General Knowledge (GK) Questions with Answers - 2021
ಎಲ್ಲಾ ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಕೇಳಬಹುದಾದ ಬಹು ಪ್ರಾಮುಖ್ಯವಾದ ಸಾಮಾನ್ಯ ಜ್ಞಾನ ಪ್ರಶ್ನೋತ್ತರಗಳು
HI Everyone,
Welcome to SAM INFO WORLD
In this GK helpful for all upcoming Competitive Exams..
Know your Strength.. Test your knowledge..
1. ಬೊಲನ್ ಪಾಸಿನ ಫಲವತ್ತಾದ ಮೈದಾನದ ಸಮೀಪದಲ್ಲಿ ಇರುವ ನೆಲೆ ಯಾವುದು ?
ಉ- ಮೆಹರ್ಗರ್
2. ಅತ್ಯಂತ ಹಳೆಯ ವೇದ ಯಾವುದು ?
ಉ- ಋಗ್ವೇದ
* ಸುಮಾರು 3500 ವರ್ಷಗಳಷ್ಟು ಹಳೆಯದು
* ನಾಲ್ಕು ವೇದಗಳು - ಋಗ್ವೇದ, ಸಾಮವೇದ, ಯಜುರ್ವೇದ, ಅಥರ್ವಣವೇದ
3. ಹಿರೋಗ್ಲೈಫಿಕ್ಸ್ ಎಂದರೇನು ?
ಉ- ಈಜಿಪ್ಟಿಯನ್ನರ ಪವಿತ್ರ ಬರವಣಿಗೆ
4. ಈಜಿಪ್ಟನ್ನು ಆಳುತ್ತಿದ್ದ ರಾಜರುಗಳನ್ನು ಏನೆಂದು ಕರೆಯುತ್ತಿದ್ದರು ?
ಉ- ಫ್ಯಾರೋ
* ಫ್ಯಾರೋ ಎಂದರೆ ದೊಡ್ಡ ಮನೆಯಲ್ಲಿ ವಾಸಿಸುವ ಮನುಷ್ಯ ಎಂದರ್ಥ
5. ‘ನದಿಗಳ ನಡುವಿನ ನಾಡು' ಎಂದು ಯಾವ ನಾಗರಿಕತೆಯ ಪ್ರದೇಶವನ್ನು ಕರೆಯುತ್ತಾರೆ?
ಉ- ಮೆಸಪಟೋಮಿಯಾ
* ವಿಸ್ಮಯ ಮತ್ತು ಅಚ್ಚರಿಗಳ ನಾಡು ಎಂತಲೂ ಕರೆಯುತ್ತಾರೆ
* ಹರಿಯುವ ಪ್ರಮುಖ ನದಿಗಳು - ಯುಪ್ರೆಟಿಸ್ ಮತ್ತು ಟೈಗ್ರಿಸ್
6. ಮೆಸಪಟೋಮಿಯಾದ ಪ್ರಾಚೀನ ಸುಮೇರಿಯನ್ನರು ಅಭಿವೃದ್ಧಿಪಡಿಸಿದ ಬರವಣಿಗೆ ಅಥವಾ ಲಿಪಿ ಯಾವುದು?
ಉ- ಕ್ಯೂನಿಫಾರ್ಮ್
7. ಅಮೊರೈಟರ ಸುಪ್ರಸಿದ್ಧ ದೊರೆ ಯಾರು?
ಉ- ಹಮ್ಮರಬಿ
8. ಹೋಮರನ ರಚಿಸಿದ ಎರಡು ಮಹಾಕಾವ್ಯಗಳು ಯಾವುವು ?
ಉ- ‘ಈಲಿಯಡ್' ಮತ್ತು ‘ಒಡಿಸ್ಸಿ'
9. ವೈದ್ಯಕೀಯ ಅಧ್ಯಯನಕ್ಕೆ ಬುನಾದಿಯನ್ನು ಹಾಕಿದವರು ಯಾರು
ಉ- ಹಿಪೋಕ್ರಿಟಿಸ್ಸ
10. ‘ಅನುಭವ ಮಂಟಪ'ವನ್ನು ಯಾರು ಸ್ಥಾಪಿಸಿದರು?
ಉ- ಬಸವಣ್ಣನವರು
* 12ನೇ ಶತಮಾನದಲ್ಲಿ ಬಿಜಾಪುರ ಜಿಲ್ಲೆಯ ಬಾಗೇವಾಡಿ ಎಂಬಲ್ಲಿ ಜನಿಸಿದರು
11. ‘ಹರಿಭಕ್ತಿಸಾರ' ಎಂಬುದು ಯಾರ ಕೃತಿಯಾಗಿದೆ?
ಉ- ಕನಕದಾಸರು
12. ವಿಶಾಲ ಮೈಸೂರು ರಾಜ್ಯದ ಮೊದಲ ಮುಖ್ಯಮಂತ್ರಿ ಯಾರು?
ಉ- ಎಸ್. ನಿಜಲಿಂಗಪ್ಪ
13. ಅಂತರಾಷ್ಟ್ರೀಯ ಅರಣ್ಯ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉ- ಮಾರ್ಚ್ - 21
14. ವಿಶ್ವ ಜಲ ದಿನವನ್ನು ಯಾವ ದಿನದಂದು ಆಚರಿಸಲಾಗುತ್ತದೆ?
ಉ- ಮಾರ್ಚ್ - 22
15. ವಿಶ್ವ ಕ್ಷಯರೋಗ ದಿನವನ್ನು ಯಾವ ದಿನದಂದು ಆಚರಿಸುತ್ತೇವೆ ?
ಉ- ಮಾರ್ಚ್ - 24
16. ಸುಪ್ರೀಂಕೋರ್ಟ್ ನ ಮೊದಲ ಮಹಿಳಾ ನ್ಯಾಯಾಧೀಶೆ ಯಾರು?
ಉ- ಫಾತಿಮಾ ಬಿಬಿ
17. ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಭಾರತದ ರಾಜ್ಯ ಯಾವುದು?
ಉ- ಉತ್ತರ ಪ್ರದೇಶ
* ಅತ್ಯಲ್ಪ ಜನಸಂಖ್ಯೆ ಹೊಂದಿರುವ ರಾಜ್ಯ - ಸಿಕ್ಕಿಂ ಆಗಿದೆ
18. ಆಫ್ಘಾನಿಸ್ತಾನದಿಂದ ಭಾರತೀಯರನ್ನು ಕರೆತರಲು ಭಾರತವು ಕೈಗೊಂಡ ಕಾರ್ಯಾಚರಣೆ ಯಾವುದು?
ಉ- ಆಪರೇಷನ್ ದೇವಿಶಕ್ತಿ
19. ಸೂರ್ಯ ಉದಯಿಸುವ ನಾಡು ಯಾವುದು?
ಉ- ಜಪಾನ್
20. ಕಾಂಬೋಡಿಯ ದೇಶದ ಚಾಲ್ತಿ ನಾಣ್ಯದ ಹೆಸರೇನು?
ಉ- ರಿಯಾಲ್
* ರಾಜಧಾನಿ - ನೊಂಪೆನ್
21. ಅಗ್ನಿಶಾಮಕದಲ್ಲಿ ಯಾವ ಅನಿಲವನ್ನು ಬಳಸುತ್ತಾರೆ?
ಉ- ಕಾರ್ಬನ್ ಡೈ ಆಕ್ಸೈಡ್
22. ರಾಜ್ಯದ ಮುಖ್ಯಮಂತ್ರಿಯನ್ನು ಯಾರು ನೇಮಕ ಮಾಡುತ್ತಾರೆ?
ಉ- ರಾಜ್ಯಪಾಲರು
* ರಾಜ್ಯಪಾಲರು ರಾಷ್ಟ್ರಪತಿಗಳಿಂದ ನೇಮಕಗೊಳ್ಳುತ್ತಾರೆ
23. ಲೋಕಸಭೆಯಲ್ಲಿ ಶೂನ್ಯ ವೇಳೆಯನ್ನು ನಿರ್ಧರಿಸುವವರು ಯಾರು?
ಉ- ಸಭಾಪತಿ
24. ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವನ್ನು ಯಾವಾಗ ಸ್ಥಾಪಿಸಲಾಯಿತು?
ಉ- 1993
* ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗದ ಮೊದಲ ಅಧ್ಯಕ್ಷರು - ರಂಗನಾಥ ಮಿಶ್ರ
25. ಕರ್ನಾಟಕ ಏಕೀಕರಣ ಚಳುವಳಿಯನ್ನು ಮೊದಲು ಆರಂಭಿಸಿದವರು ಯಾರು?
ಉ- ಆಲೂರು ವೆಂಕಟರಾವ್
26. ಕನ್ನಡ ಸಾಹಿತ್ಯ ಪರಿಷತ್ ಅನ್ನು ಸ್ಥಾಪಿಸಿದವರು ಯಾರು?
ಉ- ನಾಲ್ವಡಿ ಕೃಷ್ಣರಾಜ ಒಡೆಯರು
* ಸ್ಥಾಪನೆ - 1915
27. ಭಾರತದಲ್ಲಿ ಪೋರ್ಚುಗೀಸರಿಗೆ ಭದ್ರವಾದ ತಳಹದಿ ಹಾಕಿದವರು ಯಾರು ?
ಉ- ಆಲ್ಫಾನ್ಸೋ ಅಲ್ಬುಕರ್ಕ್
28. ಎಷ್ಟು ಬಿಟ್ ಗಳಾದರೆ 1 ಬೈಟ್ (byte) ಆಗುತ್ತದೆ?
ಉ- 8 ಬಿಟ್ಸ್
29. MIME - ಅನ್ನು ವಿಸ್ತರಿಸಿ ಬರೆಯಿರಿ..
ಉ- Multipurpose Internet Mail Extensions
30. HTML - ವಿಸ್ತರಿಸಿ ಬರೆಯಿರಿ..
ಉ- Hypertext Markup Language
31. WAN - ನ ವಿಸ್ತೃತ ರೂಪವೇನು?
ಉ- Wide Area Network
32. (Scientific name of Cucumber) ಸೌತೆಕಾಯಿಯ ವೈಜ್ಞಾನಿಕ ಹೆಸರೇನು?
ಉ- ಕುಕುಮಿಸ್ ಸಟೈವಸ್ (Cucumis Sativus)
33. ಸೇಬುವಿನ ವೈಜ್ಞಾನಿಕ ಹೆಸರೇನು? (Scientific name of apple)
ಉ- ‘ಮಾಲುಸ್' (Malus)
34. 3ನೇ ಕರ್ನಾಟಿಕ್ ಯುದ್ಧವು ಯಾರ ಯಾರ ಮದ್ಯ ನಡೆಯಿತು?
ಉ- ಬ್ರಿಟಿಷರು ಮತ್ತು ಫ್ರೆಂಚರ ನಡುವೆ ನಡೆಯಿತು
35. ಮೊದಲನೇ ಆಂಗ್ಲೋ-ಮೈಸೂರು ಯುದ್ಧವು ಯಾವ ಒಪ್ಪಂದದೊಂದಿಗೆ ಕೊನೆಗೊಂಡಿತು?
ಉ- ಮದ್ರಸ್ ಒಪ್ಪಂದ
36. ಬಿದನೂರಿಗೆ ರಾಜಧಾನಿಯನ್ನು ವರ್ಗಾವಣೆ ಮಾಡಿದ ಇಕ್ಕೇರಿ ಅರಸ ಯಾರು?
ಉ- ವೆಂಕಟಪ್ಪ ನಾಯಕ
37. ‘ರಾಷ್ಟ್ರಗಳ ಸಂಪತ್ತು' (Wealth of Nations). ಗ್ರಂಥದ ಕರ್ತೃ ಯಾರು?
ಉ- ಆಡಂ ಸ್ಮಿತ್
38. ನೈರುತ್ಯ ರೈಲ್ವೆಯ ಪ್ರಧಾನ ಕಛೇರಿ ಎಲ್ಲಿದೆ?
ಉ- ಹುಬ್ಬಳ್ಳಿ
39. ‘ಪ್ರಜಾಪ್ರಭುತ್ವದ ಮನೆ' ಎಂದು ಯಾವ ದೇಶವನ್ನು ಕರೆಯಲಾಗುತ್ತದೆ?
ಉ- ಅಮೆರಿಕ
40. ಮೇಘಾಲಯದ ರಾಜಧಾನಿ ಯಾವುದು?
ಉ- ಶಿಲ್ಲಾಂಗ್
41. ಭಾರತದ ಮೊಟ್ಟ ಮೊದಲ ಮಹಿಳಾ ರಾಜ್ಯಪಾಲರು ಯಾರು?
ಉ- ಸರೋಜಿನಿ ನಾಯ್ಡು
42. ಅಂತರಾಷ್ಟ್ರೀಯ ಕಾರ್ಮಿಕ ಸಂಘಟನೆಯ ಕೇಂದ್ರ ಕಛೇರಿ ಎಲ್ಲಿದೆ?
ಉ- ಜಿನಿವಾ (1919)
43. ಭಾರತದ ರಾಜಧಾನಿಯನ್ನು ಕಲ್ಕತ್ತಾದಿಂದ ದೆಹಲಿಗೆ ಯಾವಾಗ ಸ್ಥಳಾಂತರಿಸಲಾಯಿತು?
ಉ- 1911
44. ದಾಂಡೇಲಿ ವನ್ಯಜೀವಿ ಅಭಯಾರಣ್ಯ ಭಾರತದ ಯಾವ ರಾಜ್ಯದಲ್ಲಿ ಕಂಡುಬರುತ್ತದೆ?
ಉ- ಕರ್ನಾಟಕದ ಉತ್ತರ ಕನ್ನಡ ಜಿಲ್ಲೆಯಲ್ಲಿ
45. ಜೋಗ ಜಲಪಾತ ಕರ್ನಾಟಕದ ಯಾವ ಜಿಲ್ಲೆಯಲ್ಲಿ ಕಂಡು ಬರುತ್ತದೆ?
ಉ- ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕು
46. ಗಾಂಧೀಜಿಯವರು ‘ಮಾಡು ಇಲ್ಲವೇ ಮಡಿ' ಎನ್ನುವ ಘೋಷಣೆಯನ್ನು ಯಾವ ಚಳುವಳಿಯಲ್ಲಿ ನೀಡಿದರು?
ಉ- ಕ್ವಿಟ್ ಇಂಡಿಯಾ ಚಳುವಳಿ
47. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ಸನ್ನು ಯಾವಾಗ ಸ್ಥಾಪಿಸಲಾಯಿತು?
ಉ- ಕ್ರಿ.ಶ. 1885
48. ಮೌರ್ಯರ ರಾಜಧಾನಿ ಯಾವುದಾಗಿತ್ತು?
ಉ- ಪಾಟಲಿಪುತ್ರ
49. ‘ಹೋರಾಟದ ಹಾದಿ' ಇದು ಯಾರ ಆತ್ಮಕಥನವಾಗಿದೆ?
ಉ- ಡಾ. ಎಚ್. ನರಸಿಂಹಯ್ಯ
* ಸ್ವಾತಂತ್ರ ಹೋರಾಟಗಾರರಾಗಿ ದೇಶಕ್ಕೆ ದೊಡ್ಡ ಕೊಡುಗೆ ನೀಡಿದ ಇವರು ಮೂಲತಃ ವಿಜ್ಞಾನ ಕ್ಷೇತ್ರದವರು, ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ಹೊಸೂರು ಎಂಬಲ್ಲಿ ಜನಿಸಿದರು
50. ‘ದಿ ಗಾಡ್ ಆಫ್ ಸ್ಮಾಲ್ ಥಿಂಗ್ಸ್' (The God of small things) ಎಂಬ ಪುಸ್ತಕವನ್ನು ಬರೆದವರು ಯಾರು?
ಉ- ಅರುಂಧತಿ ರಾಯ್
51. ಯಾವ ದರ್ಪಣದಲ್ಲಿ ವಿಕೇಂದ್ರಿಕರಣ ಉಂಟಾಗುತ್ತದೆ ?
ಉ- ನಿಮ್ಮ ದರ್ಪಣ
52. ಭಾರತದ ರಾಷ್ಟ್ರಪತಿ ಹುದ್ದೆಗೆ ಸ್ಪರ್ಧಿಸಲು ಇರಬೇಕಾದ ಕನಿಷ್ಠ ವಯಸ್ಸು ಎಷ್ಟು?
ಉ- 35ವರ್ಷ
53. ಕರ್ನಾಟಕದಲ್ಲಿ ಯಾವ ಜಿಲ್ಲೆಯಲ್ಲಿ ಹೆಚ್ಚಾಗಿ ಕಾಫಿ ಬೆಳೆಯುತ್ತಾರೆ?
ಉ- ಚಿಕ್ಕಮಗಳೂರು
54. 23½° ಉತ್ತರ ಅಕ್ಷಾಂಶವನ್ನು ಏನೆಂದು ಕರೆಯುತ್ತಾರೆ?
ಉ- ಕರ್ಕಾಟಕ ಸಂಕ್ರಾಂತಿ ವೃತ್ತ
55. 23½° ದಕ್ಷಿಣ ಅಕ್ಷಾಂಶವನ್ನು ಯಾವ ಹೆಸರಿನಿಂದ ಕರೆಯುತ್ತಾರೆ?
ಉ- ಮಕರ ಸಂಕ್ರಾಂತಿ ವೃತ್ತ
56. ಪಾದರಸದ ಅದಿರು ಯಾವುದು?
ಉ- ಸಿನಬಾರ್
0 ಕಾಮೆಂಟ್ಗಳು