General Knowledge (GK) Questions with Answers 2021
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ನಿರೀಕ್ಷಿತ ಸಾಮಾನ್ಯ ಪ್ರಶ್ನೋತ್ತರಗಳು
Hi Everyone,
Welcome to Sam Info World
In this GK, helpful for all Your Competitive Exams..
Test your knowledge with the following Questions with Answers..
1. ಭಾರತದ ಕೊನೆಯ ಬ್ರಿಟಿಷ್ ಗವರ್ನರ್ ಯಾರು?
ಉ- ಲಾರ್ಡ್ ಮೌಂಟ್ ಬ್ಯಾಟನ್
2. ಭಾರತದ ಮೊಟ್ಟ ಮೊದಲ ಪ್ರಧಾನ ಮಂತ್ರಿ ಯಾರು?
ಉ- ಜವಾಹರ್ ಲಾಲ್ ನೆಹರು
3. ಭಾರತವು ಯಾವ ರೀತಿಯ ಪ್ರಜಾಪ್ರಭುತ್ವವನ್ನು ಹೊಂದಿದೆ?
ಉ- ಸಂಸದೀಯ ಪ್ರಜಾಪ್ರಭುತ್ವ
4. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕಾಗ ಭಾರತದಲ್ಲಿದ್ದ ರಾಜ ಸಂಸ್ಥಾನಗಳ ಸಂಖ್ಯೆ ಎಷ್ಟು?
ಉ- 562 ಸಂಸ್ಥಾನಗಳು
5. ತಮಿಳುನಾಡಿನ ರಾಜಧಾನಿ ಯಾವುದು?
ಉ- ಚೆನ್ನೈ
6. ಪಾಂಡಿಚೇರಿ ಕೇಂದ್ರಾಡಳಿತ ಪ್ರದೇಶದ ರಾಜಧಾನಿ ಯಾವುದು ?
ಉ- ಪಾಂಡಿಚೇರಿ
7. ಗೋವಾದ ರಾಜಧಾನಿ ಯಾವುದು ?
ಉ- ಪಣಜಿ
8. ವಿಶ್ವಸಂಸ್ಥೆ ಯಾವಾಗ ಜನ್ಮತಾಳಿತು ?
ಉ- ಅಕ್ಟೋಬರ್ 24, 1945
9. ‘ಮಾನವಕುಲ ತಾನೊಂದೆ ವಲಂ' ಎಂದು ಹೇಳಿದವರು ಯಾರು?
ಉ- ಆದಿಕವಿ ಪಂಪ
10. ಕೇಂದ್ರ ಸರ್ಕಾರವು ಸಮಾನ ವೇತನ ಕಾಯ್ದೆಯನ್ನು ಜಾರಿಗೆ ತಂದಿರುವ ಪ್ರಮುಖ ಉದ್ದೇಶವೇನು?
ಉ- ಸ್ತ್ರೀ-ಪುರುಷರ ವೇತನ ತಾರತಮ್ಯ ನಿವಾರಿಸುವುದು
11. ಚಿಪ್ಕೋ ಚಳುವಳಿಯನ್ನು ಯಾವ ರಾಜ್ಯದಲ್ಲಿ ಮೊದಲು ಆರಂಭಿಸಲಾಯಿತು?
ಉ- ಉತ್ತರ ಪ್ರದೇಶ್
* ನೇತಾರ - ಸುಂದರಲಾಲ್ ಬಹುಗುಣ
12. ಭಾರತದ ಮೊದಲ ಶಿಕ್ಷಣ ಸಚಿವರು ಯಾರಾಗಿದ್ದರು?
ಉ- ಮೌಲಾನಾ ಅಬುಲ್ ಕಲಾಂ ಆಜಾದ್
13. ಚಿಲ್ಕಾ ಸರೋವರ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉ- ಒಡಿಶಾ
14. ರಷ್ಯದಲ್ಲಿ ಪಂಚವಾರ್ಷಿಕ ಯೋಜನೆಗಳನ್ನು ಜಾರಿಗೆ ತಂದವರು ಯಾರು?
ಉ- ಸ್ಟಾಲಿನ್
15. ಕೇರಳದ ಕರಾವಳಿ ತೀರವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
ಉ- ಮಲಬಾರ್ ತೀರ
16. ಉತ್ತರ ಭಾರತದ ಮೈದಾನವು ಯಾವ ಮಣ್ಣಿನಿಂದ ನಿರ್ಮಿತವಾಗಿದೆ?
ಉ- ಮೆಕ್ಕಲು ಮಣ್ಣು
17. ಪಶ್ಚಿಮ ಘಟ್ಟಗಳಿಗೆ ಇರುವ ಮತ್ತೊಂದು ಹೆಸರೇನು?
ಸಹ್ಯಾದ್ರಿ ಘಟ್ಟಗಳು
18. ಅಪ್ಪಿಕೋ ಚಳುವಳಿ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಆರಂಭವಾಯಿತು?
ಉ- ಉತ್ತರ ಕನ್ನಡ ಜಿಲ್ಲೆಯ ಸಲ್ಯಾನಿ ಗ್ರಾಮ
19. ವರದಕ್ಷಿಣೆ ನಿಷೇಧ ಕಾಯ್ದೆಯನ್ನು ಮೊದಲು ಎಷ್ಟರಲ್ಲಿ ಜಾರಿಗೆ ತರಲಾಯಿತು?
ಉ- 1961
20. ಅರುಣಾಚಲ ಪ್ರದೇಶದ ರಾಜಧಾನಿ ಯಾವುದು?
ಉ- ಇಟಾನಗರ
21. ಜಾಗತಿಕ ಹವಾಮಾನ ಸಂಘಟನೆ (WMO) ಕೇಂದ್ರ ಕಛೇರಿ ಎಲ್ಲಿದೆ?
ಉ- ಜಿನಿವಾ
* ಸ್ಥಾಪನೆ - 1950
22. ಗ್ರಾಂಡ್ ಓಲ್ಡ್ ವುಮೆನ್ ಆಫ್ ಇಂಡಿಯಾ (Grand old woman of India) ಎಂದು ಯಾರನ್ನು ಕರೆಯಲಾಗುತ್ತದೆ
ಉ- ಅರುಣಾ ಅಸಫ್ ಅಲಿ
23. ‘ವಿಶ್ವ ಸಂಸ್ಥೆ ದಿನ' (United Nations Day) ಯಾವ ದಿನದಂದು ಆಚರಿಸಲಾಗುತ್ತದೆ?
ಉ- ಅಕ್ಟೋಬರ್ - 24
24. ಯಾವ ದಿನದಂದು ವಿಶ್ವ ಏಡ್ಸ್ ದಿನವನ್ನು ಆಚರಿಸುತ್ತೇವೆ?
ಉ- ಡಿಸೆಂಬರ್ - 1
25. ‘ಮಿಡ್ನೈಟ್ ಚಿಲ್ಡ್ರನ್' (Midnight Children) ಇದು ಯಾರ ಕೃತಿಯಾಗಿದೆ?
ಉ- ಸಲ್ಮಾನ್ ರಶ್ದಿ
* ಈ ಕೃತಿಗೆ 1981ರಲ್ಲಿ ಮ್ಯಾನ್ ಬೂಕರ್ ಪ್ರಶಸ್ತಿ ದೊರೆತಿದೆ
26. ಶಾಂತಿ ಸ್ವರೂಪ್ ಭಟ್ನಾಗರ್ ಪ್ರಶಸ್ತಿಯನ್ನು ಯಾವ ಕ್ಷೇತ್ರಕ್ಕೆ ಸಾಧನೆಗಾಗಿ ನೀಡಲಾಗುತ್ತದೆ ?
ಉ- ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರ
27. ಭಾರತದಲ್ಲಿ ಮೂರು ಹಂತದ ಪಂಚಾಯತ್ ರಾಜ್ ಅಸ್ತಿತ್ವಕ್ಕೆ ಬಂದಿದ್ದು ಸಂವಿಧಾನದ ಯಾವ ತಿದ್ದುಪಡಿಯ ಮೂಲಕ?
ಉ- 73ನೇ ತಿದ್ದುಪಡಿ
28. ಭಾರತದ ಆರ್ಥಿಕ ಯೋಜನೆಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ- ಸರ್ ಎಂ. ವಿಶ್ವೇಶ್ವರಯ್ಯ
* 1934ರಲ್ಲಿ ‘ಭಾರತಕ್ಕೆ ಯೋಜಿತ ಅರ್ಥಶಾಸ್ತ್ರ' ಎಂಬ ಪುಸ್ತಕ ಬಿಡುಗಡೆ
29. ಭಾರತದ ಹಸಿರು ಕ್ರಾಂತಿಯ ಪಿತಾಮಹ ಎಂದು ಯಾರನ್ನು ಕರೆಯುತ್ತಾರೆ?
ಉ- ಡಾ. ಎಂ. ಎಸ್. ಸ್ವಾಮಿನಾಥನ್
30. ದಕ್ಷಿಣ ಆಫ್ರಿಕದ ಗಾಂಧಿ ಎಂದು ಯಾರನ್ನು ಕರೆಯಲಾಗುತ್ತದೆ?
ಉ- ನೆಲ್ಸನ್ ಮಂಡೇಲಾ
31. ಭಾರತದ ವಿದೇಶಾಂಗ ನೀತಿಯ ಶಿಲ್ಪಿ ಎಂದು ಯಾರನ್ನು ಕರೆಯುತ್ತಾರೆ?
ಉ- ಜವಾಹರಲಾಲ್ ನೆಹರು
32. ಭಾರತದಲ್ಲಿ ಪ್ರಥಮ ರೈಲು ಸಂಚಾರ ಆರಂಭವಾದ ವರ್ಷ ?
ಉ- ಕ್ರಿ.ಶ. 1853
33. ಮಲಪ್ರಭಾ ಯಾವ ನದಿಯ ಉಪನದಿಯಾಗಿದೆ?
ಉ- ಕೃಷ್ಣಾ ನದಿ
34. ಜೈಲು ಹಾಗೂ ಅಪರಾಧಿಗಳ ಬಗ್ಗೆ ಅಧ್ಯಯನ ಮಾಡುವ ಶಾಸ್ತ್ರಕ್ಕೆ ಏನೆಂದು ಕರೆಯುತ್ತಾರೆ?
ಉ- ಪಿನಾಲಜಿ
35. ಕನ್ನಡ ಸಾಹಿತ್ಯ ಸಮ್ಮೇಳನದ ಎರಡನೇ ಅಧ್ಯಕ್ಷರು ಯಾರಾಗಿದ್ದರು?
ಉ- ಎಚ್. ವಿ. ನಂಜುಂಡಯ್ಯ
36. ಪೊಲೀಸ್ ಹುತಾತ್ಮರ ದಿನಾಚರಣೆಯನ್ನು ಪ್ರತಿವರ್ಷ ಯಾವ ದಿನದಂದು ಆಚರಿಸುತ್ತೇವೆ?
ಉ- ಅಕ್ಟೋಬರ್ - 21
37. ಗಣಿತ ಲೋಕಕ್ಕೆ ಸೊನ್ನೆಯನ್ನು ಕೊಡುಗೆಯಾಗಿ ಕೊಟ್ಟ ದೇಶ ಯಾವುದು?
ಉ- ಭಾರತ
38. ಗಡಿನಾಡ ಗಾಂಧಿ ಎಂದು ಯಾರನ್ನು ಕರೆಯುತ್ತಾರೆ?
ಉ- ಖಾನ್ ಅಬ್ದುಲ್ ಗಫಾರ್ ಖಾನ್
39. ದೇಶದ ಮೊದಲ ತೃತೀಯಲಿಂಗಿ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಯಾರು
ಉ- ಕೆ.ಪ್ರೀತಿಕಾ ಯಾಶಿನಿ
40. ಭಾರತದ ಮೊದಲ ವರ್ತಮಾನ ಪತ್ರಿಕೆ ಯಾವುದಾಗಿದೆ?
ಉ- ಬೆಂಗಾಲ್ ಗೆಜೆಟ್
41. ಕರ್ನಾಟಕದ ಮೊದಲ ರಾಜ್ಯಪಾಲರು ಯಾರಾಗಿದ್ದರು?
ಉ- ಜಯಚಾಮರಾಜ ಒಡೆಯರು
42. ರಾಷ್ಟ್ರಪತಿಯಾದ ಮೊದಲ ಕನ್ನಡಿಗ ಯಾರು?
ಉ- ಬಿ. ಡಿ. ಜತ್ತಿ
43. ಕರ್ನಾಟಕದ ಭಗತ್ ಸಿಂಗ್ ಎಂದು ಯಾರನ್ನು ಕರೆಯುತ್ತಾರೆ?
ಉ- ಮೈಲಾರ ಮಹದೇವಪ್ಪ
44. ಕರ್ನಾಟಕದ ರಾಮನಗರ ಜಿಲ್ಲೆಯಲ್ಲಿರುವ ಚನ್ನಪಟ್ಟಣವು ಯಾವುದಕ್ಕೆ ಪ್ರಸಿದ್ಧಿಯಾಗಿದೆ?
ಉ- ಆಟಿಕೆಗಳು
45. ‘ಸೋವಿಯತ್ ಲ್ಯಾಂಡ್' ಪ್ರಶಸ್ತಿ ಯನ್ನು ಪಡೆದ ಕನ್ನಡದ ಮೊದಲ ಮಹಿಳೆ ಯಾರು?
ಉ- ಅನುಪಮಾ ನಿರಂಜನ
46. ಮೂರನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉ- ಶ್ರೀರಂಗಪಟ್ಟಣ ಒಪ್ಪಂದ
47. ದ್ವಿ - ಮುಖ ಸರ್ಕಾರವನ್ನು ಬಂಗಾಳದಲ್ಲಿ ಜಾರಿಗೆ ತಂದವರು ಯಾರು?
ಉ- ರಾಬರ್ಟ್ ಕ್ಲೈವ್
* 1765ರಲ್ಲಿ ಜಾರಿಗೆ ತರಲಾಯಿತು
48. ಭಾರತಕ್ಕೆ ಹೊಸ ಜಲಮಾರ್ಗವನ್ನು ಕಂಡುಹಿಡಿದ ಪೋರ್ಚುಗೀಸ್ ನಾವಿಕ ಯಾರು?
ಉ- ವಾಸ್ಕೋ-ಡಿ-ಗಾಮ
49. ರಾಮಾನುಜಾಚಾರ್ಯರು ಪ್ರತಿಪಾದಿಸಿದ ಸಿದ್ಧಾಂತ ಯಾವುದು?
ಉ- ವಿಶಿಷ್ಟಾದ್ವೈತ ಸಿದ್ಧಾಂತ
* ಹನ್ನೊಂದನೇ ಶತಮಾನದಲ್ಲಿ ತಮಿಳುನಾಡಿನ ಶ್ರೀ ಪೆರಂಬದೂರು ಎಂಬಲ್ಲಿ ಜನಿಸಿದರು
50. ‘ಕರ್ನಾಟಕದ ಸಂಗೀತ ಪಿತಾಮಹ' ಎಂದು ಯಾವ ಸಮಾಜ ಸುಧಾರಕನನ್ನು ಕರೆಯುತ್ತಾರೆ?
ಉ- ಪುರಂದರದಾಸರು
51. ‘ಚೆನ್ನಮಲ್ಲಿಕಾರ್ಜುನ' ಇದು ಯಾರ ಅಂಕಿತನಾಮವಾಗಿದೆ?
ಉ- ಅಕ್ಕಮಹಾದೇವಿ
52. ‘ನನಗೆ ರಕ್ತ ಕೊಡಿ, ನಾನು ಸ್ವಾತಂತ್ರ್ಯ ಕೊಡುತ್ತೇನೆ' ಎಂದು ಹೇಳಿದವರು ಯಾರು?
ಉ- ನೇತಾಜಿ ಸುಭಾಷ್ ಚಂದ್ರ ಬೋಸ್
53. ‘ಅಭಿನವ ಭಾರತ ಸೊಸೈಟಿ'ಯನ್ನು ಆರಂಭಿಸಿದವರು ಯಾರು?
ಉ- ವಿ.ಡಿ. ಸಾವರ್ಕರ್
* ಸ್ಥಾಪನೆ - 1904
54. DVD - ವಿಸ್ತೃತ ರೂಪವೇನು?
ಉ- Digital Versatile Disc (also called - digital video disc)
55. USB - ವಿಸ್ತೃತ ರೂಪವೇನು?
ಉ- Universal Serial Bus
Also Read
*ವಿ.ಸೂ. - ನಮ್ಮ ಈ ಸಣ್ಣ ಪ್ರಯತ್ನದಲ್ಲಿ ಏನಾದರೂ ತಪ್ಪು/ದೋಷಗಳು ಕಂಡುಬಂದರೆ ದಯಮಾಡಿ ಕೆಳಗೆ ಕಾಮೆಂಟ್ ರೂಪದಲ್ಲಿ ತಿಳಿಸಿ...🙏🙏🙏
0 ಕಾಮೆಂಟ್ಗಳು