕಾಸು ಆಯೋಗದ ಅಧ್ಯಕ್ಷರು ಯಾರಾಗಿದ್ದರು ?
ಉ- ಸಿ. ರಂಗರಾಜನ್
  * ಭಾರತದ ಮೊದಲ ಹಣಕಾಸು ಆಯೋಗದ ಅಧ್ಯಕ್ಷರು - ಕ್ಷಿತೀಶ್ ಚಂದ್ರ ನಿಯೋಜಿ ( Kshitish Chandra Neogy)

48. ಅರ್ಜೆಂಟೈನಾದ ರಾಜಧಾನಿ ಯಾವುದು ?
ಉ-  ಬ್ಯೂನಸ್ ಐರಿಸ್
  * ಕರೆನ್ಸಿ - ಪೆಸೊ ಡಾಲರ್

49. ಟಿಪ್ಪುಸುಲ್ತಾನನ ಮೊದಲ ಹೆಸರೇನು ?
ಉ-  ಫತೇ ಅಲಿ ಸಾಹಬ್ ಟಿಪ್ಪು (Fateh Ali Sahab Tippu)

50. ಕರ್ನಾಟಕದ ವಾಯುವ್ಯ ರಸ್ತೆ ಸಾರಿಗೆ ನಿಗಮದ ಕೇಂದ್ರ ಕಚೇರಿ ಎಲ್ಲಿದೆ ?
ಉ- ಹುಬ್ಬಳ್ಳಿ

51. ಭಾರತದಲ್ಲಿ ಜೀತ ಪದ್ಧತಿ ನಿರ್ಮೂಲನಾ ಕಾಯ್ದೆಯನ್ನು ಅಂಗೀಕರಿಸಿದ ವರ್ಷ ಯಾವುದು ?
ಉ- 1976

52. ‘ಕಿಸಾನ್ ದಿವಸ್' ಅನ್ನು ಯಾವ ದಿನದಂದು ಆಚರಿಸುತ್ತೇವೆ ?
ಉ- ಡಿಸೆಂಬರ್ - 23

53. ‘ದಿ ಎಕಾನಮಿ ಹಿಸ್ಟರಿ ಆಫ್ ಇಂಡಿಯಾ' (The Economic History of India) ಎಂಬ ಪುಸ್ತಕವನ್ನು ಬರೆದವರು ಯಾರು ?
ಉ- ಆರ್. ಸಿ. ದತ್ತ್ (Romesh Chunder Dutt)

54. ಭಾರತದ ಅತಿ ದೊಡ್ಡ ತಾಮ್ರದ ಗಣಿ ಯಾವ ರಾಜ್ಯದಲ್ಲಿ ಕಂಡುಬರುತ್ತದೆ ?
ಉ- ಮಧ್ಯಪ್ರದೇಶ (ಮಲಂಜ ಖಂಡ)

55. ಖೇತ್ರಿ ಮತ್ತು ಉದಯಪುರ ತಾಮ್ರದ ಗಣಿ ಯಾವ ರಾಜ್ಯದಲ್ಲಿ ಕಂಡುಬರುತ್ತವೆ ?
ಉ- ರಾಜಸ್ಥಾನ್

56. ಭಾರತದ ನೆಪೋಲಿಯನ್ ಎಂದು ಯಾರನ್ನು ಕರೆಯುತ್ತಾರೆ ?
ಉ- ಸಮುದ್ರಗುಪ್ತ

57. ಪ್ರಪಂಚದ ಅತಿ ದೊಡ್ಡ ನದಿ ಯಾವುದು ?
ಉ- ಅಮೆಜಾನ್ ನದಿ (ಅತಿದೊಡ್ಡ ಜಲನಯನ ನದಿಪ್ರದೇಶ)

58. ಜಗತ್ತಿನ ಅತಿ ಉದ್ದವಾದ ನದಿ ಯಾವುದು ?
ಉ- ನೈಲ್ ನದಿ

59. ವಿಸ್ತೀರ್ಣದಲ್ಲಿ ಅತಿ ದೊಡ್ಡ ಖಂಡ ಯಾವುದು ?
ಉ- ಏಷ್ಯಾ ಖಂಡ

60. ವಿಸ್ತೀರ್ಣದಲ್ಲಿ ಅತಿ ಚಿಕ್ಕ ಖಂಡ ಯಾವುದು ?
ಉ-  ಆಸ್ಟ್ರೇಲಿಯಾ ಖಂಡ

61. ಕನ್ನಡದ ಮೊದಲ ಶಾಸನ ಯಾವುದು ?
ಉ- ಹಲ್ಮಿಡಿ ಶಾಸನ

62.  ‘ಎ ಪ್ರಾಮಿಸ್ ಲ್ಯಾಂಡ್' (A Promise Land) ಪುಸ್ತಕದ ಕರ್ತೃ ಯಾರು ?
ಉ- ಬರಾಕ್ ಒಬಾಮ

63. ‘ದಿ ವೈಟ್ ಟೈಗರ್' (The White Tiger) ಎಂಬ ಗ್ರಂಥವನ್ನು ಬರೆದವರು ಯಾರು ?
ಉ- ಅರವಿಂದ ಅಡಿಗ

64. ಭಾರತದಲ್ಲಿ ಸಾಹಿತ್ಯಕ್ಷೇತ್ರಕ್ಕೆ ನೀಡುವ ಅತ್ಯುನ್ನತ ಪ್ರಶಸ್ತಿ ಯಾವುದಾಗಿದೆ ?
ಉ- ಜ್ಞಾನಪೀಠ ಪ್ರಶಸ್ತಿ

65. ಯಾವ ದೇಶವನ್ನು ‘ಕವಿಗಳ ಭೂಮಿ' ಎಂದು ಕರೆಯುತ್ತಾರೆ ?
ಉ- ಚಿಲಿ ದೇಶ
 
66. ಭಾರತೀಯ ಸಂವಿಧಾನದಲ್ಲಿ  ಒಟ್ಟು ಎಷ್ಟು ಮೂಲಭೂತ ಕರ್ತವ್ಯಗಳಿವೆ ?
ಉ- 11 ಮೂಲಭೂತ ಕರ್ತವ್ಯಗಳು

67. ರಾಮಾನುಜಾಚಾರ್ಯರು ಪ್ರತಿಪಾದಿಸಿ ಸಿದ್ಧಾಂತ ಯಾವುದು ?
ಉ- ವಿಶಿಷ್ಟಾದ್ವೈತ ಸಿದ್ಧಾಂತ

68. ಘಟಪ್ರಭಾ ಯಾವ ನದಿಯ ಉಪನದಿಯಾಗಿದೆ ?
ಉ- ಕೃಷ್ಣಾ ನದಿ

69. ಮಹಮ್ಮದ್ ಪೈಗಂಬರರ ಅನುಯಾಯಿಗಳನ್ನು ಏನೆಂದು ಕರೆಯುತ್ತಿದ್ದರು ?
ಉ- ಖಲೀಫರು

70. ಮಧ್ಯಪ್ರದೇಶದ ರಾಜಧಾನಿ ಯಾವುದು ?
ಉ- ಭೂಪಾಲ್
*ವಿ.ಸೂ. - ನಮ್ಮ ಈ ಸಣ್ಣ ಪ್ರಯತ್ನದಲ್ಲಿ ಏನಾದರೂ ತಪ್ಪು/ದೋಷಗಳು ಕಂಡುಬಂದರೆ ದಯಮಾಡಿ ಕೆಳಗೆ ಕಾಮೆಂಟ್ ರೂಪದಲ್ಲಿ ತಿಳಿಸಿ...🙏🙏ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು