General Knowledge (GK) 2021 || GK in Kannada History 2021 #GK in Kannada Question with Answer - 2021
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ (ಪ್ರಶ್ನೋತ್ತರಗಳು)
1. ಭಾರತೀಯ ಸೇನೆಯ ಮೊಟ್ಟಮೊದಲ ಭಾರತೀಯ ಸೇನಾ ಮುಖ್ಯಸ್ಥರು ಯಾರಾಗಿದ್ದರು ?
ಉ- ಕೆ. ಎಂ. ಕರಿಯಪ್ಪ
2. ನವಕೋಟಿ ನಾರಾಯಣ ಎಂದು ಯಾರನ್ನು ಕರೆಯಲಾಗುತ್ತದೆ ?
ಉ- ಚಿಕ್ಕದೇವರಾಜ ಒಡೆಯರು
3. ಬ್ರಿಟಿಷರ ಆಡಳಿತದ ಕಪಿ ಮುಷ್ಟಿಯಿಂದ ಶ್ರೀಲಂಕಾ ಸ್ವತಂತ್ರಗೊಂಡಿದ್ದು ಯಾವಾಗ ?
ಉ- 1948
3. ಭಾರತದ ರಾಷ್ಟ್ರಪತಿಯಾಗಲು ಕನಿಷ್ಠ ವಯಸ್ಸು ಎಷ್ಟು ?
ಉ- 35 ವರ್ಷ
4. ಮಗಧ ಸಾಮ್ರಾಜ್ಯದ ಮೊಟ್ಟ ಮೊದಲ ರಾಜಧಾನಿ ಯಾವುದಾಗಿತ್ತು ?
ಉ- ರಾಜಗೀರ್
5. ಕರ್ನಾಟಕದಲ್ಲಿ ಭೂಕಂಪ ಮಾಪನ ಕೇಂದ್ರ ಎಲ್ಲಿದೆ ?
ಉ- ಗೌರಿಬಿದನೂರು
6. ಬಾರ್ಕ್ ನ ಜಲಪಾತ ಯಾವ ನದಿಯಿಂದ ಉಂಟಾಗುತ್ತದೆ ?
ಉ- ಸೀತಾನದಿ
7. ಚಿಪ್ಕೋ ಆಂದೋಲನವನ್ನು ಪ್ರಾರಂಭಿಸಿದವರು ಯಾರು ?
ಉ- ಸುಂದರಲಾಲ್ ಬಹುಗುಣ
8. ಇಂಡೋನೇಷ್ಯಾದ ರಾಜಧಾನಿ ಯಾವುದು ?
ಉ- ಜಕರ್ತಾ
9. ಫ್ಯಾರನ್ ಹೀಟ್ ಸ್ಕೇಲಿನಲ್ಲಿ ನೀರಿನ ಕುದಿಯುವ ಬಿಂದು ಎಷ್ಟು ?
ಉ- 212° F
10. ಫ್ಯಾರನ್ ಹೀಟ್ ಸ್ಕೇಲಿನಲ್ಲಿ ನೀರಿನ ಘನೀಕರಣ ಬಿಂದು ಎಷ್ಟು ?
ಉ- 32° F
11. ತ್ರಿಪುರದ ರಾಜಧಾನಿ ಯಾವುದು ?
ಉ- ಅಗರ್ತಲಾ
12. ಭಾರತೀಯ ರಾಷ್ಟ್ರೀಯ ಲಾಂಛನದ ಧ್ಯೇಯ ವಾಕ್ಯ ಯಾವುದು ?
ಉ- ಸತ್ಯಮೇವ ಜಯತೆ
13. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ ?
ಉ- ಜವಾಹರಲಾಲ್ ನೆಹರು
14. ಭಾರತದಲ್ಲಿ ದೀರ್ಘಾವಧಿ ಮುಖ್ಯಮಂತ್ರಿಯಾಗಿ ಸೇವೆ ಸಲ್ಲಿಸಿದವರು ಯಾರು
ಉ- ಪವನ್ ಕುಮಾರ್ ಚಾಮ್ಲಿಂಗ್ (24 ವರ್ಷ, 165 ದಿನ)
15. ಯಾವ ದಿನದಂದು ಲಾಲ್ ಬಹದ್ದೂರ್ ಶಾಸ್ತ್ರಿ ಅವರ ಜನ್ಮ ದಿನಾಚರಣೆಯನ್ನು ಆಚರಿಸುತ್ತಾರೆ ?
ಉ- ನವೆಂಬರ್ - 26
16. ಸ್ವತಂತ್ರ ಭಾರತದ ಮೊದಲನೇ ವಿವಿಧೋದ್ದೇಶ ನದಿ ಕಣಿವೆ ಯೋಜನೆ ಯಾವುದು ?
ಉ- ದಾಮೋದರ ನದಿ ಕಣಿವೆ ಯೋಜನೆ
17. ಆಂಧ್ರಪ್ರದೇಶದ ನಂದಿಕೊಂಡ ಗ್ರಾಮದ ಬಳಿ ಕೃಷ್ಣಾ ನದಿಗೆ ನಿರ್ಮಿಸಲಾದ ಆಣೆಕಟ್ಟಿನ ಹೆಸರೇನು ?
ಉ- ನಾಗಾರ್ಜುನ ಸಾಗರ
18. ಏಷ್ಯಾದಲ್ಲಿಯೇ ಅತ್ಯಂತ ಎತ್ತರವಾದ ಅಣೆಕಟ್ಟು ಯಾವುದು ?
ಉ- ಭಾಕ್ರಾ ಅಣೆಕಟ್ಟು
19. ಭಾರತದಲ್ಲಿಯೇ ಅತ್ಯಂತ ಉದ್ದವಾದ ಅಣೆಕಟ್ಟು ಯಾವುದು ?
ಉ- ಹಿರಾಕುಡ್ ಅಣೆಕಟ್ಟು ( ಉದ್ದ 4801 ಮೀ.)
20. ಭಾರತದಲ್ಲಿ ಅತಿ ಹೆಚ್ಚು ಹುಲ್ಲುಗಾವಲು ಪ್ರದೇಶವನ್ನು ಹೊಂದಿದ ರಾಜ್ಯ ಯಾವುದು ?
ಉ- ಹಿಮಾಚಲ ಪ್ರದೇಶ
21. ಭಾರತದಲ್ಲಿ ಅತ್ಯಂತ ಕಡಿಮೆ ಹುಲ್ಲುಗಾವಲು ಪ್ರದೇಶವನ್ನು ಹೊಂದಿದ ರಾಜ್ಯ ?
ಉ- ಪಂಜಾಬ್ ಮತ್ತು ಹರಿಯಾಣ
22. ‘ಟೆರ್ರಾಕೋಟಾ' ಕಲಾ ಪ್ರಕಾರಕ್ಕೆ ಅಂತರಾಷ್ಟ್ರೀಯ ಪ್ರಶಸ್ತಿಯನ್ನು ಪಡೆದ ಕರ್ನಾಟಕದ ಮೊದಲ ಕಲಾವಿದೆ ಯಾರು ?
ಉ- ಎನ್. ಪುಷ್ಪಮಾಲಾ
23. ಪ್ರಪಂಚದ ಅತಿ ದೊಡ್ಡ ಖಂಡ ಯಾವುದು ?
ಉ- ಏಷ್ಯಾ ಖಂಡ
24. ಪ್ರಪಂಚದ ಅತಿ ಚಿಕ್ಕ ಖಂಡ ಯಾವುದಾಗಿದೆ ?
ಉ- ಆಸ್ಟ್ರೇಲಿಯಾ ಖಂಡ
25. ಮೊಘಲ್ ವಂಶದ ಕೊನೆಯ ದೊರೆ ಯಾರು ?
ಉ- ಬಹದ್ದೂರ್ ಷಾ ಜಾಫರ್
26. ಕಾಶ್ಮೀರ ಭಾರತದ ಒಕ್ಕೂಟಕ್ಕೆ ಸೇರ್ಪಡೆಯಾದಾಗ ಅಲ್ಲಿನ ರಾಜ ಯಾರಾಗಿದ್ದರು ?
ಉ- ರಾಜ ಹರಿಸಿಂಗ್
27. ‘ದಕ್ಷಿಣಾ ಪಥೇಶ್ವರ' ಎಂಬ ಬಿರುದನ್ನು ಹೊಂದಿದವರು ಯಾರು ?
ಉ- ಇಮ್ಮಡಿ ಪುಲಿಕೇಶಿ
28. ಹೋಂ ರೂಲ್ ಚಳುವಳಿಯನ್ನು ಪ್ರಾರಂಭಿಸಿದವರು ಯಾರು ?
ಉ- ಅನಿ ಬೆಸೆಂಟ್ (Annie Besant)
29. ಭಾರತದ ರಾಷ್ಟ್ರೀಯ ನದಿ ಯಾವುದು ?
ಉ- ಗಂಗಾ ನದಿ
30. ಭಾರತದ ಯಾವ ರಾಜ್ಯದಲ್ಲಿ ಅಣ್ವಸ್ತ್ರಗಳನ್ನು ಪ್ರಾಯೋಗಿಕವಾಗಿ ಪರೀಕ್ಷಿಸಲಾಗುತ್ತದೆ ?
ಉ- ರಾಜಸ್ಥಾನ್
31. ಬಾಂಗ್ಲಾ ದೇಶದ ರಾಷ್ಟ್ರೀಯ ಕ್ರೀಡೆ ಯಾವುದು ?
ಉ- ಕಬಡ್ಡಿ
32. ಟರ್ಕಿ ದೇಶದ ಚಾಲ್ತಿ ನಾಣ್ಯದ (ಕರೆನ್ಸಿ) ಹೆಸರೇನು ?
ಉ- ಟರ್ಕಿಸ್ ಲಿರಾ
33. ಬೆಂಗಳೂರಿನಲ್ಲಿರುವ ಹೈಕೋರ್ಟ್ ನ ಹಿಂದಿನ ಹೆಸರೇನು ?
ಉ- ಅಠಾರ ಕಚೇರಿ
34. ಪುರುಷಪುರ ಯಾವ ಸಾಮ್ರಾಜ್ಯದ ರಾಜಧಾನಿಯಾಗಿತ್ತು ?
ಉ- ಕನಿಷ್ಕ
35. ಯಾವ ಜಿಲ್ಲೆಯನ್ನು ಸಕ್ಕರೆ ಜಿಲ್ಲೆ ಎಂದು ಕರೆಯುತ್ತಾರೆ ?
ಉ- ಬೆಳಗಾವಿ
36. ಮೃತ ಸಮುದ್ರ (Death Sea) ಯಾವ ಎರಡು ದೇಶದ ನಡುವೆ ಕಂಡುಬರುತ್ತದೆ ?
ಉ- ಇಸ್ರೇಲ್ - ಜೋರ್ಡಾನ್
37. ಭಾರತದಲ್ಲಿ ಎರಡನೇ ಬಾರಿ ರಾಷ್ಟ್ರೀಯ ಆದಾಯವನ್ನು ಅಂದಾಜು ಮಾಡಿದವರು ಯಾರು ?
ಉ- ಡಾ. ವಿ.ಕೆ.ಆರ್.ವಿ. ರಾವ್
38. ಏಷ್ಯಾದ ಮತ್ತು ಭಾರತದ ಅತ್ಯಂತ ಹಳೆಯದಾದ ಶೇರು ಮಾರುಕಟ್ಟೆ ಯಾವುದು ?
ಉ- ಬಾಂಬೆ ಸ್ಟಾಕ್ ಎಕ್ಸ್ಚೇಂಜ್ ( Bombay Stock Exchange - 1875)
39. ಅತ್ಯಂತ ದೊಡ್ಡ ಗ್ರಹ ಯಾವುದು ?
ಉ- ಗುರು ಗ್ರಹ
40. ಅತ್ಯಂತ ಚಿಕ್ಕ ಗ್ರಹ ಯಾವುದು ?
ಉ- ಬುಧ ಗ್ರಹ
41. ಅಲೆಕ್ಸಾಂಡರ್ ನ ದಂಡನಾಯಕ ಯಾರಾಗಿದ್ದರು ?
ಉ- ಸೆಲ್ಯೂಕಸ್ ನಿಕೇಟರ್
42. ಹಾಲಿನ ಸಾಂದ್ರತೆಯನ್ನು ಅಳೆಯಲು ಬಳಸುವ ಮಾಪನ ಯಾವುದು ?
ಉ- ಲ್ಯಾಕ್ಟೋಮೀಟರ್
43. ‘ದಿ ಡಿವೈನ್ ಕಾಮಿಡಿ' ಎಂಬ ಮಹಾಕಾವ್ಯವನ್ನು ಬರೆದವರು ಯಾರು ?
ಉ- ಇಟಲಿಯ ಪ್ರಖ್ಯಾತ ಕವಿ ‘ಡಾಂಟೆ'
44. ‘ವಿಕ್ರಮಾಂಕ ದೇವ ಚರಿತೆ' ಎಂಬ ಕಾವ್ಯವನ್ನು ಬರೆದವರು ಯಾರು ?
ಉ- ಬಿಲ್ಹಣ
45. ಜಗತ್ತಿನಲ್ಲಿ ಅತಿ ಹೆಚ್ಚು ದ್ವೀಪಗಳಿಂದ ಕೂಡಿದ ರಾಷ್ಟ್ರ ಯಾವುದು ?
ಉ- ಇಂಡೋನೇಷ್ಯಾ
46. ವಿಶ್ವ ಆನೆ ದಿನ(World Elephant Day)ವನ್ನು ಯಾವ ದಿನದಂದು ಆಚರಿಸುತ್ತಾರೆ ?
ಉ- ಆಗಸ್ಟ್ - 12
47. ಯಾವ ದಿನದಂದು ‘ವಿಶ್ವ ಸಿಂಹ ದಿನ'ವನ್ನು ಆಚರಿಸಲಾಗುತ್ತದೆ ?
ಉ- ಆಗಸ್ಟ್ - 10
48. ಶೋಕಸಭೆ ಇದು ಯಾರ ಕವನ ಸಂಕಲನ ವಾಗಿದೆ?
ಉ- ಬಸವರಾಜ ವಕ್ಕುಂದ
49. ರಾಮಕೃಷ್ಣ ಮಿಷನ್ ಅನ್ನು ಸ್ಥಾಪಿಸಿದವರು ಯಾರು ?
ಉ- ಸ್ವಾಮಿ ವಿವೇಕಾನಂದ
50. ಕರ್ನಾಟಕದಲ್ಲಿ ಒಟ್ಟು ಎಷ್ಟು ರಾಷ್ಟ್ರೀಯ ಉದ್ಯಾನವನಗಳಿವೆ ?
ಉ- 5
51. WAN - ಅನ್ನು ವಿಸ್ತರಿಸಿ.
ಉ- Wide Area Network
52. LAN - ಅನ್ನು ವಿಸ್ತರಿಸಿ ಬರೆಯಿರಿ.
ಉ- Local Area Network
53. WWW - ಅನ್ನು ವಿಸ್ತರಿಸಿ ಬರೆಯಿರಿ.
ಉ- World Wide Web
54. CPU - ಅನ್ನು ವಿಸ್ತರಿಸಿ ಬರೆಯಿರಿ.
ಉ- Central Processing Unit
55. ಕಂಪ್ಯೂಟರ್ ನ ಕೀಬೋರ್ಡ್ ನಲ್ಲಿ ಎಷ್ಟು ಕೀಗಳಿರುತ್ತವೆ (keys) ?
ಉ- 104 ಕೀಗಳು ಇರುತ್ತವೆ.
....***....
0 ಕಾಮೆಂಟ್ಗಳು