50+ Current Affairs - November 2021
Daily and latest updated Current Affairs in Kannada
ನವೆಂಬರ್ ತಿಂಗಳಿನ ಪ್ರಚಲಿತ ವಿದ್ಯಮಾನಗಳು ಭಾಗ - 1#
Hi Everyone,
Welcome to SAM INFO WORLD
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಸಂಭವನೀಯ ಪ್ರಶ್ನೋತ್ತರಗಳು (ವಿವರಣೆಯೊಂದಿಗೆ)
1. ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ನಲ್ಲಿ ಚಿನ್ನದ ಪದಕ ಪಡೆದ ಬಾಕ್ಸಿಂಗ್ ಪಟು ಯಾರು ?
ಉ- ಕಿಕ್ ಬಾಕ್ಸರ್ ತಜಮುಲ್ ಇಸ್ಲಾಂ
* ನಡೆದ ಸ್ಥಳ - ಈಜಿಪ್ಟ್ ದೇಶದ ಕೈರೋ
* ವಿಶ್ವ ಕಿಕ್ ಬಾಕ್ಸಿಂಗ್ ಚಾಂಪಿಯನ್ಶಿಪ್ ಚಿನ್ನದ ಪದಕ ಪಡೆದ ಜಮ್ಮು ಮತ್ತು ಕಾಶ್ಮೀರದ ಏಕೈಕ ಬಾಕ್ಸಿಂಗ್ ಪಟು
2. ಪೋಷಕರ ಸಂವಾದ ಕಾರ್ಯಕ್ರಮವನ್ನು ಯಾವ ರಾಜ್ಯ ಸರ್ಕಾರ ಆರಂಭಿಸಿದೆ ?
ಉ- ದೆಹಲಿ
3. ಅನಿತಾ ಆನಂದ ರವರು ಯಾವ ದೇಶದ ರಕ್ಷಣಾ ಸಚಿವರಾಗಿ ನೇಮಕಗೊಂಡಿದ್ದಾರೆ ?
ಉ- ಕೆನಡಾ ದೇಶ (ಭಾರತೀಯ ಮೂಲದ ರಾಜಕಾರಣಿ)
* ಕೆನಡಾ ದೇಶದ ರಾಜಧಾನಿ - ಒಟ್ಟಾವ (Ottawa)
* ಕರೆನ್ಸಿ - ಕೆನಡಿಯನ್ ಡಾಲರ್
4. ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ‘ಫೇಸ್ಬುಕ್' ಗೆ ಮರುನಾಮಕರಣ ಮಾಡಿದ ಹೆಸರೇನು ?
ಉ- ಮೆಟಾ (Meta)
* ಸ್ಥಾಪಕ - ಮಾರ್ಕ್ ಜುಕರ್ಬರ್ಗ್
5.‘ ಒಂದು ಸೂರ್ಯ ಒಂದು ಜಗತ್ತು ಗ್ರಿಡ್' ( Of Sun, One World, One Grid)ಎಂಬ ಯೋಜನೆಯನ್ನು ಯಾವ ಎರಡು ದೇಶಗಳು ಜಂಟಿಯಾಗಿ ಪ್ರಸ್ತಾಪಿಸಿದವು ?
ಉ- ಭಾರತ - ಬ್ರಿಟನ್
* ಉದ್ಘಾಟನೆ - ನರೇಂದ್ರ ಮೋದಿ
6. ಮೌಲಾನಾ ಅಬುಲ್ ಕಲಾಂ ಆಜಾದ್ ಟ್ರೋಫಿ 2021 ಅನ್ನು ಯಾವ ವಿಶ್ವವಿದ್ಯಾಲಯವು ಪಡೆದುಕೊಂಡಿದೆ ?
ಉ- ಪಂಜಾಬ್ ವಿಶ್ವವಿದ್ಯಾಲಯ
7. ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಆದಿಗುರು ಶಂಕರಾಚಾರ್ಯರ ಪ್ರತಿಮೆಯನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಯಿತು ?
ಉ- ಕೇದಾರನಾಥ್ ದೇವಾಲಯ
* ಪ್ರತಿಮೆ ಎತ್ತರ - 12 ಅಡಿ
* ಉದ್ಘಾಟನೆ - ನರೇಂದ್ರ ಮೋದಿ
* ಶಿಲ್ಪಿ - ಮೈಸೂರು ಶಿಲ್ಪಿ ಅರುಣ್ ಯೋಗಿರಾಜ್ ತಂಡ
* ತೂಕ - 35 ಟನ್
8. ವಿಶ್ವದ ಅತಿದೊಡ್ಡ ಬ್ಯಾಟನ್ನು ಯಾವ ನಗರದಲ್ಲಿ ಬಿಡುಗಡೆ ಮಾಡಲಾಗಿದೆ ?
ಉ- ಹೈದರಾಬಾದ್
9. ಏಷ್ಯಾ ಆರೋಗ್ಯ 2021 ಶೃಂಗಸಭೆಯ ಧ್ಯೇಯವಾಕ್ಯ ಏನಾಗಿದೆ ?
ಉ- Transforming Healthcare for a Better Tomorrow
10. ಪ್ರಸ್ತುತ ಕೇಂದ್ರ ವಿಜಿಲೆನ್ಸ್ ಕಮಿಷನರ್ ಯಾರು ?
ಉ- ಸುರೇಶ್ ಎನ್ ಪಟೇಲ್
11. ‘ಪ್ರಧಾನ ಮಂತ್ರಿ ಜನ್ ಧನ್ ಯೋಜನೆ'ಯನ್ನು ಪ್ರಾರಂಭಿಸಿದ ವರ್ಷ ?
ಉ- 2014
12. ಭಾರತದ ಕ್ರಿಕೆಟ್ ತಂಡದ ಮುಖ್ಯ ಕೋಚ್ ಆಗಿ ಯಾರನ್ನೂ ನೇಮಕ ಮಾಡಲಾಗಿದೆ ?
ಉ- ರಾಹುಲ್ ದ್ರಾವಿಡ್
* ಬೌಲಿಂಗ್ ಕೋಚ್ - ಭರತ್ ಅರುಣ್
* ಫೀಲ್ಡಿಂಗ್ ಕೋಚ್ - ರಾಮಕೃಷ್ಣ ಶ್ರೀಧರ್
13. ಸಾರ್ವಜನಿಕ ಆಡಳಿತ ಸೂಚ್ಯಂಕ - 2021 (Public Affairs Index) ರಲ್ಲಿ ಯಾವ ರಾಜ್ಯ ಅಗ್ರಸ್ಥಾನದಲ್ಲಿದೆ ?
ಉ- ಕೇರಳ
* ಕರ್ನಾಟಕ 7ನೇ ಸ್ಥಾನ -2021
* ಕರ್ನಾಟಕ 5ನೇ ಸ್ಥಾನ - 2020
14. 2020 - 21 ನೇ ಸಾಲಿನ ಕನ್ನಡ ರಾಜ್ಯೋತ್ಸವ ಪ್ರಶಸ್ತಿಯನ್ನು ಎಷ್ಟು ಜನ ಸಾಧಕರಿಗೆ ನೀಡಲಾಗಿದೆ ?
ಉ- 66 ಜನರಿಗೆ
15. ಪ್ರಧಾನಮಂತ್ರಿಯ ಆರ್ಥಿಕ ಸಲಹಾ ಮಂಡಳಿಯ ಅಧ್ಯಕ್ಷರಾಗಿ ಯಾರನ್ನು ನೇಮಕ ಮಾಡಲಾಯಿತು ?
ಉ- ಬಿಬೇಕ್ ಡೆಬ್ರಾಯ್ (Bibek Debroy)
* Economic Advisory Council to PM
16. ಇತ್ತೀಚಿಗೆ ನೂತನವಾಗಿ ನೇಮಕಗೊಂಡ ಕೆ.ವಿ. ಕಾಮತ್ ಅವರು ಯಾವ ಬ್ಯಾಂಕಿನ ಅಧ್ಯಕ್ಷರಾಗಿ ನೇಮಕಗೊಂಡಿರುತ್ತಾರೆ ?
ಉ- NaBFID
* National Bank for Financing Infrastructure and Development
* ಪ್ರಧಾನ ಕಛೇರಿ - ಮುಂಬೈ
* ಸ್ಥಾಪನೆ - 2021
17. ಇತ್ತೀಚೆಗೆ ಕರ್ನಾಟಕದ ಯಾವ ರಾಷ್ಟ್ರೀಯ ಉದ್ಯಾನವನದಲ್ಲಿ ರಣಹದ್ದು ಸಂತಾನೋತ್ಪತ್ತಿ ಕೇಂದ್ರ ಸ್ಥಾಪಿಸಲು ಶಂಕುಸ್ಥಾಪನೆ ಮಾಡಲಾಯಿತು ?
ಉ- ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನ
* ಕಾಮಗಾರಿ ಮೊತ್ತ - 2.72 ಕೋಟಿ ರೂ.
* ರಣಹದ್ದುಗಳಿಂದ ಸಂತಾನೋತ್ಪತ್ತಿ
* 6 ತಿಂಗಳಲ್ಲಿ ಕಾರ್ಯಾರಂಭ
18. ಪಂಜಾಬ್ ರಾಜ್ಯ ಸರ್ಕಾರವು ಸಿಂಧೂನದಿಯ ಯಾವ ಜಲಚರ ಜೀವಿಗಳ ಗಣತಿಯನ್ನು ಮಾಡಲು ಮುಂದಾಗಿದೆ ?
ಉ- ಡಾಲ್ಫಿನ್ ಗಳ ಗಣತಿ
* ನದಿ - ಸಿಂಧೂ ನದಿ
* ರಾಜ್ಯ - ಪಂಜಾಬ್ ರಾಜ್ಯ
* ಪಂಜಾಬ್ ರಾಜ್ಯದ ಜಲಚರ ಪ್ರಾಣಿ ಡಾಲ್ಫಿನ್ ( 2019 ರಲ್ಲಿ ಘೋಷಣೆ)
19. ಇತ್ತೀಚಿಗೆ 'ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳ ಸಿಬ್ಬಂದಿ'ಗಾಗಿ ‘ಆಯುಷ್ಮಾನ್ ಆರೋಗ್ಯ ರಕ್ಷಣಾ ಯೋಜನೆ'ಗೆ ಚಾಲನೆ ನೀಡಿದವರು ಯಾರು ?
ಉ- ಅಮಿತ್ ಶಾ
* ಯೋಜನೆ ಉದ್ದೇಶ - 35 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬ ಆಯುಷ್ಮಾನ್ ಯೋಜನೆ ವ್ಯಾಪ್ತಿಗೆ ಒಳಪಟ್ಟ ದೇಶದ ಯಾವುದೇ ಆಸ್ಪತ್ರೆಗಳಲ್ಲಿ ಉಚಿತವಾಗಿ ಚಿಕಿತ್ಸೆ ಪಡೆಯಬಹುದು
* 35 ಲಕ್ಷ ಸಿಬ್ಬಂದಿ ಮತ್ತು ಅವರ ಕುಟುಂಬಕ್ಕೆ ಆರೋಗ್ಯ ವಿಮೆ ಸೌಲಭ್ಯ
20. ಇತ್ತೀಚಿಗೆ ಭಾರತದಲ್ಲಿ ಅಭಿವೃದ್ಧಿಪಡಿಸಲಾದ ಕೋವಿಡ್ ಲಸಿಕೆ ‘ಕೋವ್ಯಾಕ್ಸಿನ್' [COVAXIN] ಅನ್ನು ಯಾವ ಕಂಪನಿ ಅಭಿವೃದ್ಧಿಪಡಿಸಲಾಗಿದೆ ?
ಉ- ಭಾರತ್ ಬಯೋಟೆಕ್
* WHO - ಕೋವ್ಯಾಕ್ಸಿನ್ ಲಸಿಕೆಗೆ ಮಾನ್ಯತೆ ನೀಡಿದೆ
21. ಯಾವ ದಿನದಂದು ‘ವಿಶ್ವ ಸುನಾಮಿ ಜಾಗೃತಿ ದಿನ' [World Tsunami Awareness Day] ಎಂದು ಆಚರಿಸುತ್ತೇವೆ ?
ಉ- ನವಂಬರ್ - 5
22. ‘ಆಯುರ್ವೇದದ ದಿನ'ವನ್ನು ಯಾವ ದಿನದಂದು ಆಚರಿಸುತ್ತೇವೆ ?
ಉ- ನವೆಂಬರ್ - 2
24. ಅಕ್ಟೋಬರ್ 30 - 31 ರಂದು ನಡೆದ 16ನೇ ಆವೃತ್ತಿ G-20 ಶೃಂಗಸಭೆ ಯಾವ ದೇಶದಲ್ಲಿ ನಡೆಯಿತು ?
ಉ- ಇಟಲಿಯ ರೋಮ್
* ಸ್ಥಾಪನೆ - 1999
* ಸದಸ್ಯ ರಾಷ್ಟ್ರಗಳ ಸಂಖ್ಯೆ - 20
* G-20 ಅಭಿವೃದ್ಧಿ ಹೊಂದಿದ ಮತ್ತು ಅಭಿವೃದ್ಧಿ ಹೊಂದುತ್ತಿರುವ ರಾಷ್ಟ್ರಗಳ ಸಂಘಟನೆ
*G-7 ಅಭಿವೃದ್ಧಿ ಹೊಂದಿದ ರಾಷ್ಟ್ರಗಳ ಸಂಘಟನೆ
* 2020 - ಸೌದಿ ಅರೇಬಿಯಾ [ನಡೆಯಿತು]
* 2021 - ಇಟಲಿ [ನಡೆಯಿತು]
* 2022 - ಇಂಡೋನೇಷ್ಯಾ [ನಡೆಯಲಿದೆ]
* 2023 - ಭಾರತ [ನಡೆಯಲಿದೆ]
25. ಗುಜರಾತಿನ ಪ್ರಸ್ತುತ ರಾಜ್ಯಪಾಲರು ಯಾರಾಗಿದ್ದಾರೆ ?
ಉ- ಆಚಾರ್ಯ ದೇವವ್ರತ
26. 2021ರ ಮೇಜರ್ ಧ್ಯಾನಚಂದ್ ಖೇಲ್ ರತ್ನ ಪ್ರಶಸ್ತಿಯನ್ನು ಎಷ್ಟು ಜನ ಕ್ರೀಡಾಪಟುಗಳಿಗೆ ನೀಡಲಾಗುತ್ತದೆ ?
ಉ- 12 ಕ್ರೀಡಾಪಟುಗಳು
27. ‘ವಿಶ್ವ ನಗರಗಳ ದಿನ'ವನ್ನು (World Cities Day) ಯಾವ ದಿನದಂದು ಆಚರಿಸುತ್ತೇವೆ ?
ಉ- ಅಕ್ಟೋಬರ್ - 31
* ಧ್ಯೇಯವಾಕ್ಯ - Better City, Better Life (2021)
28. ಭಾರತದ ಅತಿ ದೊಡ್ಡ ‘ಆರೊಮ್ಯಾಟಿಕ್ (ಸುಗಂಧ ಉದ್ಯಾನ) ಉದ್ಯಾನ'ವನ್ನು ಯಾವ ಸ್ಥಳದಲ್ಲಿ ಉದ್ಘಾಟಿಸಲಾಯಿತು ?
ಉ- ಉತ್ತರಾಖಂಡ್ ರಾಜ್ಯದ ನೈನಿತಾಲ್ ಜಿಲ್ಲೆಯ ಲಾಲ್ಕುವಾನ್ ಎಂಬಲ್ಲಿ
* ಉದ್ಯಾನದ ಹೆಸರು - ಸುರಭಿ ವಾಟಿಕಾ
* 3 ಎಕರೆ ಪ್ರದೇಶದಲ್ಲಿ ಸುಮಾರು 140ಕ್ಕೂ ಹೆಚ್ಚು ಪ್ರಭೇದಗಳ ಪರಿಮಳಯುಕ್ತ ಉದ್ಯಾನ
29. ಇಸ್ರೇಲ್ ದೇಶದ ರಾಜಧಾನಿ ಯಾವುದು ?
ಉ- ಜೆರುಸಲೆಮ್
* ಕರೆನ್ಸಿ - ಇಸ್ರೇಲಿ ಶೆಕೆಲ್
30. ಉಜ್ಬೇಕಿಸ್ತಾನದ ರಾಜಧಾನಿ ಯಾವುದು ?
ಉ- ತಾಷ್ಕೆಂಟ್
31. ‘ವಿಶ್ವ ಅಂತರ್ಜಾಲ ದಿನ' [International Internet Day) ಅನ್ನು ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ಅಕ್ಟೋಬರ್ - 29
32. ‘ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನ'ವನ್ನು (National Cancer - Awareness Day) ಯಾವ ದಿನದಂದು ಆಚರಿಸಲಾಗುತ್ತದೆ ?
ಉ- ನಂಬರ್ - 7
33. ಇತ್ತೀಚಿಗೆ ನಿಧನರಾದ ಪುನೀತ್ ರಾಜಕುಮಾರ್ ರವರಿಗೆ ಮರಣೋತ್ತರವಾಗಿ ಯಾವ ಪ್ರಶಸ್ತಿಯನ್ನು ನೀಡಲಾಗುವುದು ಎಂದು ಮುರುಘಾ ಮಠ ಪ್ರಸ್ತಾಪಿಸಿದೆ ?
ಉ- ಬಸವಶ್ರೀ ಪ್ರಶಸ್ತಿ
* ನೀಡಿಕೆ - ಚಿತ್ರದುರ್ಗದ ಮುರುಘಾಮಠ
* ಪ್ರಶಸ್ತಿ ಮೊತ್ತ - 5 ಲಕ್ಷ ರೂಪಾಯಿ
* ಪರಿಗಣನೆ - ಬಾಲನಟ, ನಾಯಕ ನಟ, ಹಿನ್ನೆಲೆ ಗಾಯಕ, ಅನೇಕ ಸರ್ಕಾರಿ ಯೋಜನೆಗಳ ರಾಯಭಾರಿಯಾಗಿ, ನಿರ್ಮಾಪಕರಾಗಿ ಕನ್ನಡಕ್ಕೆ & ಕನ್ನಡ ಚಿತ್ರರಂಗಕ್ಕೆ ಕೊಡುಗೆ ಅಪಾರ
34. ಪ್ರಸ್ತುತ ಭಾರತದ ನೌಕಾಪಡೆಯ ಮುಖ್ಯಸ್ಥರು ಯಾರು ?
ಉ- ಅಡ್ಮಿರಲ್ ಕರಂಬಿರ್ ಸಿಂಗ್
35. ಇತ್ತೀಚಿಗೆ ಯಾವ ಸಂಸ್ಥೆಯು ‘Whistle Blower Portal' ಅನ್ನು ಆರಂಭಿಸಿದೆ ?
ಉ- The Indian Renewable Energy Development Agency Limited (IREDA)
* ಭಾರತದ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ಸಂಸ್ಥೆ (IREDA), ಹೊಸ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯದ ಅಡಿಯಲ್ಲಿ “ವಿಜಿಲೆನ್ಸ್ ಅವೇರ್ನೆಸ್ ವೀಕ್" 2021 ರ ಭಾಗವಾಗಿ ‘ವಿಸಿಲ್ ಬ್ಲೋವೆರ್ ಪೋರ್ಟಲ್' ಅನ್ನು ಆರಂಭಿಸಿದೆ.
36. ನಿರ್ಮಾಣ ಮತ್ತು ಕೈಗಾರಿಕೆ ಕಾರ್ಮಿಕರಿಗೆ ಸಬ್ಸಿಡಿ ದರದಲ್ಲಿ ವಿದ್ಯುತ್ ದ್ವಿಚಕ್ರ ವಾಹನಗಳನ್ನು ಒದಗಿಸಲು ಗೋ-ಗ್ರೀನ್ [Go-Green) ಯೋಜನೆಯನ್ನು ಯಾವ ರಾಜ್ಯ ಸರ್ಕಾರ ಅನಾವರಣಗೊಳಿಸಿದೆ ?
ಉ- ಗುಜರಾತ್ ರಾಜ್ಯ ಸರ್ಕಾರ
37. ಆಫ್ರಿಕಾದ ಕವಿ ಡೆಮನ್ ಗಾಲ್ಗಟ್ 2021ರ ಯಾವ ಪ್ರಶಸ್ತಿಗೆ ಭಾಜನರಾಗಿದ್ದಾರೆ ?
ಉ- ಬೂಕರ್ ಪ್ರಶಸ್ತಿ
* ಕಾದಂಬರಿ - ದಿ ಪ್ರಾಮಿಸ್ (The Promise)
* ಸ್ಥಾಪನೆ - 1969
38. ಇಸ್ರೇಲ್ ನಲ್ಲಿ ನಡೆದ ಬ್ಲೂ ಫ್ಲ್ಯಾಗ್ 2021 ಅಂತರಾಷ್ಟ್ರೀಯ ವ್ಯಾಯಾಮದಲ್ಲಿ ಭಾರತದ ಯಾವ ವಾಯುಪಡೆ ಭಾಗವಹಿಸತು ?
ಉ- ಭಾರತೀಯ ವಾಯುಪಡೆ ಮಿರಾಜ್ 2000 ಏರ್ ಕ್ರಾಫ್ಟ್ ಸ್ಕ್ವಾಡ್ರನ್
39. ಇತ್ತೀಚಿಗೆ ನಿಧನರಾದ ತಾರಕ್ ಸಿನ್ಹಾ ಯಾವ ಕ್ರೀಡೆಗೆ ಹೆಸರುವಾಸಿಯಾಗಿದ್ದರು ?
ಉ- ಕ್ರಿಕೆಟ್
* ಕ್ರಿಕೆಟ್ ಕೋಚ್ ಆಗಿದ್ದರು
* ಉಸ್ತಾದ್ ಜಿ ಎಂತಲೂ ಕರೆಯುತ್ತಿದ್ದರು
40. ಕೊರೊನಾ ನಿರೋಧಕ ಮಾತ್ರೆಗಳನ್ನು ಅನುಮೋದಿಸಿದ ಜಗತ್ತಿನ ಮೊದಲ ರಾಷ್ಟ್ರ ಯಾವುದು ?
ಉ- ಬ್ರಿಟನ್
41. ‘ವಿಶ್ವ ರೇಡಿಯಾಲಜಿ ದಿನ'ವನ್ನು ಯಾವ ದಿನದಂದು ಆಚರಿಸುತ್ತಾರೆ ?
ಉ- ನವೆಂಬರ್ - 8
* Theme - Interventional Radiology - Active care for the patient
42. 2021 ರ ಪದ್ಮ ಪ್ರಶಸ್ತಿಗೆ ಎಷ್ಟು ಜನ ಭಾಜನರಾಗಿದ್ದಾರೆ ?
ಉ- 119
* ಪದ್ಮಶ್ರೀ - 102
* ಪದ್ಮಭೂಷಣ - 10
* ಪದ್ಮವಿಭೂಷಣ - 7
* ಸ್ಥಾಪನೆ - 1954
43. ಇತ್ತೀಚಿಗೆ ‘ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆ'ಯನ್ನು ಭಾರತದ ಯಾವ ರಾಜ್ಯ ಸರ್ಕಾರ ಪ್ರಾರಂಭಿಸಿದೆ ?
ಉ- ದೆಹಲಿ ರಾಜ್ಯ ಸರ್ಕಾರ
* ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ತರಬೇತಿ ನೀಡಲು ದೆಹಲಿ ಸರ್ಕಾರ ಜೈ ಭೀಮ್ ಮುಖ್ಯಮಂತ್ರಿ ಪ್ರತಿಭಾ ವಿಕಾಸ್ ಯೋಜನೆ ಪ್ರಾರಂಭಿಸಿದೆ
* 15000 ವಿದ್ಯಾರ್ಥಿಗಳು ಹೆಸರು ನೋಂದಾಯಿಸಿದ್ದಾರೆ
* ದೆಹಲಿ ಮುಖ್ಯಮಂತ್ರಿ - ಅರವಿಂದ್ ಕೇಜ್ರಿವಾಲ್
44. ಇತ್ತೀಚಿಗೆ ಪ್ರಕಟಗೊಂಡಿರುವ ‘ಇಂದ್ರಾ ನೂಯಿ' ರವರ ಆತ್ಮಕಥನ ಯಾವುದು ಆಗಿದೆ ?
ಉ- ಮೈ ಲೈಫ್ ಇನ್ ಫುಲ್ - ವರ್ಕ್, ಫ್ಯಾಮಿಲಿ, ಅಂಡ್ ಅವರ್ ಫ್ಯೂಚರ್
* CEO - ಪೆಪ್ಸಿ ಕಂಪನಿ
* ಭಾರತೀಯ ಮೂಲದವರು
45. ಮಹಾತ್ಮ ಗಾಂಧೀಜಿಯವರ ನೂತನ ಸ್ಮರಣಾರ್ಥ ನಾಣ್ಯ ಬಿಡುಗಡೆಗೊಳಿಸಿದ ದೇಶ ಯಾವುದು ?
ಉ- ಬ್ರಿಟನ್
* ಯುಕೆ ಚಾನ್ಸಲರ್ - ರಿಷಿ ಸುನಕ್
46. ಇತ್ತೀಚಿಗೆ ‘ಉತ್ತಮ್ ಬೀಜ್ ಪೋರ್ಟಲ್' (Uttam Beej Portal) ಅನ್ನು ಆರಂಭಿಸಿದ ರಾಜ್ಯ ಯಾವುದು ?
ಉ- ಹರಿಯಾಣ
* ಮುಖ್ಯಮಂತ್ರಿ - ಮನೋಹರ್ ಲಾಲ್ ಖಟ್ಟರ್
47. ಇತ್ತೀಚೆಗೆ ‘Cop26 ಹವಾಮಾನ ಶೃಂಗಸಭೆ' (Summit) ಯಾವ ದೇಶದಲ್ಲಿ ನಡೆಯಿತು ?
ಉ- ಸ್ಕಾಟ್ಲೆಂಡ್ ನ ಗ್ಲ್ಯಾಸ್ಗೋ (Glasgow)
* ರಾಜಧಾನಿ - ಎಡಿನ್ ಬರ್ಗ್ (Edinburgh)
* ಕರೆನ್ಸಿ - ಪೌಂಡ್ ಸ್ಟರ್ಲಿಂಗ್ (Pound Sterling)
* ಯುನೈಟೆಡ್ ಕಿಂಗ್ಡಮ್ ನ ಭಾಗವಾಗಿರುವ ದೇಶ
* Cop27 Summit - Sharm El Sheikh, Egypt (ನಡೆಯಲಿದೆ)
48. 2021ರ ಪುರುಷರ ವಿಶ್ವ ಬಾಕ್ಸಿಂಗ್ ಚಾಂಪಿಯನ್ ಶಿಪ್ ನಲ್ಲಿ 54 ಕೆಜಿ ವಿಭಾಗದಲ್ಲಿ ಬಾಕ್ಸಿಂಗ್ ಪಟು ‘ಆಕಾಶ್ ಕುಮಾರ್' ಯಾವ ಪದಕವನ್ನು ಪಡೆದುಕೊಂಡಿದ್ದಾರೆ ?
ಉ- ಕಂಚಿನ ಪದಕ
* ನಡೆದ ಸ್ಥಳ - ಸರ್ಬಿಯಾದ ಬೆಲ್ಗ್ರೇಡ್ (Belgrade)
49. ಯಾವ ದಿನದಂದು (Legal services Day) ‘ಕಾನೂನು ಸೇವೆಗಳ ದಿನ'ವೆಂದು ಆಚರಿಸುತ್ತೇವೆ ?
ಉ- ನವೆಂಬರ್ - 9
50. ‘ಶಾಂತಿ ಮತ್ತು ಅಭಿವೃದ್ಧಿಗಾಗಿ ವಿಶ್ವ ವಿಜ್ಞಾನ ದಿನ'ವನ್ನು (World Science Day for Peace and Development) ಯಾವ ದಿನದಂದು ಆಚರಿಸುತ್ತೇವೆ ?
ಉ- ನವೆಂಬರ್ - 10
51. ರಾಷ್ಟ್ರೀಯ ಶಿಕ್ಷಣ ದಿನವನ್ನು ಯಾವಾಗ ಆಚರಿಸಲಾಗುತ್ತದೆ ?
ಉ- ನವೆಂಬರ್ - 11
*ವಿ.ಸೂ. - ನಮ್ಮ ಈ ಸಣ್ಣ ಪ್ರಯತ್ನದಲ್ಲಿ ಏನಾದರೂ ತಪ್ಪು/ದೋಷಗಳು ಕಂಡುಬಂದರೆ ದಯಮಾಡಿ ಕೆಳಗೆ ಕಾಮೆಂಟ್ ರೂಪದಲ್ಲಿ ತಿಳಿಸಿ...🙏🙏
0 ಕಾಮೆಂಟ್ಗಳು